7 ತಿಂಗಳು 21 ದಿನಗಳಲ್ಲೇ ವಿಶ್ವ ದಾಖಲೆ ನಿರ್ಮಿಸಿದ ಎಸ್.ಎಂ ಮಿಥುಷಾ

ಎಸ್.ಎಂ ಮಿಥುಷಾ ಸಾಧನೆಗೆ ಬೆರಗಾದ ಶಾಸಕರು, ಅಧಿಕಾರಿಗಳು


ಕೇವಲ 7 ತಿಂಗಳು 21 ದಿನಗಳ ವಯಸ್ಸಿನ ಹೆಣ್ಣು ಮಗು ಎಸ್.ಎಂ ಮಿಥುಷಾ ಎರಡೂ ಕೈಗಳಿಂದ ತೂಕವನ್ನು ಎತ್ತಿ ಹಿಡಿಯುವ ವಿಶಿಷ್ಟ ಸಾಮರ್ಥ್ಯ ಪ್ರದರ್ಶಿಸಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿ ಗಮನ ಸೆಳೆದಿದೆ. ಮಿಥುಷಾಳ ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ತಾಲೂಕು ಆಡಳಿತ ನ.1ರ ಕನ್ನಡ ರಾಜೋತ್ಸವದಂದು ಅಭಿನಂದಿಸಿ ಪ್ರೋತ್ಸಾಹಿಸಿತು.

    ಭದ್ರಾವತಿ: ಕೇವಲ 7 ತಿಂಗಳು 21 ದಿನಗಳ ವಯಸ್ಸಿನ ಹೆಣ್ಣು ಮಗುವೊಂದು ಎರಡೂ ಕೈಗಳಿಂದ ತೂಕವನ್ನು ಎತ್ತಿ ಹಿಡಿಯುವ ವಿಶಿಷ್ಟ ಸಾಮರ್ಥ್ಯ ಪ್ರದರ್ಶಿಸಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿ ಗಮನ ಸೆಳೆದಿದೆ.

    ಹಳೆನಗರದ ಚಾನಲ್ ಏರಿಯಾ ನಿವಾಸಿ ಕೆ. ಮಧುರಾ ಹಾಗೂ ಶಿವಮೊಗ್ಗ ವಿನೋಬನಗರ ನಿವಾಸಿ ಆರ್. ಶಿವಕುಮಾರ್ ದಂಪತಿ ಪುತ್ರಿ ಎಸ್.ಎಂ ಮಿಥುಷಾಳ ಈ ಸಾಧನೆಯನ್ನು “ ಯಂಗೆಸ್ಟ್ ಇನ್ ಪ್ಯಾಂಟ್ ಟು ಡೆಮೊನ್ ಸ್ಟ್ರೇಟ್ ಟು ಹ್ಯಾಂಡೆಡ್ ವ್ಹೈಟ್ ಲಿಫ್ಟಿಂಗ್ ಅಬಿಲಿಟಿ” (Youngest Infant to Demonstrate Two-Handed Weight-Lifting Ability) ಎಂಬ ಹೆಸರಿನಲ್ಲಿ ಗುರುತಿಸಲಾಗಿದೆ. ಸೆ. 24ರಂದು ಈ ಸಾಧನೆ ಅಧಿಕೃತವಾಗಿ ದಾಖಲಾಗಿದ್ದು, ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯು ಪ್ರಮಾಣಪತ್ರ, ಪದಕ ಹಾಗೂ ಸ್ಮರಣಿಕೆಯನ್ನು ನೀಡಿದೆ.

    ಮಿಥುಷಾಳಲ್ಲಿರುವ ಸ್ವಾಭಾವಿಕ ತೂಕ ಎತ್ತಿ ಹಿಡಿಯುವ ಸಾಮರ್ಥ್ಯವನ್ನು ಗುರುತಿಸಿದ ಕುಟುಂಬದ ಹಿರಿಯರಾದ ರವಿ ಶಂಕರ್, ಸುಮತಿ, ಎಂ. ಕುಮಾರಸ್ವಾಮಿ ಹಾಗೂ ವಿ. ವಾಣಿ ಅವರು ಪುಟ್ಟ ಕಂದಮ್ಮನಿಗೆ ಪ್ರೋತ್ಸಾಹ ನೀಡಿದ್ದಾರೆ. ಮಿಥುಷಾಳ ತಂದೆಯ ಸಹೋದರ ಆರ್. ಅರುಣ್ ಕುಮಾರ್ ಹಾಗೂ ತಾಯಿ ಕೆ. ಮಧುರಾ ಅವರ ಸಹೋದರಿ ಕೆ. ಸಂಚಿತಾ ಅವರ ಸಹಕಾರ ಮತ್ತು ಪ್ರೇರಣೆಯೂ ಈ ಸಾಧನೆಗೆ ಬೆಂಬಲವಾಗಿದೆ.

    ತಾಯಿ ಕೆ. ಮಧುರಾ ಅವರು ಮಿಥುಷಾಳ ಸ್ವಾಭಾವಿಕ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗಾಗಿ ಅರ್ಜಿ ಸಲ್ಲಿಸಿ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಎರಡೂ ಕೈಗಳಿಂದ ತೂಕವನ್ನು ಎತ್ತಿ ಹಿಡಿಯುವ ಸಾಮರ್ಥ್ಯ ಪ್ರದರ್ಶಿಸಿರುವುದು ಮಿಥುಷಾಳ ಸಾಧನೆಯ ವಿಶೇಷತೆಯಾಗಿದೆ.

    ಮಿಥುಷಾಳ ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ. ಸಂಗಮೇಶ್ವರ್ ಹಾಗೂ ತಾಲೂಕು ಆಡಳಿತ ನ.1ರ ಕನ್ನಡ ರಾಜೋತ್ಸವದಂದು ಅಭಿನಂದಿಸಿ ಪ್ರೋತ್ಸಾಹಿಸಿತು.

ಪುಟ್ಟ ವಯಸ್ಸಿನಲ್ಲೇ ತನ್ನ ವಿಶಿಷ್ಟ ಸಾಮರ್ಥ್ಯದ ಮೂಲಕ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿರುವ ಮಿಥುಷಾಳ ಸಾಧನೆ ಕುಟುಂಬದವರಲ್ಲಿ ಸಂತಸ ಮೂಡಿಸಿದೆ.