ಭೂಮಿಕಾ ವೇದಿಕೆ 25ನೇ ವರ್ಷದ ರಜತ ಮಹೋತ್ಸವ ಸಮಾರೋಪ ಸಮಾರಂಭ

ನಿರಂತರವಾಗಿ ಜ್ಞಾನ ಸಂಪತ್ತು ಹೆಚ್ಚಿಸುವ, ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ


ಕನ್ನಡ ನಾಡು-ನುಡಿ ಬಿಂಬಿಸುವ ಭದ್ರಾವತಿ ನಗರದ ಭೂಮಿಕಾ ವೇದಿಕೆ 25ನೇ ವರ್ಷದ ರಜತ ಮಹೋತ್ಸವ ಸಮಾರೋಪ ಸಮಾರಂಭ ಭಾನುವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಮನೋವೈದ್ಯ ತಜ್ಞ, ವೈದ್ಯ ಸಾಹಿತಿ ಡಾ. ಕೆ.ಆರ್ ಶ್ರೀಧರ್ ವಿದ್ಯುನ್ಮಾನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.

    ಭದ್ರಾವತಿ : ಕನ್ನಡ ನಾಡು-ನುಡಿ ಬಿಂಬಿಸುವ ನಗರದ ಭೂಮಿಕಾ ವೇದಿಕೆ 25ನೇ ವರ್ಷದ ರಜತ ಮಹೋತ್ಸವ ಸಮಾರೋಪ ಸಮಾರಂಭ ಭಾನುವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು. 

    ಮನೋವೈದ್ಯ ತಜ್ಞ, ವೈದ್ಯ ಸಾಹಿತಿ ಡಾ. ಕೆ.ಆರ್ ಶ್ರೀಧರ್ ವಿದ್ಯುನ್ಮಾನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ವೇದಿಕೆ 25 ವರ್ಷಗಳಿಂದ ನಿರಂತರವಾಗಿ ಸಾಹಿತಿಗಳು, ಲೇಖಕರು, ಚಿಂತಕರು, ಕಲಾವಿದರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಕರೆ ತರುವ ಮೂಲಕ ಜ್ಞಾನ ಸಂಪತ್ತು ಹೆಚ್ಚಿಸುವ ಹಾಗೂ ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಅಲ್ಲದೆ ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸುವ ಮೂಲಕ ದಾಖಲೆ ಸೃಷ್ಟಿಸಿದೆ ಎಂದರು.


ಕನ್ನಡ ನಾಡು-ನುಡಿ ಬಿಂಬಿಸುವ ಭದ್ರಾವತಿ ನಗರದ ಭೂಮಿಕಾ ವೇದಿಕೆ 25ನೇ ವರ್ಷದ ರಜತ ಮಹೋತ್ಸವ ಸಮಾರೋಪ ಸಮಾರಂಭ ಭಾನುವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಮನೋವೈದ್ಯ ತಜ್ಞ, ವೈದ್ಯ ಸಾಹಿತಿ ಡಾ. ಕೆ.ಆರ್ ಶ್ರೀಧರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಹಾಸ್ಯ ಸಾಹಿತಿ, ಅಂಕಣಕಾರ ಎನ್. ರಾಮನಾಥ್ ಮಾತನಾಡಿ, ಸಾಹಿತ್ಯಕ್ಕೆ ನಮ್ಮೆಲ್ಲರನ್ನು ಬಂಧಿಸಿಡುವ ಶಕ್ತಿ ಇದೆ. ಹಾಸ್ಯ ಸಾಹಿತ್ಯ ನಮಗೆ ಮಾನಸಿಕವಾಗಿ, ಬೌದ್ಧಿಕವಾಗಿ ಹೆಚ್ಚು ನೆಮ್ಮದಿಯನ್ನುಂಟು ಮಾಡುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮುಖ್ಯ ಸಾಧನೆ ಮಾಡಿದವರು ಸಾವಿನ ನಂತರವೂ ಬದುಕಿರುತ್ತಾರೆ ಎಂದರು.

    ಅಂಕಣಕಾರ ಪ್ರೊ. ಎಂ.ಎನ್ ಸುಂದರರಾಜ್ ಸಮಾರೋಪ ನುಡಿಗಳನ್ನಾಡಿ, ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದು ಸುಲಭವಲ್ಲ. 25 ವರ್ಷಗಳನ್ನು ಪೂರೈಸುವ ಮೂಲಕ ತನ್ನ ಗಟ್ಟಿತನವನ್ನು ವೇದಿಕೆ ತೋರಿಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯ ಚಟುವಟಿಕೆಗಳು ವೇದಿಕೆಯಿಂದ ನಡೆಯುವಂತಾಗಲಿ ಎಂದರು.

    ಉದ್ಯಮಿ ಬಿ.ಕೆ ಜಗನ್ನಾಥ್, ವೇದಿಕೆ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಮುನಿರಾಜು ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷ, ಹಿರಿಯ ವೈದ್ಯ ಡಾ. ಕೃಷ್ಣ ಎಸ್ ಭಟ್ ಅಧ್ಯಕ್ಷತೆವಹಿಸಿದ್ದರು.

    ಕಾರ್ಯದರ್ಶಿ ಡಾ. ವೀಣಾ ಭಟ್ ಸ್ವಾಗತಿಸಿ, ಡಾ. ನಾಗರಾಜ ಮತ್ತು ಎಂ. ನಾಗಪ್ಪ ಕಾರ್ಯಕ್ರಮ ನಿರೂಪಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ವೀಣಾವಾದನ, ಭರತನಾಟ್ಯ ರೂಪಕ, ಕೋಲಾಟ, ಸಮೂಹ ನೃತ್ಯ ಮತ್ತು ಕನ್ನಡ ನಾಡು ಗಾನ ನಮನ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.