156 ವರ್ಷ ಪೂರೈಸಿರುವ ಭದ್ರಾ ಸೇತುವೆ ಪ್ಯಾರಫಿಟ್ ವಾಲ್ ನವೀಕರಿಸುವ ಕಾಮಗಾರಿ
ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ೧೫೬ ವರ್ಷ ಪೂರೈಸಿರುವ ಭದ್ರಾ ಸೇತುವೆ ಪ್ಯಾರಫಿಟ್ ವಾಲ್ ನವೀಕರಿಸುವ ಕಾಮಗಾರಿ ಮಂಗಳವಾರರಿಂದ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಶ್ರೀ ವಿಶ್ವಕರ್ಮ ಶಿಲ್ಪಿ ಅಮರಶಿಲ್ಪಿ ಜಕಣಚಾರಿ ಸೇತುವೆ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಭದ್ರಾವತಿ : ನಗರದ ಹೃದಯ ಭಾಗದಲ್ಲಿರುವ 156 ವರ್ಷ ಪೂರೈಸಿರುವ ಭದ್ರಾ ಸೇತುವೆ ಪ್ಯಾರಫಿಟ್ ವಾಲ್ ನವೀಕರಿಸುವ ಕಾಮಗಾರಿ ಮಂಗಳವಾರರಿಂದ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಶ್ರೀ ವಿಶ್ವಕರ್ಮ ಶಿಲ್ಪಿ ಅಮರಶಿಲ್ಪಿ ಜಕಣಚಾರಿ ಸೇತುವೆ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಭದ್ರಾ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಕೆಲವು ವರ್ಷಗಳ ಹಿಂದೆ ಶ್ರೀ ವಿಶ್ವಕರ್ಮ ಶಿಲ್ಪಿ ಅಮರಶಿಲ್ಪಿ ಜಕಣಚಾರಿ ಸೇತುವೆ ನಿರ್ಮಾಣಗೊಳಿಸಲಾಗಿದ್ದು, ಈ ನಡುವೆ ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆ ಹಿನ್ನಲೆಯಲ್ಲಿ ಭದ್ರಾ ಸೇತುವೆ ಮೇಲೆ ಏಕ ಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಲಾಗಿದೆ. ಇದೀಗ ಸೇತುವೆ ಎರಡು ಬದಿ ಪ್ಯಾರಫಿಟ್ ವಾಲ್ ನವೀಕರಿಸಲಾಗುತ್ತಿದೆ.
ಮೈಸೂರು ರಾಜ್ಯದ ಪಿಡಬ್ಲ್ಯೂಡಿ ಇಲಾಖೆಯಿಂದ 1870ರಲ್ಲಿ ಸುಮಾರು 74,997 ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭದ್ರಾ ಸೇತುವೆಯನ್ನು ಹಂತ ಹಂತವಾಗಿ ನವೀಕರಿಸಿಕೊಂಡಲ್ಲಿ ಇನ್ನೂ ಹೆಚ್ಚಿನ ವರ್ಷಗಳು ಬಾಳಿಕೆ ಬರಲಿದೆ. ಇದಕ್ಕೂ ಮೊದಲು ಸೇತುವೆ ಎರಡು ಬದಿಯಲ್ಲಿ ಬೆಳೆದಿರುವ ಅರಳಿ ಗಿಡಗಳು ಸೇರಿದಂತೆ ಸೇತುವೆಯ ಕಟ್ಟಡಕ್ಕೆ ಮಾರಕವಾಗಿರುವ ಗಿಡಗಂಟಿಗಳನ್ನು ಬೇರು ಸಮೇತ ತೆರವುಗೊಳಿಸಬೇಕಾಗಿದೆ.
