ನೀರಾವರಿ ಇಲಾಖೆ ಹೊರಗುತ್ತಿಗೆ ಸೌಡಿ ನೌಕರರಿಗೆ ೫ ತಿಂಗಳಿಂದ ವೇತನ, ಪಿ.ಎಫ್, ಇಎಸ್‌ಐ ಇಲ್ಲ
ಸುಮಾರು ೩೫೦ ಹೊರಗುತ್ತಿಗೆ ಸೌಡಿ ನೌಕರರಿಂದ ಬಿಆರ್‌ಎಲ್‌ಬಿಸಿ ಕಛೇರಿ ಮುಂಭಾಗ ಮುಷ್ಕರ
ವೇತನ ಮತ್ತು ಪಿ.ಎಫ್ ಹಾಗು ಇಎಸ್‌ಐ ವಂತಿಕೆ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ.೪ರ ಭದ್ರಾವತಿ ತಾಲೂಕಿನ ಬಿಆರ್‌ಎಲ್‌ಬಿಸಿ ವಿಭಾಗದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ ಮುಂಭಾಗ ಮಂಗಳವಾರ ಇಲಾಖೆಯ ಹೊರಗುತ್ತಿಗೆ ಸೌಡಿ ನೌಕರರು ಮುಷ್ಕರ ನಡೆಸಿದರು.
ಭದ್ರಾವತಿ : ವೇತನ ಮತ್ತು ಪಿ.ಎಫ್ ಹಾಗು ಇಎಸ್‌ಐ ವಂತಿಕೆ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ.೪ರ ತಾಲೂಕಿನ ಬಿಆರ್‌ಎಲ್‌ಬಿಸಿ ವಿಭಾಗದ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ ಮುಂಭಾಗ ಮಂಗಳವಾರ ಇಲಾಖೆಯ ಹೊರಗುತ್ತಿಗೆ ಸೌಡಿ ನೌಕರರು ಮುಷ್ಕರ ನಡೆಸಿದರು.
ಬಿಆರ್‌ಎಲ್‌ಬಿಸಿ ವಿಭಾಗದ ಬಿಆರ್‌ಪಿ-ನಂ.೧, ಡಿಬಿ ಹಳ್ಳಿ-ನಂ.೨ ಹಾಗು ಭದ್ರಾವತಿ-ನಂ.೩ರಲ್ಲಿ ಒಟ್ಟು ಸುಮಾರು ೩೫೦ ಹೊರಗುತ್ತಿಗೆ ಸೌಡಿ ನೌಕರರು ಸುಮಾರು ೨-೩ ದಶಕಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಸುಮಾರು ೫ ತಿಂಗಳಿನಿಂದ ಈ ನೌಕರರಿಗೆ ವೇತನ ಮತ್ತು ಪಿಎಪ್ ಹಾಗು ಇಎಸ್‌ಐ ವಂತಿಕೆ ಪಾವತಿಸಿರುವುದಿಲ್ಲ. ವೇತನ ಇಲ್ಲದೆ ಬಡ ನೌಕರರಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಕ್ಷಣ ವೇತನ ಮತ್ತು ಪಿಎಫ್ ಹಾಗು ಇಎಸ್‌ಐ ವಂತಿಕೆ ಪಾವತಿಸುವಂತೆ ಕಾರ್ಯಪಾಲಕ ಇಂಜಿನಿಯರ್‌ರವರಿಗೆ ಆಗ್ರಹಿಸಿದ್ದಾರೆ.
ಹೊರಗುತ್ತಿಗೆ ಸೌಡಿ ನೌಕರರ ಹಲವಾರು ಬೇಡಿಕೆಗಳಿದ್ದು, ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಬಹುತೇಕ ಬೇಡಿಕೆಗಳು ಬಾಕಿ ಉಳಿದಿವೆ ಎಂದು ಸಂಘಟನೆ ಪ್ರಮುಖರು ಪತ್ರಿಕೆಯೊಂದಿಗೆ ಅಳಲು ತೋರ್ಪಡಿಸಿಕೊಂಡಿದ್ದಾರೆ. ವೇತನ ಮತ್ತು ಪಿ.ಎಫ್ ಹಾಗು ಇಎಸ್‌ಐ ವಂತಿಕೆ ಪಾವತಿಸುವವರೆಗೂ ಹೋರಾಟ ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.

.jpg)