೮೦ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನೆನನಿಗಾಗಿ `ಕತ್ತಲ ಹಾಡು...' ಕಾರ್ಯಕ್ರಮ

ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಆಯೋಜನೆ 


ಭದ್ರಾವತಿ ನಗರದ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ ಈ ಬಾರಿ ೮೦ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಗಾಯಕ ನಾದ ಮಣಿನಾಲ್ಕೂರು ಇವರ `ಕತ್ತಲ ಹಾಡು...' ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿದೆ.  
    ಭದ್ರಾವತಿ: ನಗರದ ಜನ್ನಾಪುರ ಡಾ. ಬಿ.ಆರ್ ಅಂಬೇಡ್ಕರ್ ಜಾನಪದ ಕಲಾ ಸಂಘ ಈ ಬಾರಿ ೮೦ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ಗಾಯಕ ನಾದ ಮಣಿನಾಲ್ಕೂರು ಇವರ `ಕತ್ತಲ ಹಾಡು...' ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿದೆ. 
    ಕಲಾ ಸಂಘದಿಂದ ೨ನೇ ಬಾರಿಗೆ ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಾದ ಮಣಿನಾಲ್ಕೂರು ಇವರ `ಕತ್ತಲ ಹಾಡು...' ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರಸಭೆ ಪೌರಕಾರ್ಮಿಕರಾದ ಪುಷ್ಪಮ್ಮ ಚಂಡೆ ವಾದ್ಯ ನುಡಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
    `ಕತ್ತಲು ಹಾಡು...' ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಂ.ಜಿ ರಾಜಣ್ಣ ಮಾತನಾಡಿ, ವಿಶಿಷ್ಟ ಕಾರ್ಯಕ್ರಮ ಆಯೋಜನೆ ಮಾಡಿರುವ ಕಲಾ ಸಂಘದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ನಡೆಯುವಂತಾಗಲಿ ಎಂದು ಆಶಿಸಿದರು. 


    ಪೌರಕಾರ್ಮಿಕರಾದ ಲಕ್ಷ್ಮಮ್ಮ ಸಂಜೀವ, ರೋಟರಿ ಕ್ಲಬ್ ಅಧ್ಯಕ್ಷ ಎಂ. ನಿರಂಜನ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಕಲಾಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಟಿ. ರಘುನಾಯ್ಕ ಪ್ರಾರ್ಥಿಸಿ, ಎನ್ ಕದರಿ ನರಸಿಂಹಯ್ಯ ಸ್ವಾಗತಿಸಿದರು. ರಂಗಕರ್ಮಿ ಡಾ. ಸಾಸ್ವೇಹಳ್ಳಿ ಸತೀಶ್ ಕಾರ್ಯಕ್ರಮ ನಿರೂಪಿಸಿದರು. 
    ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಹಿರಿಯ ರಂಗ ಕಲಾವಿದ ಕೆ.ಎಸ್. ರವಿಕುಮಾರ್, ಜೆ. ಅಭಿನವ, ಜಿ. ರವಿಕುಮಾರ್, ಬಿ. ಷಣ್ಮುಖಪ್ಪ,  ಬಿ. ಕಮಲಾಕರ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ರಂಗ ಕಲಾವಿದರು, ಕಲಾಸಕ್ತರು ಭಾಗವಹಿಸಿದ್ದರು.