ಉದ್ಯಮಿ ಎಸ್.ಎಸ್ ಉಮೇಶ್ ನಿಧನ


ಎಸ್.ಎಸ್ ಉಮೇಶ್

    ಭದ್ರಾವತಿ : ನಗರದ ಚನ್ನಗಿರಿ ರಸ್ತೆಯ ಶಿವಶಂಕರಯ್ಯ ಬೀದಿ ನಿವಾಸಿ ಗುರು ರೇಣುಕೇಶ್ವರ ಟ್ರಾನ್ಸ್‌ಪೋರ್ಟ್ ಮತ್ತು ಶಿವಮೊಗ್ಗದ ಗೋಪಾಳದಲ್ಲಿರುವ ನವರತ್ನ ಫ್ಯೂಯಲ್ಸ್ ಪೆಟ್ರೋಲ್ ಬಂಕ್ ಮಾಲೀಕರಾದ ಎಸ್.ಎಸ್ ಉಮೇಶ್(೬೭) ಭಾನುವಾರ ಬೆಳಗಿನ ಜಾವ ಹೃದಯಘಾತದಿಂದ ನಿಧನ ಹೊಂದಿದರು.

    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಇವರ ಅಂತ್ಯಕ್ರಿಯೆ ನ.೨ರ ಸೋಮವಾರ ಬೆಳಿಗ್ಗೆ ೧೦ ಗಂಟೆಗೆ ತಾಲೂಕಿನ ಅರಳಿಹಳ್ಳಿಯಲ್ಲಿರುವ ಇವರ ತೋಟದಲ್ಲಿ ನಡೆಯಲಿದೆ. ಉಮೇಶ್‌ರವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣ ಸಮಿತಿ ಅಧ್ಯಕ್ಷರಾದ ಎಮರೆಟಸ್ ಪ್ರಾಧ್ಯಾಪಕಿ ಡಾ. ವಿಜಯಾದೇವಿಯವರ ಸಹೋದರರಾಗಿದ್ದಾರೆ.

    ಶಾಸಕ ಬಿ.ಕೆ.ಸಂಗಮೇಶ್, ವೀರಶೈವ ಸೇವಾ ಸಮಿತಿ ಅಧ್ಯಕ್ಷ ಆರ್. ಮಹೇಶ್‌ಕುಮಾರ್, ಕಾರ್ಯದರ್ಶಿ ವಾಗೀಶ್ ಕೋಠಿ, ಉದ್ಯಮಿ ಬಿ.ಕೆ ಜಗನ್ನಾಥ್, ಎಂ. ಹರನಾಥಕೋಠಿ, ತಾಲೂಕು ಶಿಕ್ಷಣ ಸುಧಾರಣಾ ಸಮಿತಿ ಅಧ್ಯಕ್ಷ ಸಿ. ಜಯಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಉಮೇಶ್‌ರವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.