ಶ್ರೀ ಚಾಮುಂಡೇಶ್ವರಿ ದೇವಿಗೆ ಅಷ್ಟಾವಧಾನ ಭರತನಾಟ್ಯ ಸೇವೆ ಅರ್ಪಿಸಿದ ಸಾನವಿ ಭಾರದ್ವಾಜ್


ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ಭದ್ರಾವತಿ ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ಕರ್ನಾಟಕ ಕಲಾಶ್ರೀ ವಿದೂಷಿ ಪುಷ್ಪ ಕೃಷ್ಣಮೂರ್ತಿ ಅವರ ಶಿಷ್ಯೆ ಸಾನವಿ ಭಾರದ್ವಾಜ್ ಶ್ರೀ ಚಾಮುಂಡೇಶ್ವರಿ ದೇವಿಗೆ ಅಷ್ಟಾವಧಾನ ಭರತನಾಟ್ಯ ಸೇವೆ ಅರ್ಪಿಸಿದರು.

    ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ಭಾನುವಾರ ನಗರಸಭೆ ಆವರಣದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶಿವಮೊಗ್ಗ ಕರ್ನಾಟಕ ಕಲಾಶ್ರೀ ವಿದೂಷಿ ಪುಷ್ಪ ಕೃಷ್ಣಮೂರ್ತಿ ಅವರ ಶಿಷ್ಯೆ ಸಾನವಿ ಭಾರದ್ವಾಜ್ ಶ್ರೀ ಚಾಮುಂಡೇಶ್ವರಿ ದೇವಿಗೆ ಅಷ್ಟಾವಧಾನ ಭರತನಾಟ್ಯ ಸೇವೆ ಅರ್ಪಿಸಿದರು.

    ಕೆಲವು ವರ್ಷಗಳಿಂದ ನಾಡಹಬ್ಬ ದಸರಾ ಸಂದರ್ಭದಲ್ಲಿ ದೇವಿಗೆ ಭರತನಾಟ್ಯ ಸೇವೆ ಸಲ್ಲಿಸಿಕೊಂಡು ಬರಲಾಗುತ್ತಿದ್ದು, ಅಷ್ಟಾವಧಾನ ಎಂದರೆ ದೇವರಿಗೆ ಎಂಟು ವಿಧದ ಸಾಂಪ್ರದಾಯಿಕ ಹಾಗು ಕಲಾತ್ಮಕ ಸೇವೆಗಳನ್ನು ಏಕಕಾಲದಲ್ಲಿ ಅಥವಾ ಕ್ರಮ ಬದ್ಧವಾಗಿ ಅರ್ಪಿಸುವ ಒಂದು ವಿಶೇಷ ಪೂಜಾ ವಿಧಾನವಾಗಿದೆ. ಭರತನಾಟ್ಯ ಸೇವೆ ಅರ್ಪಿಸಿದ ಕಲಾವಿದೆ ಸಾನವಿ ಭಾರದ್ವಾಜ್ ಅವರನ್ನು ದಸರಾ ಆಚರಣೆ ಸಮಿತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

    ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಸುಹಾಸಿನಿ, ಪ್ರಥಮ ದರ್ಜೆ ಸಹಾಯಕ ಆರ್. ನರಸಿಂಹಮೂರ್ತಿ, ಪ್ರಮುಖರಾದ ಮೋಹನ್, ಎಸ್. ನರಸಿಂಹಚಾರ್, ವೈ. ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.