ಕೃಷಿಕ ಸಮಾಜದ ಅಧ್ಯಕ್ಷರಾಗಿ ದೇವರಾಜ್ ಸಿ. ಪಟೇಲ್ ಆಯ್ಕೆ
ಭದ್ರಾವತಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ನವಿಲೆ ಬಸವಾಪುರದ ದೇವರಾಜ್ ಸಿ. ಪಟೇಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭದ್ರಾವತಿ : ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ನವಿಲೆ ಬಸವಾಪುರದ ದೇವರಾಜ್ ಸಿ. ಪಟೇಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದುವರೆಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಹನುಮಂತಾಪುರದ ಎಚ್.ಎನ್ ನಾಗರಾಜ್‌ರವರು ಜಿಲ್ಲಾಧ್ಯಕ್ಷರಾಗಿ ನೇಮಕವಾದ ಹಿನ್ನಲೆಯಲ್ಲಿ ದೇವರಾಜ್ ಸಿ. ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ. ಪಟೇಲ್‌ರವರು ಈಗಾಗಲೇ ಹಲವಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನೂತನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.
ರಾಮಕೃಷ್ಣ ಮೇಸ್ತ, ಮೌನೇಶ್ವರ, ಸುರೇಶ್, ಪರಮೇಶ್, ಮೋಹನ್, ಚರಣ್ ರಾಜ್ ಪಟೇಲ್, ಶಿವರಾಜ್ ಪಟೇಲ್, ಶಶಿಕುಮಾರ್, ರಾಷ್ಟ್ರ ಭಕ್ತ ಬಳಗದ ಎಂ. ಪ್ರಭಾಕರ್, ಬಿ.ಎಸ್ ನಾರಾಯಣಪ್ಪ, ರವಿಚಂದ್ರನ್, ರಾಮನಾಥ್ ಬರ್ಗೆ, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ನೂತನ ಅಧ್ಯಕ್ಷ ಪಟೇಲ್ ಅವರನ್ನು ಅಭಿನಂದಿಸಿದ್ದಾರೆ.
