ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಸೌಹಾರ್ದ ಕೂಟಕ್ಕೆ ಮೆಚ್ಚುಗೆ
ಭದ್ರಾವತಿ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಈದ್ ಮಿಲಾದ್ ಹಬ್ಬ ಸಂಭ್ರಮದ ಆಚರಣೆ ಹಿನ್ನಲೆಯಲ್ಲಿ ಶನಿವಾರ ಸೌಹಾರ್ದ ಕೂಟ ಏರ್ಪಡಿಸಲಾಗಿತ್ತು.
ಭದ್ರಾವತಿ: ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಈದ್ ಮಿಲಾದ್ ಹಬ್ಬ ಸಂಭ್ರಮದ ಆಚರಣೆ ಹಿನ್ನಲೆಯಲ್ಲಿ ಶನಿವಾರ ಸೌಹಾರ್ದ ಕೂಟ ಏರ್ಪಡಿಸಲಾಗಿತ್ತು.
ಸಂಘದ ಅಧ್ಯಕ್ಷ ಎಂ. ಪುಟ್ಟಸ್ವಾಮಿಗೌಡರವರ ನೇತೃತ್ವದಲ್ಲಿ ನಗರದ ಉಬ್ಳೆಬೈಲು ರಸ್ತೆ ಮೆಸ್ಕಾಂ ಕಛೇರಿ ಆವರಣದಲ್ಲಿರುವ ಸಂಘದ ಕಛೇರಿಯಲ್ಲಿ ಇದೆ ಮೊದಲ ಬಾರಿಗೆ ಹಿಂದೂ ಮತ್ತು ಮುಸ್ಲಿಂ ಭಾವೈಕೈತೆ, ಸೌಹಾರ್ದತೆ ಸಂಕೇತವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗುತ್ತಿಗೆದಾರರು ಹಾಗು ಮೆಸ್ಕಾಂ ಸಿಬ್ಬಂದಿಗಳು ಮಧ್ಯಾಹ್ನ ಪರಸ್ಪರ ಹಬ್ಬದ ಶುಭಾಶಯ ಹಂಚಿಕೊಳ್ಳುವ ಮೂಲಕ ಆಹಾರ ಸೇವಿಸಿದರು. ಈ ಕಾರ್ಯಕ್ರಮದ ಆಯೋಜನೆಗೆ ಉತ್ತಮ ಪ್ರಶಂಸೆ ವ್ಯಕ್ತವಾಯಿತು.
ಸಂಘದಲ್ಲಿ ಒಟ್ಟು ೮೦ ಮಂದಿ ಗುತ್ತಿಗೆದಾರರು ಸದಸ್ಯರಾಗಿದ್ದು, ಗುತ್ತಿಗೆದಾರರ ಸಮಸ್ಯೆಗಳಿಗೆ ಸಂಘ ಪೂರಕವಾಗಿ ಸ್ಪಂದಿಸುವ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ತಾಲೂಕು ಸಂಘದ ಮಾಜಿ ಅಧ್ಯಕ್ಷ, ಪ್ರಸ್ತುತ ಜಿಲ್ಲಾ ಸಂಘದ ಉಪಾಧ್ಯಕ್ಷ ಶ್ರೀನಿವಾಸ್, ಕೇಂದ್ರ ಸಮಿತಿ ಮಾಜಿ ಸದಸ್ಯ ಮಹಾಲಿಂಗೇಗೌಡ್ರು, ತಾಲೂಕು ಸಂಘದ ಉಪಾಧ್ಯಕ್ಷ ರವಿಕುಮಾರ್, ಮಾಜಿ ಅಧ್ಯಕ್ಷ ಮಹಾದೇವಣ್ಣ, ರಸುಲ್ ಖಾನ್, ಮುಕ್‌ಬುಲ್, ಜಬ್ಬಿ ಹಾಗು ಗುಲಾಬ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
