ವಿಐಎಸ್ಎಲ್ ನಿವೃತ್ತ ನೌಕರ ಕಾಳಯ್ಯ ನಿಧನ
ಕಾಳಯ್ಯ
ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ಹುತ್ತಾ ಕಾಲೋನಿ ನಿವಾಸಿ ಕಾಳಯ್ಯ(೭೪) ಗುರುವಾರ ನಿಧನ ಹೊಂದಿದರು.
ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ಹುತ್ತಾ ಕಾಲೋನಿ, ಕವಲಗುಂದಿ ದೊಣಬಘಟ್ಟ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
ಕಾಳಯ್ಯರವರು ವಿಐಎಸ್ಎಲ್ ಕಾರ್ಖಾನೆಯ ಸಂಚಾರಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ನಿಧನಕ್ಕೆ ನಿವೃತ್ತ ನೌಕರರು ಸೇರಿದಂತೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
