ಭದ್ರೆಯ ಸಾಧಕ ರತ್ನಗಳು ಕೃತಿ ಲೋಕಾರ್ಪಣೆ
ಭದ್ರೆಯ ಸಾಧಕ ರತ್ನಗಳು ಕೃತಿ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಭವನದಲ್ಲಿ ಆಯೋಜಿಸಲಾಗಿತ್ತು. ಲಿಮ್ಕಾ ದಾಖಲೆ ಕುಂಚ ಕಲಾವಿದ ಗುರು ಭದ್ರಾವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ : ಭದ್ರೆಯ ಸಾಧಕ ರತ್ನಗಳು ಕೃತಿ ಲೋಕಾರ್ಪಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಭವನದಲ್ಲಿ ಆಯೋಜಿಸಲಾಗಿತ್ತು.
ತಾಲೂಕಿನ ಶಂಕರಘಟ್ಟ ಶ್ರೀಶಾ ಕಲಾವೇದಿಕೆ ಮತ್ತು ಲಯನ್ಸ್ ಹಾಗು ಲಿಯೊ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಡಿ. ಶಂಕರಮೂರ್ತಿ ಉದ್ಘಾಟಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಆರ್. ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಆಶಾ ಶ್ರೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಭಾರ್ಗವಿ ಪಿ. ಬೆಂಗಳೂರು ಕೃತಿ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ, ಕಲಾವಿದ ಗುರು ಭದ್ರಾವತಿ, ಡಿ. ಗಣೇಶ್, ಡಾ. ವೀಣಾಭಟ್, ಲಯನ್ಸ್ ನಾಗರಾಜ್, ದೇವರಾಜ್, ಸಾಹಿತಿ ಕಾಂತಪ್ಪ, ರಂಗಭೂಮಿ ಕಲಾವಿದರಾದ ವೈ.ಕೆ ಹನುಮಂತಯ್ಯ, ಕಮಲಾಕರ, ಪ್ರಕಾಶ್, ಲಯನ್ಸ್ ಮಂಜುನಾಥ ಗೌಡ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಆಸಕ್ತರು ಪಾಲ್ಗೊಂಡಿದ್ದರು. ಗ್ಯಹಲವರು ಭಾಗವಹಿಸಿದ್ದರು.
