ಆ.೧೫ರಂದು ನಾದ ಮಣಿನಾಲ್ಕೂರುರವರ ಕತ್ತಲ ಹಾಡು... ಕಾರ್ಯಕ್ರಮ
ಭದ್ರಾವತಿ: ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಆ.೧೫ರ ೮೦ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಸಂಜೆ ೬.೩೦ಕ್ಕೆ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ನಾದ ಮಣಿನಾಲ್ಕೂರು ಇವರಿಂದ ಕತ್ತಲ ಹಾಡು... ಕಾರ್ಯಕ್ರಮ ಆಯೋಜಿಸಲಾಗಿದೆ.
ಉಕ್ಕಿನ ನಗರದಲ್ಲಿ ನಾದ ಮಣಿನಾಲ್ಕೂರು ಅವರು ನಡೆಸಿಕೊಡುತ್ತಿರುವ ೨ನೇ ಕಾರ್ಯಕ್ರಮ ಇದಾಗಿದ್ದು, ವಿಶೇಷ ಎಂದರೆ ಕಾರ್ಯಕ್ರಮವನ್ನು ಮಹಿಳಾ ಪೌರಕಾರ್ಮಿಕರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಕೋರಿದ್ದಾರೆ.
Ananthakumara, Reporter, Kannadaprabha,
NDK/31A, Near, Sri Satyasayi Baba school,
Newtown, Bhadravathi:-577301(Tq)
Shimoga(Dis)
Mob: 9738801478
: 9482007466