ಪತ್ರಿಕಾ ವಿತರಕರ ಸಂಘದ ನೂತನ ಅಧ್ಯಕ್ಷರಾಗಿ ಕೆಂಪೇಗೌಡ ಆಯ್ಕೆ

ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಭದ್ರಾವತಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆಂಪೇಗೌಡ ಆಯ್ಕೆಯಾಗಿದ್ದಾರೆ.

    ಭದ್ರಾವತಿ : ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕೆಂಪೇಗೌಡ ಆಯ್ಕೆಯಾಗಿದ್ದಾರೆ.

    ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಗೌರವಾಧ್ಯಕ್ಷರಾಗಿ ಮುಕ್ತಾರ್ ಅಹಮದ್ (ನಜಿರ್ ), ಉಪಾಧ್ಯಕ್ಷರಾಗಿ ಲೋಕೇಶ್, ಕಾರ್ಯದರ್ಶಿಯಾಗಿ ಪರಶುರಾಮ್ ರಾವ್, ಸಹ ಕಾರ್ಯದರ್ಶಿಯಾಗಿ ಎನ್. ದೇವೇಂದ್ರಪ್ಪ, ಖಜಾಂಚಿಯಾಗಿ ಶಿವಮೂರ್ತಿ ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಜಗದೀಶ್ ಅರಕೆರೆ ಹಾಗು ನಿರ್ದೇಶಕರಾಗಿ ಮಂಜುನಾಥ್, ಸತ್ಯನಾರಾಯಣ ಮತ್ತು ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ಅಲ್ಲದೆ ನೂತನ ಸದಸ್ಯರಾಗಿ ಮಧು ಗೌಡ ಹಾಗೂ ಶಬ್ಬೀರ್ ಸೇರ್ಪಡೆಗೊಂಡಿದ್ದಾರೆ.

    ನೂತನ ಕಾರ್ಯಕಾರಿ ಮಂಡಳಿ ಆಯ್ಕೆಗೆ ಸಹಕರಿಸಿದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳಿಗೆ ತಾಲೂಕಿನ ಪತ್ರಿಕಾ ವಿತರಕರು ಕೃತಜ್ಞತೆ ಸಲ್ಲಿಸಿದ್ದಾರೆ.