ಟಾಸ್ಕ್ ಫೋರ್ಸ್ ಸಮಿತಿ ತಂಡದಿಂದ 5 ಬಾಲಕಾರ್ಮಿಕರ ರಕ್ಷಣೆ

Uploaded Image


ಬಾಲಕಾರ್ಮಿಕ ನಿಷೇಧ ಟಾಸ್ಕ್ ಫೋರ್ಸ್ ಸಮಿತಿ ತಂಡ ಭದ್ರಾವತಿ ತಾಲೂಕಿನ ವಿವಿಧೆಡೆ ತಪಾಸಣೆ ನಡೆಸಿ 3 ಬಾಲಕರು ಮತ್ತು 2 ಬಾಲಕಿಯರು ಒಟ್ಟು 5 ಬಾಲ ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಭದ್ರಾವತಿ: ಬಾಲಕಾರ್ಮಿಕ ನಿಷೇಧ ಟಾಸ್ಕ್ ಫೋರ್ಸ್ ಸಮಿತಿ ತಂಡ ತಾಲೂಕಿನ ವಿವಿಧೆಡೆ ತಪಾಸಣೆ ನಡೆಸಿ 3 ಬಾಲಕರು ಮತ್ತು 2 ಬಾಲಕಿಯರು ಒಟ್ಟು 5 ಬಾಲ ಕಾರ್ಮಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

    ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ತಂಡ ವಿವಿಧ ಗ್ಯಾರೇಜ್ ಮತ್ತು ಆಲೆಮನೆಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರ ತಪಾಸಣೆ ನಡೆಸಿತು. ಈ ವೇಳೆ 5 ಬಾಲಕಾರ್ಮಿಕರನ್ನು ಪತ್ತೆ ಮಾಡಿ ರಕ್ಷಣೆ ಮಾಡುವ ಮೂಲಕ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು. ಬಾಲಕಾರ್ಮಿಕರನ್ನು ನೇಮಿಸಿಕೊಂಡಿದ್ದ ಮಾಲೀಕರುಗಳಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ಬಗ್ಗೆ ಅರಿವು ಮೂಡಿಸಲಾಯಿತು.

    ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಆಸ್ಮಿತ ಸಂಸ್ಥೆಯ ಸಿಬ್ಬಂದಿಗಳು, ಮುಂತಾದವರು ಉಪಸ್ಥಿತರಿದ್ದರು.