ನ.೨೪ರಂದು ತಿರುಕಾರ್ತಿಕ ದೀಪೋತ್ಸವ
ಭದ್ರಾವತಿ: ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ನ.೨೪ರ ಮಂಗಳವಾರ ತಿರುಕಾರ್ತಿಕ ದೀಪೋತ್ಸವ ಮತ್ತು ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿಯವರ ಗುರುಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನ.೧೫ರ ಭಾನುವಾರ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ೨೩ರ ಸೋಮವಾರ ಬೆಳಿಗ್ಗೆ ೯ ಗಂಟೆಗೆ ೧೦ನೇ ವರ್ಷದ ಶ್ರೀ ಭದ್ರಗಿರಿ ಸಿದ್ದರ್ ಮಹಾ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮ ಜರುಗಲಿದೆ.
೨೪ರ ಮಂಗಳವಾರ ಬೆಳಿಗ್ಗೆ ೪ ಗಂಟೆಗೆ ವಿಶ್ವರೂಪ ದರ್ಶನ, ೫ ಗಂಟೆಗೆ ಉತ್ಸವ ಪೂಜೆ, ೮ ಗಂಟೆಗೆ ಸಂಧಿ ಪೂಜೆ, ೧೨ ಗಂಟೆಗೆ ನೈವೇದ್ಯ ಉಚ್ಚಿಕಾಲಪೂಜೆ ಮತ್ತು ಅನ್ನದಾನ ಸಂಜೆ ೬.೦೫ ಗಂಟೆಗೆ ಭದ್ರಗಿರಿ ತಿರುಕಾರ್ತಿಕ ಮಹಾದೀಪೋತ್ಸವ(ಮಹಾ ಜ್ಯೋತಿ ದರ್ಶನ) ಮತ್ತು ರಾತ್ರಿ ೧೧ ಗಂಟೆಗೆ ಅರ್ಧಜಾಮ ಪೂಜೆ ಜರುಗಲಿವೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಭದ್ರಗಿರಿ ದೇವಸ್ಥಾನ, ಶ್ರೀ ಶಿವಸುಬ್ರಮಣ್ಯಸ್ವಾಮಿ(ಮಠ) ಆಶ್ರಮ ಆಡಳಿತ ಮಂಡಳಿ ಕೋರಿದ್ದು, ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
