ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುತ್ತಿರುವ ಪೋಲ್ ವಾಲ್ಟ್ ಕ್ರೀಡಾಪಟು ಸಿಂಧುಶ್ರೀ ಅಭಿನಂದಿಸಿದ ಬಿಜೆಪಿ
ಪೋಷಕರಿಗೆ ರಾಷ್ಟ್ರಧಜ್ವ ನೀಡಿ ಗೌರವಿಸಿದ ಮಂಡಲ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು
ಜಪಾನ್‌ನಲ್ಲಿ ಸೆ.19ರಿಂದ ಆರಂಭಗೊಳ್ಳಲಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭದ್ರಾವತಿ ನಗರದ ಜನ್ನಾಪುರ ನಿವಾಸಿ, ಪೋಲ್ ವಾಲ್ಟ್ ಕ್ರೀಡಾಪಟು ಸಿಂಧುಶ್ರೀ ಅವರಿಗೆ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದಿಂದ ಅಭಿನಂದಿಸುವ ಮೂಲಕ ಅವರ ಪೋಷಕರಿಗೆ ರಾಷ್ಟ್ರಧಜ್ವ ನೀಡುವ ಮೂಲಕ ಗೌರವಿಸಲಾಯಿತು.
ಭದ್ರಾವತಿ: ಜಪಾನ್‌ನಲ್ಲಿ ಸೆ.19ರಿಂದ ಆರಂಭಗೊಳ್ಳಲಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ನಗರದ ಜನ್ನಾಪುರ ನಿವಾಸಿ, ಪೋಲ್ ವಾಲ್ಟ್ ಕ್ರೀಡಾಪಟು ಸಿಂಧುಶ್ರೀ ಅವರಿಗೆ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದಿಂದ ಅಭಿನಂದಿಸುವ ಮೂಲಕ ಅವರ ಪೋಷಕರಿಗೆ ರಾಷ್ಟ್ರಧಜ್ವ ನೀಡುವ ಮೂಲಕ ಗೌರವಿಸಲಾಯಿತು.
ಸಿಂಧುಶ್ರೀ ಅವರು ಮಹಿಳೆಯರ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ 4.25 ಮೀಟರ್ ಎತ್ತರಕ್ಕೆ ನೆಗೆದು ಚಿನ್ನದ ಪದಕ ಗೆಲ್ಲುವುದರ ಜೊತೆಗೆ ರಾಷ್ಟ್ರೀಯ ದಾಖಲೆ ನಿರ್ಮಿಸಿ ಏಷ್ಯನ್ ಗೇಮ್ಸ್ ಪ್ರವೇಶಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಸೆ.19 ರಿಂದ ಅ.4ರವರೆಗೆ ನಡೆಯಲಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಸಿಂಧುಶ್ರೀ ಪ್ರಸ್ತುತ ದೆಹಲಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿರುವ ಹಿನ್ನಲೆಯಲ್ಲಿ ಅವರನ್ನು ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮ ಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಅವರು ದೂರವಾಣಿ ಮೂಲಕ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಸಿಂಧುಶ್ರೀ ಅವರ ಮನೆಗೆ ತೆರಳಿ ಅವರ ಪೋಷಕರಿಗೆ ರಾಷ್ಟ್ರಧ್ವಜವನ್ನು ನೀಡಿ ಗೌರವಿಸಿದರು. ಕ್ರೀಡೆಯಲ್ಲಿ ಗೆದ್ದು ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜ ರಾರಾಜಿಸುವಂತೆ ಮಾಡಲಿ ಹಾಗೂ ಭಾರತ ಮತ್ತು ಭದ್ರಾವತಿಯ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಶುಭ ಹಾರೈಸಿದರು.
ಸಿಂಧುಶ್ರೀ ಅವರ ತಾಯಿ ಮಂಜುಳಾ ಮಾತನಾಡಿ, ಮಗಳು ಶಾಲಾ ದಿನಗಳಿಂದಲೇ ಕ್ರೀಡೆಯ ಬಗ್ಗೆ ಹೊಂದಿದ್ದ ಆಸಕ್ತಿ, ಕ್ರೀಡೆಯಲ್ಲಿ ಸಾಧನೆ ಮಾಡಬೇಕೆಂಬ ಛಲ ಹಾಗೂ ನಿರಂತರ ಅಭ್ಯಾಸದ ಕುರಿತು ಮಾಹಿತಿ ಹಂಚಿಕೊಂಡರು. ಸಿಂಧುಶ್ರೀ ಅವರು ಚಿಕ್ಕ ವಯಸ್ಸಿನಲ್ಲಿಯೇ ತಂದೆ ಗಣೇಶ್ ಅವರನ್ನು ಕಳೆದುಕೊಂಡಿದ್ದು, ನಂತರ ತಮ್ಮ ಅಜ್ಜ ಕೃಷ್ಣಪ್ಪ ಹಾಗೂ ಅಜ್ಜಿ ಮೀನಾಕ್ಷಿ ಅವರ ಆರೈಕೆಯಲ್ಲಿ ಬೆಳೆದಿದ್ದಾರೆ. ಮೊಮ್ಮಗಳ ಕ್ರೀಡಾ ಸಾಧನೆಯ ಬಗ್ಗೆ ಅಜ್ಜ–ಅಜ್ಜಿ ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ ಹಾಗೂ ಹನುಮಂತನಾಯ್ಕ್, ಪ್ರಮುಖರಾದ ಪ್ರದೀಪ್ ಗೌಡರ್, ಯೋಗೇಶ್ ಗುಜ್ಜರ್, ಕಿರಣ್ ಡೊಯ್ಜೋಡೆ, ಕವಿತಾರಾವ್, ಅನ್ನಪೂರ್ಣ ಛಲವಾದಿ, ಶಕುಂತಲಾ ಪ್ರದೀಪ್, ರಾಜಶೇಖರ್ ಉಪ್ಪಾರ್, ಪ್ರಜ್ವಲ್ ನಂಜುಂಡಯ್ಯ, ನಾಗಮಣಿ, ಜಯಲಕ್ಷ್ಮಿ, ಉಮಾವತಿ, ಸುಪ್ರಿಯ ಮಂಜುನಾಥ್, ಆರತಿ ಸಿಂಗ್, ಹರೀಶ್, ಆಟೋ ಮೂರ್ತಿ, ನಿಶಾರಾವ್, ಲತಾ ಹಾಗೂ ಲೀಲಾವತಿ ಸೇರಿದಂತೆ ಪಕ್ಷದ ಇನ್ನಿತರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
