ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಮುರುಗೇಶ್ ಸ್ವಾಮೀಜಿ ನಿಧನ


ಶ್ರೀ ಮುರುಗೇಶ್ ಸ್ವಾಮೀಜಿ

    ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಶ್ರೀ ಮುರುಗೇಶ್ ಸ್ವಾಮೀಜಿ(೯೭) ಶುಕ್ರವಾರ ನಿಧನ ಹೊಂದಿದರು.

    ಪತ್ನಿ, ಓರ್ವ ಪುತ್ರಿ ಹಾಗು ಓರ್ವ ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಶ್ರೀ ಕ್ಷೇತ್ರ ಭದ್ರಗಿರಿ ಬೆಟ್ಟದ ಹಿಂಭಾಗದ ದುರ್ಗಿ ದೇವಸ್ಥಾನದ ಬಳಿ ಅರಳಿ ಮರದ ಹತ್ತಿರ  ನಡೆಯಲಿದೆ. ಶ್ರೀ ಮುರುಗೇಶ್ ಸ್ವಾಮೀಜಿಯವರು ಮೂಲತಃ ತಮಿಳುನಾಡಿನವರಾಗಿದ್ದು, ಸುಮಾರು ೭ ದಶಕಗಳ ಹಿಂದೆಯೇ ಇಲ್ಲಿಗೆ ಬಂದು ನೆಲೆಸಿದ್ದರು.  ಶ್ರೀ ಕ್ಷೇತ್ರದ ಶ್ರೀ ದವತ್ತೀರು ಸ್ವಾಮೀಜಿಯವರ ಶಿಷ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತ ಶ್ರೀ ಕ್ಷೇತ್ರದ ಸ್ವಾಮೀಜಿಯಾಗಿದ್ದರು.

    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಹಿರಿಯ ಪತ್ರಕರ್ತರಾದ ಕಣ್ಣಪ್ಪ, ಶ್ರೀ ಕ್ಷೇತ್ರದ ಪ್ರಮುಖರಾದ ಎ. ಚಂದ್ರಘೋಷನ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.