ಭದ್ರಾವತಿಯಲ್ಲಿ ಮಾಧ್ವ ಮಂಡಳಿಯಿಂದ ಮಧ್ವಾಚಾರ್ಯ ಜಯಂತಿ ಆಚರಣೆ
ದ್ವೈತ ವೇದಾಂತದ ಪ್ರತಿಪಾದಕರಾದ ಜಗದ್ಗುರು ಶ್ರೀ ಮಧ್ವಾಚಾರ್ಯರ ಸ್ಮರಣೆಗಾಗಿ ಪ್ರಸ್ತುತ ರಾಜ್ಯ ಸರ್ಕಾರ ಪ್ರತಿ ವರ್ಷ ಮಧ್ವಾಚಾರ್ಯ ಜಯಂತಿ ಆಚರಣೆಗೆ ಆದೇಶಿಸಿರುವ ಹಿನ್ನಲೆಯಲ್ಲಿ ಭದ್ರಾವತಿ ನಗರದಲ್ಲಿ ಅಖಿಲ ಭಾರತ ಮಾಧ್ವ ಮಂಡಳಿಯಿಂದ ಮಧ್ವಾಚಾರ್ಯ ಜಯಂತಿ ಆಚರಿಸಲಾಯಿತು.
ಭದ್ರಾವತಿ : ದ್ವೈತ ವೇದಾಂತದ ಪ್ರತಿಪಾದಕರಾದ ಜಗದ್ಗುರು ಶ್ರೀ ಮಧ್ವಾಚಾರ್ಯರ ಸ್ಮರಣೆಗಾಗಿ ಪ್ರಸ್ತುತ ರಾಜ್ಯ ಸರ್ಕಾರ ಪ್ರತಿ ವರ್ಷ ಮಧ್ವಾಚಾರ್ಯ ಜಯಂತಿ ಆಚರಣೆಗೆ ಆದೇಶಿಸಿರುವ ಹಿನ್ನಲೆಯಲ್ಲಿ ನಗರದಲ್ಲಿ ಅಖಿಲ ಭಾರತ ಮಾಧ್ವ ಮಂಡಳಿಯಿಂದ ಮಧ್ವಾಚಾರ್ಯ ಜಯಂತಿ ಆಚರಿಸಲಾಯಿತು.
ಹಳೇನಗರದ ಗುರು ಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಿಂದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೂ ಶ್ರೀ ಮಧ್ವಾಚಾರ್ಯರ ಭಾವಚಿತ್ರ ಹಾಗೂ ಭಜನೆ ಮತ್ತು ವೇದಘೋಷದೊಂದಿಗೆ ಪಲ್ಲಕ್ಕಿ ಉತ್ಸವ ನಡೆಸಲಾಯಿತು. ನಂತರ ವೇದಬ್ರಹ್ಮ ಶ್ರೀ ಗೋಪಾಲಾಚಾರ್ ರವರಿಂದ ಮಧ್ವಾಚಾರ್ಯರ ಕುರಿತು ಉಪನ್ಯಾಸ ನಡೆಯಿತು. ಮಧ್ವಾಚಾರ್ಯರ ಜಯಂತಿ ಆಚರಣೆಗೆ ಆದೇಶಿಸಿರುವ ಹಿನ್ನಲೆಯಲ್ಲಿ ಕೆ.ಎಸ್ ಸುಧೀಂದ್ರರವರು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರುಳಿಧರ್ ತಂತ್ರಿ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್ ಹಾಗೂ ಖಜಾಂಚಿ ನಿರಂಜನಾಚಾರ್ಯ, ಜಯತೀರ್ಥ, ವೆಂಕಟೇಶ್, ಸುಬ್ಬಣ್ಣ, ರಾಘವೇಂದ್ರ, ಶ್ರೀನಿವಾಸ ಆಚಾರ್, ಸಮಿರಾಚಾರ್ಯ, ರಾಘವೇಂದ್ರ ಮತ್ತು ಗಿರಿ, ಇನ್ನಿತರ ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ವಿವಿಧ ಭಜನಾ ಮಂಡಳಿಗಳ ಮಹಿಳೆಯರು ಪಾಲ್ಗೊಂಡಿದ್ದರು.
