ವಿಐಎಸ್ಎಲ್ ನಿವೃತ್ತ ನೌಕರ ಬೋರೇಗೌಡ ನಿಧನ
ಬೋರೇಗೌಡ
ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ನೌಕರ, ಹುತ್ತಾ ಕಾಲೋನಿ ನಿವಾಸಿ ಬೋರೇಗೌಡ(೭೪) ಬುಧವಾರ ನಿಧನ ಹೊಂದಿದರು.
ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಬೋರೇಗೌಡರವರು ಕಾರ್ಖಾನೆಯ ಮೆಷಿನ್ಶಾಪ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ಪುತ್ರ ಅಮೇರಿಕಾದಲ್ಲಿದ್ದು ಬಂದ ನಂತರ ಶನಿವಾರ ಕವಲಗುಂದಿ ದೊಣಬಘಟ್ಟೆ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಇವರ ಅಂತ್ಯಸಂಸ್ಕಾರ ನೆರವೇರಲಿದೆ.
ಇವರ ನಿಧನಕ್ಕೆ ಕಾರ್ಮಿಕ ಮುಖಂಡರಾದ ಎಸ್. ನರಸಿಂಹಚಾರ್, ಕರೀಗೌಡ, ರಾಮಚಂದ್ರಪ್ಪ ಸೇರಿದಂತೆ ವಿಐಎಸ್ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಹಾಗು ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.
