ಬದನೇಹಾಳ್ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಿವಮೊಗ್ಗ ಸಹ್ಯದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಹಾಗು ಭದ್ರಾವತಿ ನಗರದ ವಿಐಎಸ್‌ಎಲ್ ಆಸ್ಪತ್ರೆ ಸಹಯೋಗದೊಂದಿಗೆ ತಾಲೂಕಿನ ಬದನೇಹಾಳ್ ಗ್ರಾಮದಲ್ಲಿ ಸಮಗ್ರ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ ಆಯೋಜಿಸಲಾಗಿತ್ತು.

    ಭದ್ರಾವತಿ: ಶಿವಮೊಗ್ಗ ಸಹ್ಯದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಹಾಗು ನಗರದ ವಿಐಎಸ್‌ಎಲ್ ಆಸ್ಪತ್ರೆ ಸಹಯೋಗದೊಂದಿಗೆ ತಾಲೂಕಿನ ಬದನೇಹಾಳ್ ಗ್ರಾಮದಲ್ಲಿ ಸಮಗ್ರ ಉಚಿತ ಆರೋಗ್ಯ ತಪಾಸಣಾ ಶಿಬಿರ ಶನಿವಾರ ಆಯೋಜಿಸಲಾಗಿತ್ತು.

     ಶಿಬಿರದಲ್ಲಿ ಹೃದಯ, ನೇತ್ರ ಹಾಗು ದಂತ ತಪಾಸಣೆ ಮತ್ತು ಮಹಿಳೆಯರಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಅನುಭವಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಿದರು. ಅಲ್ಲದೆ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಎಲೆಕ್ಟ್ರೋ ಕಾರ್ಡಿಯೋಗ್ರಾಮ್ (ಇಸಿಜಿ) ಸೇರಿದಂತೆ ಇನ್ನಿತರ ರೋಗಗಳ ತಪಾಸಣೆ ನಡೆಸಲಾಯಿತು.

ವಿಐಎಸ್‌ಎಲ್ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ಎಸ್. ಸುಜೀತ್ ಕುಮಾರ್ ಶಿಬಿರ ಉದ್ಘಾಟಿಸಿದರು. ವೈದ್ಯರಾದ ಡಾ. ಟಿ.ಎನ್ ಸುಷ್ಮಾ, ಡಾ. ಎಸ್.ಎನ್ ಸುರೇಶ್, ಸಹಾಯಕ ಪ್ರಬಂಧಕರು (ಮಾನವಸಂಪನ್ಮೂಲ) ಎಂ.ಎಲ್ ಯೋಗೀಶ ಮತ್ತು ನೋಡಲ್ ಅಧಿಕಾರಿ ಸಿ.ಎಸ್.ಆರ್ ಹಾಗು ಸಹಾಯಕ ಪ್ರಬಂಧಕರು (ವೈದ್ಯಕೀಯ) ಅಪರ್ಣ, ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತಜ್ಞ ವೈದ್ಯರಾದ ಡಾ. ಮಂಜುನಾಥ, ಡಾ. ದರ್ಶನ್ ಮತ್ತು ಶಂಕರ ಕಣ್ಣಿನ ಆಸ್ಪತ್ರೆಯ ಗಣೇಶ್, ನಿತಿನ್, ಚಂದ್ರು, ಮುಸಾನ್ ಮತ್ತು ತಂಡದವರು ಬದನೇಹಾಳ್ ಗ್ರಾಮದ ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಹೇಮಾವತಿ, ದೊಡ್ಡೇರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೋಹನ್ ಕುಮಾರ್ ಸೇರಿದಂತೆ ಇನ್ನಿತತರು ಉಪಸ್ಥಿತರಿದ್ದರು. ಸುಮಾರು150ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದ ಸದುಪಯೋಗಪಡಿಸಿಕೊಂಡರು.