ಮೈಸೂರು ದಸರಾ ಪುಸ್ತಕ ಮೇಳದಲ್ಲಿ `ಮಾತಿನ ನಿಲ್ದಾಣ' ಬಿಡುಗಡೆ
ಗಮನ ಸೆಳೆದ ಪತ್ರಕರ್ತ ಸಂತೋಷ್ ಭದ್ರಾವತಿ
ನಾಡಹಬ್ಬ ದಸರಾ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಮೈಸೂರಿನಲ್ಲಿ ಆಯೋಜಿಸಿದ್ದ ದಸರಾ ಪುಸ್ತಕ ಮೇಳದಲ್ಲಿ ಭದ್ರಾವತಿ ಕಾಗದನಗರದ ನಿವಾಸಿ, ಪತ್ರಕರ್ತ ಟಿ.ಎಚ್ ಸಂತೋಷ್ ಕುಮಾರ್ರವರ ಕವನ ಸಂಕಲನ `ಮಾತಿನ ನಿಲ್ದಾಣ' ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್ ಮುಕುಂದರಾಜ್ ಬಿಡುಗಡೆಗೊಳಿಸಿದರು.
ಭದ್ರಾವತಿ: ನಾಡಹಬ್ಬ ದಸರಾ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಮೈಸೂರಿನಲ್ಲಿ ಆಯೋಜಿಸಿದ್ದ ದಸರಾ ಪುಸ್ತಕ ಮೇಳದಲ್ಲಿ ಕಾಗದನಗರದ ನಿವಾಸಿ, ಪತ್ರಕರ್ತ ಟಿ.ಎಚ್ ಸಂತೋಷ್ ಕುಮಾರ್ರವರ ಕವನ ಸಂಕಲನ `ಮಾತಿನ ನಿಲ್ದಾಣ' ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್ ಮುಕುಂದರಾಜ್ ಬಿಡುಗಡೆಗೊಳಿಸಿದರು.
ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿನ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ವೇದಿಕೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನದ ಕರ್ತೃ ಟಿ.ಎಸ್ ಸಂತೋಷ್ ಕುಮಾಋ, ಪ್ರಮುಖರಾದ ನಿರ್ಮಲಾ ಮಠಪತಿ, ಸುಚಿತ್ರಾ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಟಿ.ಎಚ್ ಸಂತೋಷ್ ಕುಮಾರ್ ಕನ್ನಡ ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರದಲ್ಲಿ ಸಂತೋಷ್ ಭದ್ರಾವತಿ ಎಂಬ ಹೆಸರಿನಲ್ಲಿ ಚಿರಪರಿಚಿತರಾಗಿದ್ದು, ೨೦೦೨ರಲ್ಲಿ ಹವ್ಯಾಸಿ ಪತ್ರಕರ್ತರಾಗಿ ಪತ್ರಿಕಾ ಕ್ಷೇತ್ರ ಪ್ರವೇಶಿಸಿದರು. ನಂತರ ಗ್ರಾಮೀಣ ವರದಿಗಾರ, ವರದಿಗಾರ, ಉಪಸಂಪಾದಕ, ಹಿರಿಯ ಉಪಸಂಪಾದಕರಾಗಿ ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ೨೦೧೫ರಲ್ಲಿ ಚಿನ್ನಿದಾಂಡು, ಬುಗುರಿ ಎಂಬ ಮಕ್ಕಳ ಕವನ ಸಂಕಲನ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿದರು. ಎರಡನೇ ಕೃತಿ ಸಿನಿಮಾ ಲೋಕದ ಸಾಮ್ರಾಟ(೨೦೨೦), ೨೦೨೫ರಲ್ಲಿ ಮೂರನೇ ಕೃತಿ ಕಾಲದ ಕಥನ ಕವನ ಸಂಕಲನ ಹಾಗು ಇದೀಗ ನಾಲ್ಕನೆ ಕೃತಿ ಮಾತಿನ ನಿಲ್ದಾಣ ಕವನ ಸಂಕಲನ ಬಿಡುಗೊಳಿಸಿದ್ದಾರೆ.
