ಕೆಳಗೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ : ಆರ್‌ಎಎಫ್ ವಾಹನ ಜಖಂ


ಭದ್ರಾವತಿ ಕಾಗದ ನಗರದ ಈಶ್ವರ ದೇವಸ್ಥಾನ ಬಳಿ ಬೃಹತ್ ಗಾತ್ರದ ಮರ ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ವಾಹನ ಸ್ವಲ್ಪ ಜಖಂಗೊಂಡಿದೆ.

ಭದ್ರಾವತಿ : ಕಾಗದ ನಗರದ ಈಶ್ವರ ದೇವಸ್ಥಾನ ಬಳಿ ಬೃಹತ್ ಗಾತ್ರದ ಮರ ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ನಡೆದಿದ್ದು, ಕ್ಷಿಪ್ರ ಕಾರ್ಯ ಪಡೆ(ಆರ್‌ಎಎಫ್) ವಾಹನ ಸ್ವಲ್ಪ ಜಖಂಗೊಂಡಿದೆ.


    ತುಂಬಾ ಹಳೇಯದಾದ ಮರ ಶುಕ್ರವಾರ ರಾತ್ರಿ ಸಂಜೆ ಗಾಳಿ ಮಳೆ ಸಂದರ್ಭದಲ್ಲಿ ಉರುಳಿ ಬಿದ್ದಿದೆ ಎನ್ನಲಾಗಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಭಾಗದಲ್ಲಿ ಎಂಪಿಎಂ ವಸತಿ ಗೃಹಗಳಿದ್ದು, ಬಹುತೇಕ ವಸತಿಗೃಹಗಳು ಪಾಳು ಬಿದ್ದಿವೆ. ಕೆಲವು ವಸತಿ ಗೃಹಗಳಲ್ಲಿ ಆರ್‌ಎಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ವಾಸಿಸುತ್ತಿದ್ದಾರೆ. ಈ ಭಾಗದಲ್ಲಿ ಜನರ ಸಂಚಾರ ವಿರಳವಾಗಿದೆ.