ಅ.೨೧ರಂದು ಶ್ರೀನಿವಾಸ ದೇವರ ರಥೋತ್ಸವ

ಭದ್ರಾವತಿ : ನಗರದ ಮಿಲ್ಟ್ರಿಕ್ಯಾಂಪ್ ಶ್ರೀ ಕ್ಷೇತ್ರ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಅ.೨೧ರ ಬುಧವಾರ ಶ್ರೀ ಶ್ರೀನಿವಾಸ ದೇವರ ರಥೋತ್ಸವ ನಡೆಯಲಿದೆ.

    ಶರನ್ನವರಾತ್ರಿ ಉತ್ಸವದ ಅಂಗವಾಗಿ ಪ್ರತಿ ದಿನ ಸ್ವಾಮಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಮಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನಡೆಯುತ್ತಿದ್ದು, ಅ.೨೧ರಂದು ಸ್ವಾಮಿಯ ರಥೋತ್ಸವ ಅಂಗವಾಗಿ ಕಲಾಹೋಮ ನಡೆಯಲಿದೆ. ಮಧ್ಯಾಹ್ನ ಪ್ರಸಾದ ವಿನಿಯೋಗವಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

 

 

Ananthakumara, Reporter, Kannadaprabha, NDK/31A, Near, Sri Satyasayi Baba school, Newtown, Bhadravathi:-577301(Tq) Shimoga(Dis) Mob: 9738801478 : 9482007466