ಜಿ+೩ ಗುಂಪು ಮನೆ ಯೋಜನೆಯಡಿ ೧೬೩೨ ಮನೆಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ



ಭದ್ರಾವತಿ ಉಜ್ಜನಿಪುರ ಗ್ರಾಮದ ಸರ್ವೆ ನಂ.೫ರ ೨೭ ಎಕರೆ ೧೨ ಗುಂಟೆ ಜಮೀನಿನಲ್ಲಿ ಜಿ+೩ ಗುಂಪು ಮನೆ ಯೋಜನೆಯಡಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಸರ್ಕಾರದಿಂದ ೧೭ ಎಕರೆ ೧೨ ಗುಂಟೆ ಜಮೀನು ಮಂಜೂರಾಗಿದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಮನೆಗಳ ನಿರ್ಮಾಣಕ್ಕೆ  ಗುದ್ದಲಿ ಪೂಜೆ ನೆರವೇರಿಸಿದರು.

    ಭದ್ರಾವತಿ : ನಗರಸಭೆ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ನೆರವಿನೊಂದಿಗೆ ಅನುಷ್ಠಾನಗೊಳ್ಳುತ್ತಿರುವ ಜಿ+೩ ಗುಂಪು ಮನೆ ಯೋಜನೆಯಡಿ ೧೦ ಸಾವಿರ ರು. ಗಳನ್ನು ಬ್ಯಾಂಕಿಗೆ ಜಮಾ ಮಾಡಿ ಆಯ್ಕೆಯಾಗಿರುವ ೨೦೪೮ ಫಲಾನುಭವಿಗಳಲ್ಲಿ ಮೊದಲ ಹಂತವಾಗಿ ೪೧೬ ಫಲಾನುಭವಿಗಳಿಗೆ ಸೋಮವಾರ ಲಾಟರಿ ಮುಖಾಂತರ ಸೂರು ಹಂಚಿಕೆ ಮಾಡಲಾಯಿತು. ಉಳಿದ ೧೬೩೨ ಫಲಾನುಭವಿಗಳಿಗೆ ಸೂರು ಹಂಚಿಕೆ ಮಾಡಲು ಜಿ+೩ ಗುಂಪು ಮನೆಗಳ ನಿರ್ಮಾಣಕ್ಕೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು.

    ಉಜ್ಜನಿಪುರ ಗ್ರಾಮದ ಸರ್ವೆ ನಂ.೫ರ ೨೭ ಎಕರೆ ೧೨ ಗುಂಟೆ ಜಮೀನಿನಲ್ಲಿ ಜಿ+೩ ಗುಂಪು ಮನೆ ಯೋಜನೆಯಡಿ ವಸತಿ ಸಮುಚ್ಚಯ ನಿರ್ಮಾಣಕ್ಕೆ ಸರ್ಕಾರದಿಂದ ೧೭ ಎಕರೆ ೧೨ ಗುಂಟೆ ಜಮೀನು ಮಂಜೂರಾಗಿದೆ. ಮುಂದಿನ ೨-೩ ವರ್ಷಗಳಲ್ಲಿ ವಸತಿ ಸಮುಚ್ಚಯಗಳು ನಿರ್ಮಾಣಗೊಂಡು ಫಲಾನುಭವಿಗಳಿಗೆ ಮನೆಗಳು ಲಭ್ಯವಾಗಲಿವೆ. ಕಳೆದ ೬ ವರ್ಷಗಳ ನಿರಂತರ ಪರಿಶ್ರಮ ಇದೀಗ ಸಾಕಾರಗೊಳ್ಳುತ್ತಿದೆ.

    ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಪೌರಾಯುಕ್ತ ಕೆ.ಎನ್ ಹೇಮಂತ್, ಸದಸ್ಯರಾದ ಬಿ.ಕೆ ಮೋಹನ್, ಚನ್ನಪ್ಪ, ಬಿ.ಎಂ ಮಂಜುನಾಥ್, ಕೆ. ಸುದೀಪ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.