ವಿಷಕಾರಿ ಹುಳುವಿನ ಕಡಿತದಿಂದ ವಿದ್ಯುತ್ ಗುತ್ತಿಗೆದಾರ ಸಂತೋಷ್ ಶರಾವ್ ಸಾವು
ಸಂತೋಷ್ ಶರಾವ್
ಭದ್ರಾವತಿ: ಮೆಸ್ಕಾಂ ವಿದ್ಯುತ್ ಗುತ್ತಿಗೆದಾರ ಸಂತೋಷ್ ಶರಾವ್ (೪೮) ಶನಿವಾರ ಸಂಜೆ ಯಾವುದೋ ವಿಷಕಾರಿ ಹುಳುವಿನ ಕಡಿತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಂದೆ, ತಾಯಿ, ಪತ್ನಿ ಹಾಗು ೨ ತಿಂಗಳ ಮಗು ಇದೆ. ಮೆಸ್ಕಾಂ ಜೆಪಿಎಸ್ ಕಾಲೋನಿ ವಸತಿ ನಿಲಯ( ಡಿವಿಜನ್ ಬ್ಲಾಕ್ )ದಲ್ಲಿ ವಾಸಿಸುತ್ತಿದ್ದು, ಬೆಳಿಗ್ಗೆ ವಿಷಕಾರಿ ಹುಳುವಿನ ಕಡಿತಕ್ಕೆ ಒಳಗಾಗಿದ್ದಾರೆ. ಮಧ್ಯಾಹ್ನದ ನಂತರ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪ ಕ್ರೈಸ್ತರ ಸಮಾಧಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
