ಸುಲ್ತಾನ ಮಟ್ಟಿ ಸರ್ಕಾರಿ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ : ಶಾಲೆಯ ಸುತ್ತಾಮುತ್ತಾ ಸ್ವಚ್ಛತಾ ಕಾರ್ಯ

ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯ ನಡೆಸುವುದನ್ನು ಮೈಗೂಡಿಸಿಕೊಳ್ಳಿ : ಎಂ.ಆರ್ ರೇವಣಪ್ಪ



ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗಾಂಧಿ ಜಯಂತಿ ಪ್ರಯುಕ್ತ ಶಾಲಾ ಆವರಣದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಭದ್ರಾವತಿ: ತಾಲೂಕಿನ ಗ್ರಾಮೀಣ ಭಾಗದ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಗಾಂಧಿ ಜಯಂತಿ ಪ್ರಯುಕ್ತ ಶಾಲಾ ಆವರಣದ ಸುತ್ತಮುತ್ತ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

    ಶಾಲೆಯ  ಮುಖ್ಯ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿಯವರು ಕಂಡ ಕನಸು ನನಸಾಗಬೇಕಾದರೆ ಮೊದಲು ನಮ್ಮ ಮನೆಯ ಸುತ್ತಮುತ್ತ, ನಂತರ ನಾವು ಕೆಲಸ ಮಾಡುವ ನಮ್ಮ ಸ್ಥಳದ ಸುತ್ತಮುತ್ತಲಿನ ಪರಿಸರ, ಗ್ರಾಮ, ನಗರ, ರಾಜ್ಯ ಮತ್ತು ದೇಶವನ್ನು ಸ್ವಚ್ಛವಾಗಿಡಲು ಮುಂದಾಗಬೇಕು. ಪ್ರತಿಯೊಬ್ಬರು ಸ್ವಚ್ಛತಾ ಕಾರ್ಯ ನಡೆಸುವುದನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

     ಸ್ವಚ್ಛತಾ ಕಾರ್ಯದ ನಂತರ ತ್ಯಾಜ್ಯವನ್ನು ಗ್ರಾಮದ ಹಿರಿಯರಾದ ಗೋಪಾಲಣ್ಣನವರ ಒಂಟಿ ಎತ್ತಿನಗಾಡಿಗೆ ತುಂಬಿ ಸಾಗಿಸಿದ್ದು ವಿಶೇಷವಾಗಿತ್ತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಹಿರಿಯರಾದ ಸರಸಮ್ಮ, ಪುಷ್ಪಮ್ಮ,  ಚಂದ್ರು, ಪ್ರೀತಮ್ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಭಾಗವಹಿಸಿದ್ದರು.