ಉಕ್ಕಿನ ನಗರದಲ್ಲಿ ಶಂಕರ ದೃಷ್ಠಿ ಕೇಂದ್ರ ಉದ್ಘಾಟನೆ


ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ಭದ್ರಾವತಿ ನಗರದ ಭೂತನಗುಡಿ, ಹಳೇ ಸಂತೆ ಮೈದಾನ ರಸ್ತೆ, 3ನೇ ಕ್ರಾಸ್, ಎಸ್ಎಲ್ಎನ್ ಆಸ್ಪತ್ರೆ ಮುಂಭಾಗ ನೂತನವಾಗಿ ಶಂಕರ ದೃಷ್ಠಿ ಕೇಂದ್ರ ನಿರ್ಮಿಸಲಾಗಿದ್ದು, ವಿಐಎಸ್ಎಲ್ ಕಾರ್ಖಾನೆ ಮಾಜಿ ಉದ್ಯೋಗಿ, ಚಲನಚಿತ್ರ ನಟ ದೊಡ್ಡಣ್ಣ ಕೇಂದ್ರವನ್ನು ಉದ್ಘಾಟಿಸಿದರು.
    ಭದ್ರಾವತಿ : ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ವತಿಯಿಂದ ನಗರದ ಭೂತನಗುಡಿ, ಹಳೇ ಸಂತೆ ಮೈದಾನ ರಸ್ತೆ, 3ನೇ ಕ್ರಾಸ್, ಎಸ್ಎಲ್ಎನ್ ಆಸ್ಪತ್ರೆ ಮುಂಭಾಗ ನೂತನವಾಗಿ ಶಂಕರ ದೃಷ್ಠಿ ಕೇಂದ್ರ ನಿರ್ಮಿಸಲಾಗಿದ್ದು, ವಿಐಎಸ್ಎಲ್ ಕಾರ್ಖಾನೆ ಮಾಜಿ ಉದ್ಯೋಗಿ, ಚಲನಚಿತ್ರ ನಟ ದೊಡ್ಡಣ್ಣ ಕೇಂದ್ರವನ್ನು ಉದ್ಘಾಟಿಸಿದರು.
    ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ನೇತ್ರ ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿರುವ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಇದೀಗ ಉಕ್ಕಿನ ನಗರದಲ್ಲಿ ದೃಷ್ಠಿ ಕೇಂದ್ರ ತೆರೆಯುವ ಮೂಲಕ ನಗರ ಹಾಗು ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ನೇತ್ರ ಚಿಕಿತ್ಸಾ ಸೇವೆಗಳನ್ನು ಸಮೀಪದಲ್ಲೇ ಒದಗಿಸಲು ಮುಂದಾಗಿದೆ. ಈ ಕೇಂದ್ರದಲ್ಲಿ ಸಮಗ್ರ ಕಣ್ಣಿನ ತಪಾಸಣೆ, ದೃಷ್ಟಿ ಪರೀಕ್ಷೆ, ಟೆಲಿ-ಆಫ್ತಾಲ್ಮಾಲಜಿ ಸಲಹಾ ಸೇವೆಗಳು, ಕನ್ನಡಕ ವಿತರಣೆ ಹಾಗೂ ಅಗತ್ಯವಿರುವವರಿಗೆ ಹೆಚ್ಚಿನ ಚಿಕಿತ್ಸೆಗೆ ಮಾರ್ಗದರ್ಶನ ಮತ್ತು ರೆಫರಲ್ ಸೌಲಭ್ಯಗಳನ್ನು ಒದಗಿಸುತ್ತಿದೆ. ಈ ಉಪಕ್ರಮದ ಮೂಲಕ ಶಂಕರ ಕಣ್ಣಿನ ಆಸ್ಪತ್ರೆಯು ತಡೆಯಬಹುದಾದ ಅಂಧತ್ವವನ್ನು ಕಡಿಮೆ ಮಾಡುವ ಹಾಗೂ ಸಮಯೋಚಿತ ಚಿಕಿತ್ಸೆಯನ್ನು ಜನರಿಗೆ ತಲುಪಿಸುವ ತನ್ನ ಧ್ಯೇಯವನ್ನು ಮುಂದುವರಿಸುತ್ತಿದೆ.
    ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಶಮಾ ಬೇಗಂ ಫಕ್ರುದ್ದೀನ್, ದಾನಿ ವಿಮಲಾ ಶಿವಕುಮಾರ್, ಡಾ. ನರೇಂದ್ರ ಭಟ್ ಮತ್ತು ಡಾ. ವೃಂದಾ ಭಟ್, ಡಾ. ಎಂ.ಎಚ್ ಮಲ್ಲಿಕಾರ್ಜುನ, ದೃಷ್ಠಿ ಕೇಂದ್ರದ ಮುಖ್ಯಸ್ಥೆ ಎಸ್. ಅನಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.