ಪ್ರಧಾನ ಮಂತ್ರಿ ಸೂರ್ಯ ಫರ್ ಸೇವಾ ಸೇತು ಯೋಜನೆ : ನಗರ ಗ್ರಾಹಕರಿಗೆ ಅ.೧೫ ರಿಂದ ೩ ದಿನಗಳ ಕಾಲ ಕಾರ್ಯಾಗಾರ

ಮೆಸ್ಕಾಂ ನಗರ ಉಪ ವಿಭಾಗದಿಂದ ಆಯೋಜನೆ, ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ




    ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗ ವ್ಯಾಪ್ತಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಫರ್ ಸೇವಾ ಸೇತು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಪೂರಕವಾಗಿ ಅ.೧೫ ರಿಂದ ೧೭ರವರೆಗೆ ೩ ದಿನಗಳ ಕಾಲ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

     ನಗರದ ಉಂಬ್ಳೆಬೈಲು ರಸ್ತೆ, ಭಾರತೀಯ ಜೀವಾ ವಿಮಾ(ಎಲ್‌ಐಸಿ) ಕಛೇರಿ ಸಮೀಪದ, ಮೆಸ್ಕಾಂ, ನಗರ ಉಪವಿಭಾಗದ ಅವರಣದಲ್ಲಿ ಕಾರ್ಯಾಗಾರ ಪ್ರತಿದಿನ ಬೆಳಗ್ಗೆ ೧೦.೩೦ ರಿಂದ ಸಂಜೆ  ೬ ಗಂಟೆಯವರೆಗೆ ನಡೆಯಲಿದೆ. ನಗರ ಉಪವಿಭಾಗದ ಗ್ರಾಹಕರಿಗೆ ಮನೆಯ ಚಾವಣಿಯ ಮೇಲೆ ಸೌರ ವಿದ್ಯುತ್ ಘಟಕ ಅಳವಡಿಸುವ ಕುರಿತು ಮಾಹಿತಿ ನೀಡಲಾಗುತ್ತದೆ. ಬ್ಯಾಂಕ್ ಅಧಿಕಾರಿಗಳು ಹಾಗೂ ಸೌರ ವಿದ್ಯುತ್ ಘಟಕಗಳ ಮಾರಾಟಗಾರರು ಭಾಗವಹಿಸಲಿದ್ದು, ಯೋಜನೆಗೆ ಅರ್ಜಿ ಸಲ್ಲಕೆ, ಸರ್ಕಾರದ ಸಹಾಯಧನ ಮತ್ತು ಬ್ಯಾಂಕ್ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

    ಗ್ರಾಹಕರು ತಮ್ಮ ಮನೆಯ ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ವಿವರಗಳನ್ನು ಅರ್ಜಿ ಜೊತೆಗೆ ಸಲ್ಲಿಸಬೇಕು. ನಗರ ಉಪವಿಭಾಗ ವ್ಯಾಪ್ತಿಯಲ್ಲಿ ಬರುವ

ನ್ಯೂಟೌನ್, ನ್ಯೂಕಾಲೋನಿ, ಜೆ.ಪಿ.ಎಸ್ ಕಾಲೋನಿ, ಕಾಗದನಗರ, ಸುರಗಿತೋಪು, ಉಜ್ಜನೀಪುರ, ಆನೆಕೊಪ್ಪ, ದೊಡ್ಡಗೊಪ್ಪೇನಹಳ್ಳಿ, ಹಳೇಬುಳ್ಳಾಮರ, ಹೊಸಬುಳ್ಳಾಪುರ, ಮಿಲ್ಟ್ರಿಕ್ಯಾಂಪ್, ತಿಮ್ಲಾಪುರ, ಹುಡ್ಕೋ ಕಾಲೋನಿ, ವಿದ್ಯಾಮಂದಿರ, ಕೂಲಿಬ್ಲಾಕ್ ಶೆಡ್. ಆಂಜನೇಯ ಅಗ್ರಹಾರ, ಜನ್ನಾಪುರ, ಎಸ್.ಜೆ ರಸ್ತೆ, ರಾಜಪ್ಪ ಬಡಾವಣೆ. ಕಿತ್ತೂರು ರಾಣಿ ಚೆನ್ನಮ್ಮ ಬಡಾವಣಿ, ಗಣೇಶ ಕಾಲೋನಿ, ವಾಣಿಜ್ಯ ರಸ್ತೆ, ಅಂಗಾಯತರ ಬೀದಿ, ಎನ್.ಟಿ.ಬಿ ರಸ್ತೆ, ನ್ಯೂಟೌನ್ ಪೋಲೀಸ್ ಠಾಣೆ ರಸ್ತೆ. ಫಿಲ್ಟರ್ ಶೆಡ್, ಹೊಸಸೇತುವೆ ರಸ್ತೆ, ಸಿದ್ದಾರೂಢನಗರ, .ಶಂಕರ ಮಠ. ಕೆ.ಎಸ್.ಆರ್.ಟಿ.ಸಿ. ಡಿಪೋ ಭಾಗ, ಹಳೇನಗರ, ತಾಲೂಕು ಕಛೇರಿ ರಸ್ತೆ, ಸಿ.ಎನ್. ರಸ್ತೆ, ರಂಗಪ್ಪ ವೃತ್ತ, ಹೊಳೆಹೊನ್ನೂರು ರಸ್ತೆ, ಅನ್ವರ್ ಕಾಲೋನಿ, ಅಮೀರ್‌ಜಾನ್ ಕಾಲೋನಿ. ಮೊಮಿನ್ ಮೊಹಲ್ಲಾ, ಖಲಂದರನಗರ, ಇಂದಿರಾನಗರ, ದುರ್ಗಿನಗರ, ಸಂತೆ ಮೈದಾನ, ಕನಕನಗರ, ಶ್ರೀ.ಹಳ್ಳದಮ್ಮನವರ ಬೀದಿ, ಖಾಜಿ ಮೊಹಲ್ಲಾ, ಕೋಟೆ ಭಾಗ, ಕಂಚಿನ ಬಾಗಿಲು, ಜಟ್‌ಪಟ್ ನಗರ, ಅಂಬೇಡ್ಕರ್ ನಗರ, ಭೂತನಗುಡಿ, ಸರ್ಕಾರಿ ಆಸ್ಪತ್ರೆ ಭಾಗ, ಶ್ರೀ ಲಕ್ಷ್ಮಿನರಸೀಂಹಸ್ವಾಮಿ ದೇವಾಲಯದ ರಸ್ತೆ, ಮಾಧವಾಚಾರ್ ವೃತ್ತ, ಶ್ರೀ.ಬಸವೇಶ್ವರ ವೃತ್ತ, ತರೀಕೆರೆ ರಸ್ತೆ, ಎಕಿನ್ಸಾ ಕಾಲೊನಿ, ಗಾಂಧಿನಗರ, ಕುವೆಂಪುನಗರ, ನೆಹರು ನಗರ, ಸಾದತ್ ಕಾಲೋನಿ, ಕೋಡಿಹಳ್ಳಿ, ಗುಂಡುರಾವ್ ಶೆಡ್, ಬಸವನಗುಡಿ, ಸುಣ್ಣದಹಳ್ಳಿ, ಮಾರುತಿನಗರ, ವೇಲೂರು ಶೆಡ್, ಜನ್ನಾಪುರ, ಕುರುಬರ ಬೀದಿ, ಜಿಂಕ್ ಲೈನ್, ಹುತ್ತಾಕಾಲೋನಿ, ಭಂಡಾರಹಳ್ಳಿ, ಕಡದಕಟ್ಟೆ, ಕವಲುಗುಂದಿ ಹೆಬ್ಬಂಡಿ, ಬಿ.ಎಚ್.ರಸ್ತೆ, ಕ.ರಾ.ರ.ಸಾ.ನಿ. ಬಸ್ ನಿಲ್ದಾಣದ ಭಾಗ, ಸಂಜಯ ಕಾಲೋನಿ, ಲೋಯರ್ ಹುತ್ತಾ, ಕೈಗಾರಿಕಾ ಪ್ರದೇಶ, ದೊಣಬಘಟ್ಟ ರಸ್ತೆ, ಹಾಲಪ್ಪ ವೃತ್ತ, ಚಾಮೇಗೌಡ ಏರಿಯಾ, ಮೀನುಗಾರರ ಬೀದಿ, ಗೌಳಿಗರ ಬೀದಿ, ಶಂಕರ ಚಿತ್ರ ಮಂದಿರದ ಭಾಗ, ರೈಲು ನಿಲ್ದಾಣದ ಭಾಗ, ಮೂಪಾ ಕಾಂಪೌಂಡ್, ಹೊಸಸಿದ್ದಾಪುರ, ಎನ್.ಟಿ.ಬಿ ಬಡಾವಣೆ, ಬೈಪಾಸ್ ರಸ್ತೆ, ವೀರಾಪುರ, ಹೊಸಸಿದ್ದಾಪುರ, ಹಳೇ ಸಿದ್ದಾಪುರ, ತಾಂಡ್ಯ, ಸಿದ್ದಾಪುರ ಹೊಸೂರು, ಸಂಕ್ಲಿಪುರ, ಬೊಮ್ಮನಕಟ್ಟೆ, ಮೂಲೆಕಟ್ಟೆ, ಎನ್.ಎಮ್.ಸಿ. ರಸ್ತೆ, ಸಂತೆ ಮೈದಾನ, ಭೋವಿಕಾಲೋನಿ, ಹೊಸಮನೆ, ತಮ್ಮಣ್ಣ ಕಾಲೋನಿ, ಕೇಶವಪುರ, ಸುಭಾಷನಗರ, ವಿಜಯನಗರ, ಕಣಕಟ್ಟೆ, ಭದ್ರಾಕಾಲೋನಿ, ಸೀಗೇಬಾಗಿ, ಸೈಯ್ಯದ್ ಕಾಲೋನಿ, ಆರ್.ಎಮ್.ಸಿ ಭಾಗ. ಕಬಳೀಕಟ್ಟೆ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ನಿದಿಗೆ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಹಳೇಜೇಡಿಕಟ್ಟೆ, ಡೈರಿ ವೃತ್ತ. ಕೆ.ಎಸ್.ಆರ್.ಪಿ. ವಸತಿ ಗೃಹಗಳು, ಜಯಂತಿ ಗ್ರಾಮದ ಭಾಗ, ಶಿವರಾಮನಗರ, ವಿಶ್ವೇಶ್ವರಾಯನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ ಎಂದು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.