ಬಂಜಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎಚ್ ಮಲ್ಲಿಕಾರ್ಜುನ



    ಭದ್ರಾವತಿ: ತಾಲೂಕು ಬಂಜಾರ ಸಂಘದ ನೂತನ ಅಧ್ಯಕ್ಷರಾಗಿ ತಾಲೂಕಿನ ಹಿರಿಯೂರು ತಾಂಡ ಎಚ್.ಎಚ್ ಮಲ್ಲಿಕಾರ್ಜುನ ಹಾಗು ಕಾರ್ಯದರ್ಶಿಯಾಗಿ ಕೋಮಾರನಹಳ್ಳಿ ಮಂಜುನಾಥನಾಯ್ಕ ಆಯ್ಕೆಯಾಗಿದ್ದಾರೆ. 
    ನಗರದ ಮಿಲ್ಟ್ರಿಕ್ಯಾಂಪ್, ಪ್ರೊ. ಬಿ. ಕೃಷ್ಣಪ್ಪ ವೃತ್ತದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಪದ್ಮೇನಹಳ್ಳಿ ಶಂಕರನಾಯ್ಕ, ಉಪಾಧ್ಯಕ್ಷರಾಗಿ ನಾಗತಿಬೆಳಗಲು ಲಕ್ಷ್ಮಣನಾಯ್ಕ, ಸಿರಿಯೂರು ಕೃಷ್ಣಾನಾಯ್ಕ, ಜಯನಗರ ಹನುಮಂತನಾಯ್ಕ ಮತ್ತು ನೆಲ್ಲಿಸರ ಸೋಮೇಶ್ವರ ನಾಯ್ಕ, ಖಜಾಂಚಿಯಾಗಿ ಕಲ್ಲಹಳ್ಳಿ ವೇದೇಶ್ ನಾಯ್ಕ, ಸಹಕಾರ್ಯದರ್ಶಿಯಾಗಿ ಅರಳಿಕೊಪ್ಪ ಪ್ರವೀಣ್ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಕಾರೇಹಳ್ಳಿ ಟಿ. ಚಂದ್ರು, ಸಂಚಾಲಕ ಸಿದ್ದಾಪುರ ರವಿನಾಯ್ಕ, ಸಲಹೆಗಾರರಾಗಿ ಕಲ್ಪನಹಳ್ಳಿ ಉಮಾಮಹೇಶ್ವರನಾಯ್ಕ, ನೆಲ್ಲಿಸರ ಮಂಜಾನಾಯ್ಕ ಹಾಗು ಸಂಘದ ನಿರ್ದೇಶಕರಾಗಿ ಗೋಣಿಬೀಡು ದೇವ್ಲಾನಾಯ್ಕ, ಶಿವರಾಮನಗರ ಪಿ.ಟಿ ಪ್ರಕಾಶ್, ಗೊಂದಿ ರಾಮಾನಾಯ್ಕ, ಅರಳಿಕೊಪ್ಪ ಸುರೇಂದ್ರ ನಾಯ್ಕ, ಅರಹತೊಳಲು ಗಿರೀಶ್ ನಾಯ್ಕ, ಆದ್ರಿಹಳ್ಳಿ ದರ್ಶನ್ ನಾಯ್ಕ, ಕಲ್ಪನಹಳ್ಳಿ ಮಂಜಾನಾಯ್ಕ, ಸಿರಿಯೂರು ಹೇಮಂತ್ ನಾಯ್ಕ, ಅರಿಶಿನ ಘಟ್ಟ ಗುರುಮೂರ್ತಿ ನಾಯ್ಕ, ಹೆಬ್ಬಂಡಿ ಮಂಜಾನಾಯ್ಕ, ತಿಮ್ಲಾಪುರ ಬಿ. ಚೇತನ್, ಮೈಸೂರು ಮಂಜು, ದೊಡ್ಡಗೊಪ್ಪೇನಹಳ್ಳಿ ನಾಗಾನಾಯ್ಕ, ಸಿರಿಯೂರು ಮೋಹನ್ ನಾಯ್ಕ, ರಾಮನಕೊಪ್ಪ ಜಗದೀಶ್ ನಾಯ್ಕ, ನಾಗತಿಬೆಳಗಲು ಪವನ್ ಕುಮಾರ್, ಸಿದ್ದಾಪುರ ರಮೇಶ್ ನಾಯ್ಕ ಮತ್ತು ಕಾರೇಹಳ್ಳಿ ಸೋಮಾನಾಯ್ಕ ಆಯ್ಕೆಯಾಗಿದ್ದಾರೆ.