ಆಂಜಿಯೋಪ್ಲಾಸ್ಟಿ ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋದಿಂದ ೫೦ ಸಾವಿರ ರು. ಧನಸಹಾಯ
ಭದ್ರಾವತಿಯಲ್ಲಿ ಕ್ಯಾಂಪ್ಕೋ ಸದಸ್ಯ ಎಂ.ಪಿ ರಮೇಶ್‌ರವರ ಹೃದಯ ಚಿಕಿತ್ಸೆಗೆ ೫೦ ಸಾವಿರ ರು. ಧನ ಸಹಾಯ ಕ್ಯಾಂಪ್ಕೋ ವತಿಯಿಂದ ವಿತರಿಸಿ ಶೀಘ್ರ ಆರೋಗ್ಯ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಲಾಯಿತು.
ಭದ್ರಾವತಿ: ಕ್ಯಾಂಪ್ಕೋ ಸದಸ್ಯ ಎಂ.ಪಿ ರಮೇಶ್‌ರವರ ಹೃದಯ ಚಿಕಿತ್ಸೆಗೆ ೫೦ ಸಾವಿರ ರು. ಧನ ಸಹಾಯ ಕ್ಯಾಂಪ್ಕೋ ವತಿಯಿಂದ ವಿತರಿಸಿ ಶೀಘ್ರ ಆರೋಗ್ಯ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವಂತೆ ಸಲಹೆ ನೀಡಲಾಯಿತು.
ರಮೇಶ್‌ರವರ ನಿವಾಸಕ್ಕೆ ತೆರಳಿ ಕ್ಯಾಂಪ್ಕೋದ ಸಾಂತ್ವನ (ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ) ಯೋಜನೆಯಡಿ ಮಂಜೂರಾದ ೫೦,೦೦೦ ರು. ಧನ ಸಹಾಯ ಕ್ಯಾಂಪ್ಕೋದ ನಿರ್ದೇಶಕ ಎಚ್.ಎಂ ರಾಘವೇಂದ್ರ ಹಸ್ತಾಂತರಿಸಿದರು
ಶಿವಮೊಗ್ಗ ಪ್ರಾದೇಶಿಕ ವ್ಯವಸ್ಥಾಪಕ ವಿಘ್ನೇಶ್ವರ ಹೆಗ್ಡೆ, ಕ್ಯಾಂಪ್ಕೋ ಭದ್ರಾವತಿ ಶಾಖಾ ವ್ಯವಸ್ಥಾಪಕ ಶ್ರೀಧರ ಗಿಂಡೆ ಹಾಗೂ ಕೆ. ತಾರಾನಾಥ್ ಮತ್ತು ರಮೇಶ್‌ರವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
