ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ 6ನೇ ರಾಜ್ಯ ಸಮ್ಮೇಳನ ನ.11ರಂದು ಬೆಳಗಾವಿಯಲ್ಲಿ ನಡೆಯಲಿದ್ದು, ಒಕ್ಕೂಟದ ಭದ್ರಾವತಿ ತಾಲೂಕು ಘಟಕದಿಂದ ಬುಧವಾರ ನಗರದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಲಾಯಿತು.
ಭದ್ರಾವತಿ : ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ 6ನೇ ರಾಜ್ಯ ಸಮ್ಮೇಳನ ನ.11ರಂದು ಬೆಳಗಾವಿಯಲ್ಲಿ ನಡೆಯಲಿದ್ದು, ಒಕ್ಕೂಟದ ತಾಲೂಕು ಘಟಕದಿಂದ ಬುಧವಾರ ನಗರದಲ್ಲಿ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಲಾಯಿತು.
ಉಪನ್ಯಾಸಕ ದೇವೇಂದರಾವ್ರವರು ಲಾಂಛನ ಬಿಡುಗಡೆಗೊಳಿಸಿ ಸಮ್ಮೇಳನಕ್ಕೆ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಕಾರ್ಯದರ್ಶಿ ಅನಂತಕುಮಾರ್ ಮಾತನಾಡಿ, ಪತ್ರಿಕಾ ವಿತರಕರು ಸಮ್ಮೇಳನ ಕುರಿತು ಹೆಚ್ಚು ಪ್ರಚಾರ ನಡೆಸಬೇಕು. ಖುದ್ದಾಗಿ ಎಲ್ಲರನ್ನು ಭೇಟಿಯಾಗಿ ಆಹ್ವಾನಿಸಬೇಕು. ತಮ್ಮ ಅಸ್ತಿತ್ವ ಕುರಿತು ಇತರರಿಗೂ ಮನವರಿಕೆ ಮಾಡಿಕೊಡಬೇಕು. ಸಮ್ಮೇಳನ ಯಶಸ್ವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಒಕ್ಕೂಟದ ನೂತನ ಅಧ್ಯಕ್ಷ ಕೆಂಪೇಗೌಡ, ಕಾರ್ಯದರ್ಶಿ ಪರಶುರಾಮ್ ರಾವ್, ಸಹ ಕಾರ್ಯದರ್ಶಿ ಎನ್. ದೇವೇಂದ್ರಪ್ಪ, ಖಜಾಂಚಿ ಶಿವಮೂರ್ತಿ, ಸದಸ್ಯರಾದ ಶಬ್ಬೀರ್, ಮಹಮದ್ ರಫಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
