ಭೀರಪ್ಪ ನಿಧನ


Uploaded Image


ಭೀರಪ್ಪ

    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ಹಿರಿಯೂರು ಗ್ರಾಮದ ನಿವಾಸಿ ಭೀರಪ್ಪ(೭೭) ಭಾನುವಾರ ನಿಧನ ಹೊಂದಿದರು.

    ಓರ್ವ ಪುತ್ರಿ, ಓರ್ವ ಪುತ್ರ ಇದ್ದಾರೆ. ಭೀರಪ್ಪ ಹಿರಿಯೂರು ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಗ್ರಾಮದ ವಿಎಸ್‌ಎಸ್‌ಎನ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಗ್ರಾಮದಲ್ಲಿ ನೆರವೇರಲಿದೆ. ಗ್ರಾಮದ ಮುಖಂಡರು, ಗ್ರಾಮಸ್ಥರು, ಗಣ್ಯರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.