ಮಾಸಾಶನ ಪಡೆಯಲು ರಂಗಕರ್ಮಿ ಎಚ್.ಬಿ ಉಮೇಶರಾವ್‌ಗೆ ಕಲಾವಿದರ ಒಕ್ಕೂಟ ಸಹಕಾರ


ರಂಗಭೂಮಿಯ ಬೆಳಕು ಸಂಯೋಜನೆಯಲ್ಲಿ ಸುಮಾರು ೪೦ ವರ್ಷಗಳ ಸೇವೆ ಸಲ್ಲಿಸಿರುವ ಭದ್ರಾವತಿ ರಂಗಕರ್ಮಿ ಎಚ್.ಬಿ ಉಮೇಶರಾವ್ ಅವರು ಮಾಸಾಶನ ಪಡೆಯಲು ರಂಗ ಕಲಾವಿದರ ಒಕ್ಕೂಟ ಹೆಚ್ಚಿನ ಸಹಕಾರ ನೀಡುತ್ತಿದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದೆ.
    ಭದ್ರಾವತಿ:  ರಂಗಭೂಮಿಯ ಬೆಳಕು ಸಂಯೋಜನೆಯಲ್ಲಿ ಸುಮಾರು ೪೦ ವರ್ಷಗಳ ಸೇವೆ ಸಲ್ಲಿಸಿರುವ ರಂಗಕರ್ಮಿ ಎಚ್.ಬಿ ಉಮೇಶರಾವ್ ಅವರು ಮಾಸಾಶನ ಪಡೆಯಲು ರಂಗ ಕಲಾವಿದರ ಒಕ್ಕೂಟ ಹೆಚ್ಚಿನ ಸಹಕಾರ ನೀಡುತ್ತಿದ್ದು, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದೆ.
  ಉಮೇಶ್‌ರಾವ್ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇವರ ನೆರವಿಗೆ ಇದೀಗ ಕಲಾವಿದರ ಒಕ್ಕೂಟ ಮುಂದಾಗಿದೆ. ಕಲಾವಿದರ ಮಾಸಾಶನದ ಅರ್ಜಿ ಸಲ್ಲಿಸುವ ಸಲುವಾಗಿ ರಂಗ ಕಲಾವಿದರ ಒಕ್ಕೂಟವು ಸಂಪೂರ್ಣವಾಗಿ ಸಹಕಾರ ನೀಡಿ ದಾಖಲೆಗಳನ್ನು ಸಿದ್ಧಪಡಿಸಿ ಮಂಗಳವಾರ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಅವರಿಗೆ ಅರ್ಜಿ ಸಲ್ಲಿಸಿದೆ. ಇದಕ್ಕೆ ಸ್ಪಂದಿಸಿರುವ ಸಹಾಯಕ ನಿರ್ದೇಶಕರು ಅರ್ಜಿಯನ್ನು ಆದಷ್ಟು ಬೇಗ ಮುಂದಿನ ಸೂಕ್ತ ಕ್ರಮಕ್ಕಾಗಿ ಕೇಂದ್ರ ಕಚೇರಿಗೆ ಕಳುಹಿಸಿ ಕಲಾವಿದರಿಗೆ ಸಹಕಾರ ನೀಡುವುದಾಗಿ ತಿಳಿಸಿದರು. 
    ಎಚ್.ಬಿ ಉಮೇಶ್ ರಾವ್,  ರಂಗ ಕಲಾವಿದರ ಒಕ್ಕೂಟದ ಖಜಾಂಚಿ ಕೆ.ಎಸ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್, ಸಹ ಕಾರ್ಯದರ್ಶಿ ಚಿದಾನಂದ, ಜಿ. ರವಿಕುಮಾರ್, ವೈ.ಕೆ.ಹನುಮಂತಯ್ಯ ಮತ್ತು ಶಂಕರಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.