ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಅ.೧೧ರಿಂದ ಶರನ್ನವರಾತ್ರಿ ಮಹೋತ್ಸವ


ಶ್ರೀ ಚಂಡಿಕಾದುರ್ಗಾ ದೇವಸ್ಥಾನ

    ಭದ್ರಾವತಿ : ಪ್ರತಿ ವರ್ಷದಂತೆ ಈ ಬಾರಿ ಸಹ ನಗರದ ಬಿ.ಎಚ್ ರಸ್ತೆ, ಲೋಯರ್ ಹುತ್ತಾ ಶ್ರೀ ಚಂಡಿಕಾದುರ್ಗಾ ದೇವಸ್ಥಾನದಲ್ಲಿ ಅ.೧೧ ರಿಂದ ೨೦ರ ವರೆಗೆ ಶರನ್ನವರಾತ್ರಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

    ಪ್ರತಿ ದಿನ ಬೆಳಿಗ್ಗೆ ೧೦.೩೦ ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಲಲಿತ ಸಹಸ್ರನಾಮ, ಕುಂಕುಮಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಮಹಾಪ್ರಸಾದ ವಿತರಣೆ ಹಾಗು ಸಂಜೆ ೬.೩೦ರಿಂದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ ೮ ಗಂಟೆಗೆ ಮಹಾಮಂಗಳಾರತಿ, ನಂತರ ಅಷ್ಟಾವಧಾನ ಸೇವೆಯು ನೆರವೇರಲಿದೆ. ಅಲ್ಲದೆ ಪ್ರತಿ ದಿನ ಅಮ್ಮನವರಿಗೆ ವಿಶೇಷ ಅಲಂಕಾರ ನಡೆಯಲಿದೆ.

    ಅ.೨೦ರಂದು ೩೯ನೇ ವರ್ಷದ ಸಾಮೂಹಿಕ ಶ್ರೀ ಚಂಡಿಕಾ ಹೋಮ ನಡೆಯಲಿದ್ದು,  ೧೨.೩೦ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ, ನಂತರ ಅನ್ನಸಂತರ್ಪಣೆ ನೆರವೇರಲಿದೆ. ೨೧ರಂದು ಸಂಜೆ ೫.೩೦ಕ್ಕೆ ಶ್ರೀ ಚಂಡಿಕಾ ದುರ್ಗಾ ಅಮ್ಮನವರ ಪಲ್ಲಕ್ಕಿ ಉತ್ಸವ ನಡೆಯಲಿದೆ.

    ಧಾರ್ಮಿಕ ಆಚರಣೆಗಳು ಪ್ರಧಾನ ತಂತ್ರಿಗಳಾದ ವೇದಬ್ರಹ್ಮ ಶ್ರೀ ಹೃಷಿಕೇಶ ಬಾಯರಿ ಹಾಗು ಉಮೇಶ ಬಾಯರಿ ಬಾರ್ಕೂರು ನೇತೃತ್ವದ ತಂಡದಿಂದ ಧಾರ್ಮಿಕ ಆಚರಣೆಗಳು ಜರುಗಲಿದ್ದು, , ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.