ಶ್ರಾವಣ ಮಾಸ ಭಕ್ತಿ, ಪ್ರಕೃತಿ ಸೌಂದರ್ಯದ ಮಾಸ : ಗೀತಾ ರಾಜಕುಮಾರ್
ವೀರಶೈವ ಲಿಂಗಾಯಿತ ಮಹಿಳಾ ಸಮಾಜದಿಂದ ಭದ್ರಾವತಿ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭದ್ರಾವತಿ : ವೀರಶೈವ ಲಿಂಗಾಯಿತ ಮಹಿಳಾ ಸಮಾಜದಿಂದ ಹಳೇನಗರದ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಮಾತನಾಡಿ, ಶ್ರಾವಣ ಮಾಸ ಭಕ್ತಿ ಮತ್ತು ಪ್ರಕೃತಿ ಸೌಂದರ್ಯದ ಮಾಸ. ರೈತರು ಮಳೆಯೊಂದಿಗೆ ತಮ್ಮ ಚಟುವಟಿಕೆಗಳನ್ನು ಆರಂಭಿಸುವ ಸಮಯ ಇದ್ದಾಗಿದ್ದು, ಎಲ್ಲೆಡೆ ಹಸಿರು ಕಂಗೊಳಿಸುತ್ತಿರುತ್ತದೆ. ಮತ್ತೊಂದೆಡೆ ಹಬ್ಬಗಳ ಮಾಸ ಇದಾಗಿದ್ದು, ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ. ನಮ್ಮ ಸಂಸ್ಕೃತಿಯಲ್ಲಿ ಶ್ರಾವಣ ಮಾಸ ತನ್ನದೇ ಮಹತ್ವ ಹೊಂದಿದೆ ಎಂದರು.
ಮಹಿಳೆಯರು ಇನ್ನೂ ಹೆಚ್ಚು ಸಂಘಟಿತರಾಗಿ ಕಾರ್ಯ ಚಟುವಟಿಕೆಗಳನ್ನು ಆಯೋಜಿಸುವ ಜೊತೆಗೆ ಸಮಾಜದ ಬಲವರ್ಧನೆಗೆ ಮುಂದಾಗಬೇಕು. ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕೆಂದರು.
ವಿಜಯ ಜಗನ್ನಾಥ್, ಕುಸುಮಾ ತೀರ್ಥಯ್ಯ, ಗೀತಾ ನಾಗರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಗರತ್ನವಾಗೀಶ್ ಕೋಠಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಪರಿಮಳ ರೋಹಿತ್ ಸ್ವಾಗತಿಸಿ, ಮಧು ಪರಮೇಶ್ ಶ್ರಾವಣ ಮಾಸದ ಕುರಿತು ಮಾಹಿತಿ ನೀಡಿದರು. ಶೈಲಾ ಧನಂಜಯ್ ಕ್ರೀಡಾಕೂಟದಲ್ಲಿ ವಿಜೇತ ಸದಸ್ಯರಿಗೆ ಬಹುಮಾನ ವಿತರಿಸಿದರು. ಸರಿತಾ ಅಶೋಕ್ ಕಾರ್ಯಕ್ರಮ ನಿರೂಪಿಸಿ, ಶೈಲಾ ನಟರಾಜ್ ವಂದಿಸಿದರು.
