ಪ್ರಧಾನ ಮಂತ್ರಿ ಸೂರ್ಯ ಫರ್ ಸೇವಾ ಸೇತು ಯೋಜನೆಯಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲ : ಎಚ್.ಆರ್ ವೀರೇಂದ್ರ



ಭದ್ರಾವತಿಯಲ್ಲಿ ಮೆಸ್ಕಾಂ ನಗರ ಮತ್ತು ಗ್ರಾಮಾಂತರ ಉಪವಿಭಾಗ ವ್ಯಾಪ್ತಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಫರ್ ಸೇವಾ ಸೇತು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಪೂರಕವಾಗಿ ೩ ದಿನಗಳ ಕಾಲ ಕಾರ್ಯಾಗಾರಕ್ಕೆ ಗುರುವಾರ ನಗರದ ಉಂಬ್ಳೆಬೈಲು ರಸ್ತೆ, ಭಾರತೀಯ ಜೀವಾ ವಿಮಾ(ಎಲ್‌ಐಸಿ) ಕಛೇರಿ ಸಮೀಪದ, ಮೆಸ್ಕಾಂ ಕಛೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.

ಭದ್ರಾವತಿ : ಮೆಸ್ಕಾಂ ನಗರ ಮತ್ತು ಗ್ರಾಮಾಂತರ ಉಪವಿಭಾಗ ವ್ಯಾಪ್ತಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಫರ್ ಸೇವಾ ಸೇತು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಪೂರಕವಾಗಿ ೩ ದಿನಗಳ ಕಾಲ ಕಾರ್ಯಾಗಾರಕ್ಕೆ ಗುರುವಾರ ನಗರದ ಉಂಬ್ಳೆಬೈಲು ರಸ್ತೆ, ಭಾರತೀಯ ಜೀವಾ ವಿಮಾ(ಎಲ್‌ಐಸಿ) ಕಛೇರಿ ಸಮೀಪದ, ಮೆಸ್ಕಾಂ ಕಛೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.

    ಕಾರ್ಯಾಗಾರ ಉದ್ಘಾಟಿಸಿದ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಚ್.ಆರ್ ವೀರೇಂದ್ರ ಮಾಹಿತಿ ನೀಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಮೆಸ್ಕಾಂ ಪ್ರಧಾನ ಮಂತ್ರಿ ಸೂರ್ಯ ಫರ್ ಸೇವಾ ಸೇತು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ. ಈ ಯೋಜನೆಯಿಂದ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಇದಕ್ಕೆ ಪೂರಕವಾಗಿ ವಿವಿಧ ಸೋಲಾರ್ ಕಂಪನಿಗಳ ಅಧಿಕೃತ ಮಾರಾಟಗಾರರೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಸೋಲಾರ್ ಅಳವಡಿಕೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಲಿದ್ದು, ಅಲ್ಲದೆ ಗ್ರಾಹಕರಿಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಸಹ ಕಲ್ಪಿಸಿಕೊಡಲಿದ್ದಾರೆ. ಸೋಲಾರ್ ಅಳವಡಿಕೆಯಿಂದ ಮೆಸ್ಕಾಂಗೆ ವಿದ್ಯುತ್ ಉಳಿತಾಯವಾಗಲಿದ್ದು, ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ೨೦ ವರ್ಷಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದರು.


    ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಬೀರಪ್ಪ, ಮುನಾಫ್ ಮತ್ತು ವಿಭಾಗ ಕಛೇರಿ ಲೆಕ್ಕಾಧಿಕಾರಿ ಅಶ್ವಿನ್ ಕುಮಾರ್ ಹಾಗು ಮೆಸ್ಕಾಂ ವಿವಿಧ ಘಟಕಗಳ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮೆಸ್ಕಾಂ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿ ವರ್ಗದವರು, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಗ್ರಾಹಕರು ಪಾಲ್ಗೊಂಡಿದ್ದರು.