ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಪ್ರಥಮ, ದ್ವಿತೀಯ ಬಹುಮಾನ
ಭದ್ರಾವತಿ ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯ ಸಾಯಿ ಜ್ಞಾನಪೀಠ(ಸಿಬಿಎಸ್‌ಇ) ಶಾಲೆ ಹಾಗು ಈಶ್ವರಮ್ಮ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ತಾಲೂಕು ಪ್ರೌಢಶಾಲಾ ಮಕ್ಕಳ ಕನ್ನಡ ದೇಶ ಭಕ್ತಿ ಗೀತೆಗಳ ಸಮೂಹ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಹಾಗು ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಭದ್ರಾವತಿ : ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯ ಸಾಯಿ ಜ್ಞಾನಪೀಠ(ಸಿಬಿಎಸ್‌ಇ) ಶಾಲೆ ಹಾಗು ಈಶ್ವರಮ್ಮ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ತಾಲೂಕು ಪ್ರೌಢಶಾಲಾ ಮಕ್ಕಳ ಕನ್ನಡ ದೇಶ ಭಕ್ತಿ ಗೀತೆಗಳ ಸಮೂಹ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಹಾಗು ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಅಪ್ಪರ್‌ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್, ಅನನ್ಯ ಹ್ಯಾಪಿ ಹಾರ್ಟ್ಸ್, ಅನನ್ಯ ಪ್ರಾಥಮಿಕ ಹಾಗು ಪ್ರೌಢಶಾಲೆ ವತಿಯಿಂದ ದಿವಂಗತರಾದ ಸಂಗೀತ ಶಿಕ್ಷಕಿ ಮುರುಗಮ್ಮ ಮತ್ತು ಶಿಕ್ಷಕಿ ವೆಂಕಟ ಲಕ್ಷ್ಮಮ್ಮನವರ ಸ್ಮರಣಾರ್ಥ ತಾಲೂಕು ಪ್ರೌಢಶಾಲಾ ಮಕ್ಕಳಿಗೆ ಆಯೋಜಿಸಲಾಗಿದ್ದ ಕನ್ನಡ ದೇಶಭಕ್ತಿ ಗೀತೆಗಳ ಸಮೂಹ ಗಾಯನ ಸ್ಪರ್ಧೆಯಲ್ಲಿ ಮಕ್ಕಳು ಉತ್ತಮ ಗಾಯನದ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸಿ ಪ್ರಥಮ ಬಹುಮಾನ ಪಾರಿತೋಷಕ ಮತ್ತು ೫ ಸಾವಿರ ರು. ನಗದು ತಮ್ಮದಾಗಿಸಿಕೊಂಡಿದ್ದು, ಅಲ್ಲದೆ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಈಶ್ವರಮ್ಮ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಬಹುಮಾನ ಪಾರಿತೋಷಕ ಮತ್ತು ೩ ಸಾವಿರ ರು. ನಗದು ತಮ್ಮದಾಗಿಸಿಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು:
ಶ್ರೀ ಸತ್ಯ ಸಾಯಿ ಜ್ಞಾನಪೀಠ(ಸಿಬಿಎಸ್‌ಇ) ಶಾಲೆಯ ವಿದ್ಯಾರ್ಥಿಗಳಾದ ವಿ. ಸಾನ್ವಿ, ಎ.ಬಿ ಸಿಧೀಕ್ಷಾ, ಆರ್. ಕೀರ್ತನಾ ಮತ್ತು ಅಮೂಲ್ಯ ಪಿ. ಶೇಠ್ ಹಾಗು ಈಶ್ವರಮ್ಮ ಆಂಗ್ಲ ಪ್ರೌಢಶಾಲೆಯ ಆರ್. ಸಹನಾ, ಎಂ.ಆರ್ ದಿಶಾ, ಜಿ. ವಿದ್ಯಾಲಕ್ಷ್ಮೀ ಮತ್ತು ಎಂ. ರಿಷಿಕಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ವಿಜೇತ ಮಕ್ಕಳಿಗೆ ವಿದ್ಯಾಸಂಸ್ಥೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗು ಸಿಬ್ಬಂದಿ ವೃಂದದವರು ಅಭಿನಂದಿಸಿದ್ದಾರೆ.
