ಬಾಲ ಕಾರ್ಮಿಕ ಪದ್ದತಿ ವಿರೋಧಿಸಿ ಜಾಥಾ ಅರಿವು ಕಾರ್ಯಕ್ರಮ


ಭದ್ರಾವತಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಮಾರುಕಟ್ಟೆ ಮತ್ತು ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಬಾಲ ಕಾರ್ಮಿಕ ಪದ್ದತಿ ವಿರೋಧಿಸಿ ಜಾಥಾ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಯಿತು.

     ಭದ್ರಾವತಿ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕಾರ್ಮಿಕ ಇಲಾಖೆ ಸಹಯೋಗದೊಂದಿಗೆ ಬಾಲ ಕಾರ್ಮಿಕ ಪದ್ದತಿ ವಿರೋಧಿಸಿ ಜಾಥಾ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಯಿತು.

    ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಬಿ. ಮಹೇಶ್ ಜಾಥಾ ಉದ್ಘಾಟಿಸಿ ಮಾತನಾಡಿ, ೧೪ ವರ್ಷದೊಳಗಿನ ಮಕ್ಕಳನ್ನು ಪ್ರಾಂಗಣದಲ್ಲಿನ ವ್ಯವಹಾರಸ್ಥರು, ಪೇಟೆ ಕಾರ್ಯಕರ್ತರು, ಗೋದಾಮು ನಿರ್ವಾಹಕರು, ಸಾಗಾಣಿಕೆದಾರರು ಸೇರಿದಂತೆ ಯಾರೇ ಆದರೂ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಕಾನೂನು ಬಾಹಿರವಾಗುತ್ತದೆ. ಈ ಉಲ್ಲಂಘನೆಗಳು ಕಂಡು ಬಂದರೆ ಕೃಷಿ ಮಾರಾಟ ಕಾಯ್ದೆಯಡಿ ಪರವಾನಿಗೆ ರದ್ದುಗೊಳಿಸಲು ಅಥವಾ ಅಮಾನತ್ತುಗೊಳಿಸಲು ಅವಕಾಶವಿರುತ್ತದೆ ಎಂದು ಎಚ್ಚರಿಸಿದರು.

    ಒಂದು ವೇಳೆ ಇಂತಹ ಮಕ್ಕಳು ಕೆಲಸಕ್ಕೆ ನೇಮಿಸಿಕೊಂಡಿರುವುದು  ಅಥವಾ ಶಿಕ್ಷಣದಿಂದ ವಂಚಿತರಾಗಿರುವುದು ಕಂಡುಬಂದಲ್ಲಿ ಶಿಕ್ಷಣ ಅಥವಾ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ ಅವರನ್ನು ಶಾಲೆಗಳಿಗೆ ಸೇರಿಸಲು ಅನುಕೂಲವಾಗುತ್ತದೆ ಎಂದರು.

    ಸಮಿತಿ ಸಹಾಯಕ ಕಾರ್ಯದರ್ಶಿ ಎಚ್. ಜಯಪ್ಪ, ಕಾರ್ಮಿಕ ಇಲಾಖೆ ನಿರೀಕ್ಷಕರಾದ ಸುಪ್ರೀತ, ರಕ್ಷಿತ್, ಶಿವಮೊಗ್ಗ ಸಹಾಯವಾಣಿ ಆಪ್ತ ಸಮಾಲೋಚಕಿ ಶೃತಿ, ವರ್ತಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಸಂದೀಪ್, ರ್‍ಯಾಮ್ಕೋಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರೂಪಾಕ್ಷಪ್ಪ, ಮಹೇಶ್, ವರ್ತಕರು, ಎಪಿಎಂಸಿ, ಎಂಎಸ್‌ಪಿಸಿ ಸಿಬ್ಬಂದಿಗಳು ಭಾಗವಹಿಸಿದ್ದರು.