ಸೂರು ಹಂಚಿಕೆಯಲ್ಲಿ ಯಾವುದೇ ರಾಜಕಾರಣವಿಲ್ಲ, ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ
416 ಫಲಾನುಭವಿಗಳ ಲಾಟರಿ ಮೂಲಕ ಆಯ್ಕೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್
ಭದ್ರಾವತಿ ನಗರಸಭೆ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ನೆರವಿನೊಂದಿಗೆ ನಗರದ ಬೊಮ್ಮನಕಟ್ಟೆಯಿಂದ ತಿಮ್ಲಾಪುರಕ್ಕೆ ಹೋಗುವ ರಸ್ತೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಿ+3 ಗುಂಪು ಮನೆ ಯೋಜನೆಯಡಿ 10 ಸಾವಿರ ರು. ಗಳನ್ನು ಬ್ಯಾಂಕಿಗೆ ಜಮಾ ಮಾಡಿ ಆಯ್ಕೆಯಾಗಿರುವ 2048 ಫಲಾನುಭವಿಗಳಲ್ಲಿ ಮೊದಲ ಹಂತವಾಗಿ 416 ಫಲಾನುಭವಿಗಳಿಗೆ ಲಾಟರಿ ಮುಖಾಂತರ ಸೂರು ಹಂಚಿಕೆ ಮಾಡುವ ಕಾರ್ಯಕ್ರಮ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ: ಜಿ+3 ಗುಂಪು ಮನೆ ಯೋಜನೆಯಡಿ 10 ಸಾವಿರ ರು. ಗಳನ್ನು ಬ್ಯಾಂಕಿಗೆ ಜಮಾ ಮಾಡಿ ಆಯ್ಕೆಯಾಗಿರುವ ಎಲ್ಲಾ ೨೦೪೮ ಫಲಾನುಭವಿಗಳಿಗೂ ಸೂರು ಲಭಿಸಲಿದ್ದು, ಯಾರು ಸಹ ಆತಂಕಕ್ಕೆ ಒಳಗಾಗುವುದು ಬೇಡ. ಕಿಡಿಗೇಡಿಗಳ ಮಾತಿಗೆ ಕಿವಿಗೊಡದಿರಿ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.
ಅವರು ನಗರಸಭೆ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ನೆರವಿನೊಂದಿಗೆ ನಗರದ ಬೊಮ್ಮನಕಟ್ಟೆಯಿಂದ ತಿಮ್ಲಾಪುರಕ್ಕೆ ಹೋಗುವ ರಸ್ತೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಿ+3 ಗುಂಪು ಮನೆ ಯೋಜನೆಯಡಿ 10 ಸಾವಿರ ರು. ಗಳನ್ನು ಬ್ಯಾಂಕಿಗೆ ಜಮಾ ಮಾಡಿ ಆಯ್ಕೆಯಾಗಿರುವ ೨೦೪೮ ಫಲಾನುಭವಿಗಳಲ್ಲಿ ಮೊದಲ ಹಂತವಾಗಿ 416 ಫಲಾನುಭವಿಗಳಿಗೆ ಲಾಟರಿ ಮುಖಾಂತರ ಸೂರು ಹಂಚಿಕೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ ನಗರಸಭೆ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ನೆರವಿನೊಂದಿಗೆ ನಗರದ ಬೊಮ್ಮನಕಟ್ಟೆಯಿಂದ ತಿಮ್ಲಾಪುರಕ್ಕೆ ಹೋಗುವ ರಸ್ತೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಿ+೩ ಗುಂಪು ಮನೆ ಯೋಜನೆಯಡಿ 10 ಸಾವಿರ ರು. ಗಳನ್ನು ಬ್ಯಾಂಕಿಗೆ ಜಮಾ ಮಾಡಿ ಆಯ್ಕೆಯಾಗಿರುವ 2048 ಫಲಾನುಭವಿಗಳಲ್ಲಿ ಮೊದಲ ಹಂತವಾಗಿ 416 ಫಲಾನುಭವಿಗಳಿಗೆ ಲಾಟರಿ ಮುಖಾಂತರ ಸೂರು ಹಂಚಿಕೆ ಮಾಡುವ ಕಾರ್ಯಕ್ರಮದಲ್ಲಿ ವಿಕಲಚೇತನ ಫಲಾನುಭವಿಯೊಬ್ಬರು ತಮ್ಮ ಟೋಕನ್ ಪೆಟ್ಟಿಗೆಯಲ್ಲಿ ಹಾಕುತ್ತಿರುವುದು.
ಆಯ್ಕೆಯಾಗಿರುವ ಎಲ್ಲಾ ಫಲಾನುಭವಿಗಳಿಗೂ ಸೂರು ಕಲ್ಪಿಸಿಕೊಡಲಾಗುವುದು. ಇದರಲ್ಲಿ ಯಾವುದೇ ಅನುಮಾನ ಬೇಡ. ಈಗಾಗಲೇ ನಿವೇಶನ ಗುರುತಿಸಿ ಗುದ್ದಲಿ ಪೂಜೆ ಸಹ ನೆರವೇರಿಸಲಾಗಿದೆ. ಸೂರು ಹಂಚಿಕೆಯಲ್ಲಿ ಯಾವುದೇ ರಾಜಕಾರಣ ಮಾಡುವುದಿಲ್ಲ. ಅರ್ಹತೆ ಹೊಂದಿರುವ ಪ್ರತಿಯೊಬ್ಬರಿಗೂ ಸೂರು ಲಭಿಸಲಿದ್ದು, ಪಾರದರ್ಶಕತೆಯಿಂದ ಈ ಯೋಜನೆ ರೂಪಿಸಲಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಕೊಳಚೆ ಪ್ರದೇಶಗಳನ್ನು ಹೊಂದಿರುವ ತಾಲೂಕು ನಮ್ಮದಾಗಿದ್ದು, ಸ್ವಂತ ಮನೆ ಇಲ್ಲದೆ ಬದುಕುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಂತಹ ಜನರಿಗಾಗಿ ಶಾಸಕರಾದ ಬಿ.ಕೆ ಸಂಗಮೇಶ್ವರ್ ಅವರು ಕಳೆದ 6 ವರ್ಷಗಳ ಹಿಂದೆ ಹೇಗಾದರೂ ಮಾಡಿ ಸೂರು ಒದಗಿಸಿಕೊಡಬೇಕೆಂಬ ದೃಢ ಸಂಕಲ್ಪ ಕೈಗೊಂಡ ಹಿನ್ನಲೆಯಲ್ಲಿ ಪ್ರಸ್ತುತ ೪೧೬ ಫಲಾನುಭವಿಗಳಿಗೆ ಸೂರು ಒದಗಿಸಲಾಗುತ್ತಿದೆ ಎಂದರು.
ಕಳೆದ 6 ವರ್ಷಗಳ ಹಿಂದೆ ಸುಮಾರು 4 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ ಬ್ಯಾಂಕಿಗೆ 10 ಸಾವಿರ ರು. ಜಮಾ ಮಾಡಿರುವ 2048 ಫಲಾನುಭವಿಗಳಲ್ಲಿ ಮೊದಲ ಹಂತದಲ್ಲಿ ನಿರ್ಮಾಣಗೊಂಡಿರುವ 416 ಮನೆಗಳನ್ನು ಪಾರದರ್ಶಕವಾಗಿ ಲಾಟರಿ ಮೂಲಕ ವಿತರಿಸಲಾಗುತ್ತಿದೆ. ಇದರಲ್ಲಿ ಯಾವುದೇ ರೀತಿಯ ಅನ್ಯಾಯ ನಡೆಯಲು ಸಾಧ್ಯವಿಲ್ಲ ಎಂದರು.
ಭದ್ರಾವತಿ ನಗರಸಭೆ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ನೆರವಿನೊಂದಿಗೆ ನಗರದ ಬೊಮ್ಮನಕಟ್ಟೆಯಿಂದ ತಿಮ್ಲಾಪುರಕ್ಕೆ ಹೋಗುವ ರಸ್ತೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಿ+3 ಗುಂಪು ಮನೆ ಯೋಜನೆಯಡಿ 10 ಸಾವಿರ ರು. ಗಳನ್ನು ಬ್ಯಾಂಕಿಗೆ ಜಮಾ ಮಾಡಿ ಆಯ್ಕೆಯಾಗಿರುವ 2048 ಫಲಾನುಭವಿಗಳಲ್ಲಿ ಮೊದಲ ಹಂತವಾಗಿ 416 ಫಲಾನುಭವಿಗಳಿಗೆ ಲಾಟರಿ ಮುಖಾಂತರ ಸೂರು ಹಂಚಿಕೆ ಮಾಡುವ ಕಾರ್ಯಕ್ರಮದಲ್ಲಿ ಟೋಕನ್ ಪಡೆಯಲು ಸಾಲುಗಟ್ಟಿ ನಿಂತಿರುವುದು.
ಉಳಿದ ಎಲ್ಲರಿಗೂ ಮನೆಗಳು ಹಂಚಿಕೆಯಾಗಲಿವೆ. ಪ್ರಸ್ತುತ ಶಾಸಕರು ತಿಮ್ಲಾಪುರದಲ್ಲಿ 17 ಎಕರೆ ಜಾಗದಲ್ಲಿ 1600 ಮನೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಮುಂದಿನ 3-4 ವರ್ಷಗಳಲ್ಲಿ ಎಲ್ಲರಿಗೂ ಮನೆಗಳು ಲಭ್ಯವಾಗಲಿದೆ. ಜಿ+3 ಗುಂಪು ಮನೆಗಳು ಗುಣಮಟ್ಟದಿಂದ ಕೂಡಿವೆ. ಹೆಚ್ಚು ವರ್ಷ ಬಾಳಿಕೆ ಬರಲಿವೆ ಎಂದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಕೆ. ಸುದೀಪ್ ಕುಮಾರ್, ಮಣಿ ಎಎನ್‌ಎಸ್, ಕಾಂತರಾಜ್, ಲತಾ ಚಂದ್ರಶೇಖರ್, ಜಾರ್ಜ್, ಬಸವರಾಜ ಬಿ ಆನೇಕೊಪ್ಪ, ಉದಯ್‌ಕುಮಾರ್, ಬಿ.ಎಂ ಮಂಜುನಾಥ್, ಪಲ್ಲವಿ ದಿಲೀಪ್, ಅನುಪಮ ಚನ್ನೇಶ್, ಸವಿತಾ ಉಮೇಶ್, ಅನುಸುಧಾ ಮೋಹನ್ ಪಳನಿ, ಟಿಪ್ಪು ಸುಲ್ತಾನ್, ನಾಗರತ್ನ ಅನಿಲ್ ಕುಮಾರ್, ರಿಯಾಜ್ ಅಹಮದ್ ಸೇರಿದಂತೆ ನಗರಸಭೆ ಬಹುತೇಕ ಸದಸ್ಯರು, ನಗರ ಆಶ್ರಯ ಸಮಿತಿ ಸದಸ್ಯರು, ಕರ್ನಾಟಕ ಸಹಕಾರ ಮಹಾಮಂಡಳ ಉಪಾಧ್ಯಕ್ಷ ಬಿ.ಕೆ ಶಿವಕುಮಾರ್, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ರಾಜೀವ್ ಗಾಂಧಿ ವಸತಿ ನಿಗಮದ ಪ್ರಕಾಶ್, ಸ್ವಾಮಿ, ವಿನಯ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರಸಭೆ ಸದಸ್ಯ ಚನ್ನಪ್ಪ ಸ್ವಾಗತಿಸಿದರು. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ನಗರಸಭೆ ಹಾಗು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು, ಸಬ್ಬಂದಿಗಳು ಹಾಗು ಫಲಾನುಭವಿಗಳು ಪಾಲ್ಗೊಂಡಿದ್ದರು.

.jpg)
.jpg)
.jpg)