ಸಹಕಾರ ಮಹಾಮಂಡಳಿ ನೂತನ ನಿರ್ದೇಶಕರಿಂದ ಮುಖ್ಯಮಂತ್ರಿಗೆ ಸನ್ಮಾನ
ಅಧ್ಯಕ್ಷರಾಗಿ ಜಿ.ಟಿ ದೇವೇಗೌಡ, ಉಪಾಧ್ಯಕ್ಷರಾಗಿ ಬಿ.ಕೆ ಶಿವಕುಮಾರ್
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೂತನ ನಿರ್ದೇಶಕರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸನ್ಮಾನಿಸುವ ಮೂಲಕ ಮಂಡಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
ಭದ್ರಾವತಿ : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನೂತನ ನಿರ್ದೇಶಕರು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸನ್ಮಾನಿಸುವ ಮೂಲಕ ಮಂಡಳಿಗೆ ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
ಮಂಡಳಿ ನೂತನ ನಿರ್ದೇಶಕರಾದ ಶಾಸಕ ಜಿ.ಟಿ ದೇವೇಗೌಡ, ವೆಂಕಟರಾವ್ ನಾಡಗೌಡ, ಜಗದೀರ್ಶ ಎಂ. ಕವಟಗಿಮಠ, ಬಿ.ಕೆ ಶಿವಕುಮಾರ್, ಎಚ್.ಎನ್ ಅಶೋಕ್, ಬಿಸಿ ಲೋಕಪ್ಪಗೌಡ, ಜೆ.ಎಂ ಪ್ರಸಾದ್, ಅಭಿಷೇಕ ಆರ್. ಪಾಟೀಲ, ಬಿ. ಶಶಿಕುಮಾರ್ ರೈ, ಕೃಷ್ಣಗೌಡ ಬಿ. ಪಾಟೀಲ, ವಿಶ್ವನಾಥರೆಡ್ಡಿ ಎಸ್. ದರ್ಶನಾಪೂರ, ಕಾಶಿಲಿಂಗ ಬಿ. ಹುಡೇದ, ಕೆ. ಸುನೀಲ್ ಮತ್ತು ಕೆ.ಪಿ ಚನ್ನಭೈರೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರು-ಉಪಾಧ್ಯಕ್ಷರ ಆಯ್ಕೆ:
ಶುಕ್ರವಾರ ನಡೆದ ಆಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪುನಃ ಶಾಸಕ ಜಿ.ಟಿ ದೇವೇಗೌಡ ಆಯ್ಕೆಯಾಗಿದ್ದು, ಮೊದಲ ಬಾರಿಗೆ ಉಪಾಧ್ಯಕ್ಷರಾಗಿ ಬಿ.ಕೆ ಶಿವಕುಮಾರ್ ಆಯ್ಕೆಯಾಗಿದ್ದಾರೆ.
ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಸಹೋದರ ಹಾಗು ನಗರದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್‌ರವರು ಮೊದಲ ಬಾರಿಗೆ ಮಹಾಮಂಡಳದ ನಿರ್ದೇಶಕರಾಗಿ ಚುನಾಯಿತರಾಗಿದ್ದರು. ಮೊದಲ ಅವಧಿಯಲ್ಲಿಯೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರನ್ನು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಅಭಿನಂದಿಸಿದ್ದಾರೆ.
