ಶಾಲೆಯಲ್ಲಿಯೇ ಕುಸಿದು ಬಿದ್ದು ೮ನೇ ತರಗತಿ ವಿದ್ಯಾರ್ಥಿನಿ ಸಾವು


    ಭದ್ರಾವತಿ : ಮಾಚೇನಹಳ್ಳಿ ಹಾಲಿನ ಡೈರಿ ಸಮೀಪದ ಮದರ್ ತೆರೇಸಾ ಕಿವುಡು ಮತ್ತು ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿನಿಯೋರ್ವಳು ಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. 
    ೮ನೇ ತರಗತಿ ಓದುತ್ತಿರುವ ಅಕ್ಷರಾ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಮೂಲತಃ ಶಿಕಾರಿಪುರ ತಾಲೂಕು ಅಣ್ಣಪ್ಪಗೆರೆ ಗ್ರಾಮದ ನಿವಾಸಿಯಾದ ಅಕ್ಷರಾ ಆ.೭ರಂದು ಶಾಲೆಗೆ ದಾಖಲಾಗಿದ್ದಳು. ಆ.೯ರ ರಾತ್ರಿಯಿಂದಲೂ ಆಕೆಗೆ ವಾಂತಿ, ಭೇದಿಯಾಗಿತ್ತು ಎನ್ನಲಾಗಿದೆ.  ಬೆಳಗ್ಗೆ ಶಾಲೆಗೆ ಹೋದಾಗ ಏಕಾಏಕಿ ಕುಸಿದು ಬಿದ್ದಿದ್ದಾಳೆ. ತಕ್ಷಣ ಈಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣ ದಾಖಲಾಗಿದೆ.