ವಿಕಲಚೇತನ ಮಕ್ಕಳಿಗೆ ಆಹಾರದ ಕಿಟ್, ಬೆಡ್ಶೀಟ್ ವಿತರಣೆ
ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ ಶಿವಮೊಗ್ಗ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ವಿಕಲಚೇತನ ಮಕ್ಕಳಿಗೆ ಆಹಾರದ ಕಿಟ್ ಮತ್ತು ಬೆಡ್ಶೀಟ್ಗಳನ್ನು ವಿತರಿಸಲಾಯಿತು.
ಭದ್ರಾವತಿ: ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ ಶಿವಮೊಗ್ಗ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ವಿಕಲಚೇತನ ಮಕ್ಕಳಿಗೆ ಆಹಾರದ ಕಿಟ್ ಮತ್ತು ಬೆಡ್ಶೀಟ್ಗಳನ್ನು ವಿತರಿಸಲಾಯಿತು.
ನಗರದ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಈ ಸಂಬಂಧ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ ಸುರೇಶ್ ಉದ್ಘಾಟಿಸಿದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷ ಕೆ ಸೂರ್ಯನಾರಾಯಣ ಉಡುಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ರಾಷ್ಟ್ರೀಯ ಸಂಚಾಲಕಿ ಎನ್.ಜಿ ಉಷಾ, ನಿರ್ದೇಶಕಿ ಜಿ. ಪ್ರೇಮ್ ರಾವ್, ಹಿರಿಯ ಮುಖ್ಯ ಕಾರ್ಯದರ್ಶಿ ಸುಧಾ ಹೆಗಡೆ, . ಸೈದರಕಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೊಟ್ಟೂರೇಶ್ವರ ಸಂಸ್ಥೆಯ ಮಾಲೀಕ ಜಗದೀಶ್ರವರು ಸುಮಾರು ೩೦ ಮಕ್ಕಳಿಗೆ ಬೆಡ್ಶೀಟ್ಗಳನ್ನು ಕೊಡುಗೆಯಾಗಿ ವಿತರಿಸಿದರು. ಬಿಐಇಆರ್ಟಿಗಳಾದ ಪ್ರತಿಭಾ ಸ್ವಾಗತಿಸಿ, ವಂದಿಸಿದರು. ರೇಣುಕಾ ಪ್ರಾರ್ಥಿಸಿ, ನಿರೂಪಿಸಿದರು.
