ಸಹಕಾರ ಮಹಾಮಂಡಳಿ ನೂತನ ನಿರ್ದೇಶಕ ಶಿವಕುಮಾರ್‌ಗೆ ರ್‍ಯಾಮ್ಕೋಸ್ ಸನ್ಮಾನ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿರುವ ಭದ್ರಾವತಿ ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಬಿ.ಕೆ ಶಿವಕುಮಾರ್ ಅವರನ್ನು ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣಾ ಸಹಕಾರ ಸಂಘ ನಿಯಮಿತ (ರ್‍ಯಾಮ್ಕೋಸ್) ದಿಂದ ಸನ್ಮಾನಿಸಲಾಯಿತು.
ಭದ್ರಾವತಿ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿರುವ ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷ ಬಿ.ಕೆ ಶಿವಕುಮಾರ್ ಅವರನ್ನು ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣಾ ಸಹಕಾರ ಸಂಘ ನಿಯಮಿತ (ರ್‍ಯಾಮ್ಕೋಸ್) ದಿಂದ ಸನ್ಮಾನಿಸಲಾಯಿತು.
ನಗರದಲ್ಲಿ ರ್‍ಯಾಮ್ಕೋಸ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಶಿವಕುಮಾರ್ ಅವರು ಅದರ ಷೇರುದಾರರಾಗಿದ್ದು, ಅಲ್ಲದೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅದರ ಅಭಿವೃದ್ಧಿಗೆ ನೆರವಾಗುತ್ತಿದ್ದಾರೆ. ಇದೀಗ ಶಿವಕುಮಾರ್ ರವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ನಿರ್ದೇಶಕರಾಗಿ ನೂತನವಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ರ್‍ಯಾಮ್ಕೋಸ್ ತನ್ನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿತು.
ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಉಪಾಧ್ಯಕ್ಷ ನೂರ್ ಬೇಗ್, ನಿರ್ದೇಶಕರಾದ ಹನುಮಂತಪ್ಪ, ಬಿ.ಜಿ ಜಗದೀಶ್ ಗೌಡ್, ಎಚ್.ಎಸ್ ಮಂಜುನಾಥೇಶ್ವರ, ಎ.ಎಂ ಹರ್ಷ, ಅಣ್ಣಪ್ಪ, ಆರ್. ಶ್ರೀನಿವಾಸ್, ಎಂ.ಎಸ್ ಬಸವರಾಜಪ್ಪ, ಎಚ್.ಎಸ್ ಸಂಜೀವಕುಮಾರ್, ಎ.ಜಿ ವಿಜಯಕುಮಾರ್, ಲಲಿತಮ್ಮ, ಎನ್.ಪಿ ಅನುಸೂಯಮ್ಮ, ಕೆ.ವಿ ರುದ್ರಪ್ಪ, ಎಸ್.ಎಂ ಹಾಲೇಶಪ್ಪ ಹಾಗು ಸದಸ್ಯರು ಮತ್ತು ಕಛೇರಿ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
