ನಾಡಹಬ್ಬ ದಸರಾ ಆಚರಣೆಗೆ ಅಧಿಕೃತ ಆಹ್ವಾನ
ಉದ್ಘಾಟಕರಾಗಿ ಹಿರಿಯ ಶಿಕ್ಷಕ ವೆಂಕಟೇಶ್ ಆಯ್ಕೆ
ಭದ್ರಾವತಿ ನಗರದಲ್ಲಿ ೧೧ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ನೇತೃತ್ವದಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಪೌರಾಯುಕ್ತರು ಮತ್ತು ಅಧಿಕಾರಿಗಳ ತಂಡ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಆಹ್ವಾನಿಸಲಾಯಿತು.
ಭದ್ರಾವತಿ : ನಗರದಲ್ಲಿ ೧೧ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆಗೆ ಉದ್ಘಾಟಕರು, ಜನಪ್ರತಿನಿಧಿಗಳು ಹಾಗು ಗಣ್ಯರನ್ನು ದಸರಾ ಆಚರಣಾ ಸಮಿತಿಯಿಂದ ಆಹ್ವಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ನೇತೃತ್ವದಲ್ಲಿ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಹಾಗು ನಗರಸಭೆ ಪೌರಾಯುಕ್ತರು ಮತ್ತು ಅಧಿಕಾರಿಗಳ ತಂಡ ದಸರಾ ಆಚರಣೆಗೆ ಉದ್ಘಾಟಕರಾದ ಹಿರಿಯ ಶಿಕ್ಷಕ ವೆಂಕಟೇಶ್, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಪ್ರದೀಪ್ ದೇವಗಿರಿ ಸೇರಿದಂತೆ ಇನ್ನಿತರರಿಗೆ ಆಹ್ವಾನ ಪತ್ರಿಕೆ ನೀಡುವ ಮೂಲಕ ಅಧಿಕೃತವಾಗಿ ಆಹ್ವಾನಿಸಲಾಯಿತು.
ಹಿರಿಯ ಶಿಕ್ಷಕ ವೆಂಕಟೇಶ್ :
ಭದ್ರಾವತಿಯಲ್ಲಿ ಆಯೋಜಿಸಲಾಗಿರುವ ನಾಡಹಬ್ಬ ದಸರಾ ಆಚರಣೆ ಉದ್ಘಾಟಕ, ಹಿರಿಯ ಶಿಕ್ಷಕ ವೆಂಕಟೇಶ್
ಈ ಬಾರಿ ನಾಡಹಬ್ಬ ದಸರಾ ಆಚರಣೆ ಉದ್ಘಾಟನೆಗೆ ಹಿರಿಯ ಶಿಕ್ಷಕ ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಎಸ್‌ಎಸ್‌ಎಲ್‌ಸಿ ಮಕ್ಕಳು ಫಲಿತಾಂಶದಲ್ಲಿ ಹೆಚ್ಚು ಸುಧಾರಣೆ ಕಾಯ್ದುಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಆಶಯದೊಂದಿಗೆ ನಗರದಲ್ಲಿ ಅನು ಇನ್‌ಸ್ಟಿಟ್ಯೂಟ್ ಎಂಬ ಹೆಸರಿನ ಖಾಸಗಿ ಪಾಠ ಶಾಲೆ ಆರಂಭಿಸುವ ಮೂಲಕ ವೆಂಕಟೇಶ್ ಚಿರಪರಿಚಿತರಾಗಿದ್ದರು. ಈ ಪಾಠ ಶಾಲೆಯಲ್ಲಿ ಕಲಿತ ಬಹುತೇಕ ಮಕ್ಕಳು ಪ್ರಸ್ತುತ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ವೆಂಕಟೇಶ್‌ರವರ ಕೊಡುಗೆ ಹೆಚ್ಚಿನದ್ದಾಗಿದ್ದು, ಇವರ ಸೇವೆಯನ್ನು ಗುರುತಿಸಿ ಇದೀಗ ನಾಡಹಬ್ಬ ದಸರಾ ಉದ್ಘಾಟಕರನ್ನಾಗಿ ಆಯ್ಕೆ ಮಾಡಲಾಗಿದೆ.

.jpg)