ಆ.೨೬ರಂದು ಶಂಕರ ದೃಷ್ಠಿ ಕೇಂದ್ರ ಉದ್ಘಾಟನೆ
ಭದ್ರಾವತಿ : ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ೧೨ನೇ ಶಂಕರ ದೃಷ್ಠಿ ಕೇಂದ್ರ ನಗರದ ಭೂತನಗುಡಿ, ಹಳೇ ಸಂತೆ ಮೈದಾನ ರಸ್ತೆಯ ೨ನೇ ಕ್ರಾಸ್, ಎಸ್‌ಎಲ್‌ಎನ್ ಆಸ್ಪತ್ರೆ ಎದುರು ಆ.೨೬ರ ಬುಧವಾರ ಬೆಳಿಗ್ಗೆ ನೂತನವಾಗಿ ಉದ್ಘಾಟನೆಗೊಳ್ಳುತ್ತಿದೆ.
ವಿಐಎಸ್‌ಎಲ್ ಕಾರ್ಖಾನೆ ಮಾಜಿ ಉದ್ಯೋಗಿ, ಚಲನಚಿತ್ರ ನಟ ದೊಡ್ಡಣ್ಣ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಶಮಾ ಬೇಗಂ ಫಕ್ರುದ್ದಿನ್, ದಾನಿ ವಿಮಲಾ ಶಿವಕುಮಾರ್ ಸೇರಿದಂತೆ ಇನ್ನಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.
