ನಿರ್ದೇಶಕರಾಗಿ ನಾಗರಾಜನಾಯ್ಕ ರಾಮನಕೊಪ್ಪ ಆಯ್ಕೆ
ನಾಗರಾಜನಾಯ್ಕ ರಾಮನಕೊಪ್ಪ
ಭದ್ರಾವತಿ : ಬಂಜಾರ ಸಮಾಜದ ಧಾರ್ಮಿಕ ಕೇಂದ್ರ ಸೂರಗೊಂಡನಕೊಪ್ಪದಲ್ಲಿರುವ ಸಂತ ಶ್ರೀ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಗೆ ನಿರ್ದೇಶಕ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ತಾಲೂಕಿನ ನಾಗರಾಜನಾಯ್ಕ ರಾಮನಕೊಪ್ಪ ಆಯ್ಕೆಯಾಗಿದ್ದಾರೆ.
ಭದ್ರಾವತಿ/ತೀರ್ಥಹಳ್ಳಿ ತಾಲೂಕಿನಿಂದ ಮೀಸಲಾದ ಒಂದು ನಿರ್ದೇಶಕ ಸ್ಥಾನಕ್ಕೆ ನಾಗರಾಜನಾಯ್ಕ ಮತ್ತು ಸಿದ್ದಾಪುರ ರಮೇಶನಾಯ್ಕರವರ ನಡುವೆ ಸ್ಪರ್ಧೆ ನಡೆದಿದ್ದು, ಅಂತಿಮವಾಗಿ ನಾಗರಾಜನಾಯ್ಕ ಆಯ್ಕೆಯಾಗಿದ್ದಾರೆ. ನಾಗರಾಜನಾಯ್ಕರವರು ಈ ಹಿಂದೆ ತಾಲೂಕು ಬಂಜಾರ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು.
ನಿರ್ದೇಶಕರಾಗಿ ಆಯ್ಕೆಯಾಗಲು ಕಾರಣಕರ್ತರಾದ ಸಮಾಜದ ಸದಸ್ಯರಿಗೆ ನಾಗರಾಜನಾಯ್ಕರವರು ಕೃತಜ್ಞತೆ ಸಲ್ಲಿಸಿದ್ದಾರೆ.
