ಹಿರಿಯ ಫೈಲ್ವಾನ್ ರುದ್ರಪ್ಪ ನಿಧನ

ರುದ್ರಪ್ಪ 
    ಭದ್ರಾವತಿ : ಹಳೇನಗರ ಕೋಟೆ ಏರಿಯಾ ಶ್ರೀ ಬಸವಣ್ಣ ದೇವಸ್ಥಾನ ಸಮೀಪದ ಶ್ರೀ ಹಿಂದೂ ಕೋಟೆ ಗರಡಿ ಹಿರಿಯ ಫೈಲ್ವಾನ್ ರುದ್ರಪ್ಪ(೯೩) ಗುರುವಾರ ನಿಧನ ಹೊಂದಿದರು. 
    ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ರುದ್ರಪ್ಪರವರು ಹಲವಾರು ಪ್ರಶಸ್ತಿ, ಬಿರುದುಗಳನ್ನು ಪಡೆದುಕೊಂಡಿದ್ದರು. ಯುವಕರಿಗೆ ಕುಸ್ತಿ ತರಬೇತಿ ನೀಡುವ ಮೂಲಕ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಅವರ ಪ್ರತಿಭೆ ಅನಾವರಣಗೊಳಿಸಲು ಕಾರಣಕರ್ತರಾಗಿದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಹಳೇನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.  
    ಇವರ ನಿಧನಕ್ಕೆ ಹಿರಿಯ ಫೈಲ್ವಾನರಾದ ಕೃಷ್ಣಪ್ಪ, ನಂಜುಂಡಪ್ಪ, ಚನ್ನಬಸಪ್ಪ, ಬಿ.ಎಸ್ ನಾರಾಯಣಪ್ಪ ಮತ್ತು ನರಸಿಂಹಾಚಾರ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.