ಸ್ಕಂದ ಟ್ರಸ್ಟ್‌ನಿಂದ ಉದ್ಭವ ಶ್ರೀ ಆನೇಕಲ್ ಗಣಪತಿ ದೇವಸ್ಥಾನಕ್ಕೆ ಆಕರ್ಷಕ ನಾಮಫಲಕ ಕೊಡುಗೆ
ಭದ್ರಾವತಿಯಲ್ಲಿ ಹಲವು ವರ್ಷಗಳಿಂದ ವಿಭಿನ್ನ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಗರದ ಸ್ಕಂದ ಟ್ರಸ್ಟ್ ವತಿಯಿಂದ ತಾಲೂಕಿನ ಹುಣಸೇಕಟ್ಟೆ ಸಮೀಪದ ಉಂಬ್ಳೆಬೈಲು ರಸ್ತೆಯಲ್ಲಿರುವ ಐತಿಹಾಸಿಕ ಉದ್ಭವ ಶ್ರೀ ಆನೆಕಲ್ ಗಣಪತಿ ದೇವಸ್ಥಾನಕ್ಕೆ ನಾಮಫಲಕ ಕೊಡುಗೆಯಾಗಿ ನೀಡಲಾಗಿದೆ.
ಭದ್ರಾವತಿ : ಹಲವು ವರ್ಷಗಳಿಂದ ವಿಭಿನ್ನ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಗರದ ಸ್ಕಂದ ಟ್ರಸ್ಟ್ ವತಿಯಿಂದ ತಾಲೂಕಿನ ಹುಣಸೇಕಟ್ಟೆ ಸಮೀಪದ ಉಂಬ್ಳೆಬೈಲು ರಸ್ತೆಯಲ್ಲಿರುವ ಐತಿಹಾಸಿಕ ಉದ್ಭವ ಶ್ರೀ ಆನೆಕಲ್ ಗಣಪತಿ ದೇವಸ್ಥಾನಕ್ಕೆ ನಾಮಫಲಕ ಕೊಡುಗೆಯಾಗಿ ನೀಡಲಾಗಿದೆ.
ಉಂಬ್ಳೆಬೈಲು ಮತ್ತು ಭದ್ರಾವತಿ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಈ ದೇವಸ್ಥಾನದ ಬಳಿ ತಮ್ಮ ವಾಹನಗಳನ್ನು ನಿಲ್ಲಿಸಿ ವಿಘ್ನನಿವಾರಕನಿಗೆ ನಮಸ್ಕರಿಸಿ ಮುಂದಕ್ಕೆ ತೆರಳುವುದು ವಾಡಿಕೆವಾಗಿದೆ. ಪ್ರತಿ ದಿನ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ತನ್ನದೇ ಆದ ಐತಿಹಾಸಿಕ ಮಹತ್ವ ಹೊಂದಿರುವ ಈ ದೇವಸ್ಥಾನ ಭಕ್ತರನ್ನು ಆಕರ್ಷಿಸಲು ನೆರವಾಗುವಂತೆ ನೂತನ ಫಲಕ ಅಳವಡಿಸಲಾಗಿದೆ. ಸ್ಕಂಟ್ ಟ್ರಸ್ಟ್ ಪ್ರಮುಖರಾದ ಶ್ರೀಧರ್, ನಾರಾಯಣ ಮತ್ತು ಮಧು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸ್ಕಂದ ಟ್ರಸ್ಟ್ ವತಿಯಿಂದ ಈಗಾಗಲೇ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ಉಚಿತವಾಗಿ ಬರವಣಿಗೆ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸುವ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಲಾಗಿದೆ.
