ನಗರ ಆಶ್ರಯ ಸಮಿತಿಗೆ ನಾಲ್ವರು ನೂತನ ಸದಸ್ಯರ ನೇಮಕ : ಪದಗ್ರಹಣ
ಭದ್ರಾವತಿ ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನೂತನವಾಗಿ ನಾಮನಿರ್ದೇಶನಗೊಂಡಿರುವ ೪ ಜನ ಸದಸ್ಯರು ಮಂಗಳವಾರ ನಗರಸಭೆಯಲ್ಲಿ ಪದಗ್ರಹಣ ಸ್ವೀಕರಿಸಿದರು. ಭದ್ರಾವತಿ: ನಗರ ಆಶ್ರಯ ಸಮಿತಿಗೆ ಸರ್ಕಾರದಿಂದ ನೂತನವಾಗಿ ನಾಮನಿರ್ದೇಶನಗೊಂಡಿರುವ ೪ ಜನ ಸದಸ್ಯರು ಮಂಗಳವಾರ ನಗರಸಭೆಯಲ್ಲಿ ಪದಗ್ರಹಣ ಸ್ವೀಕರಿಸಿದರು. ಶಿವಾಜಿರಾವ್, ವೆಂಕಟೇಶ್ ಇಮಾನ್ಯುವೆಲ್, ನರಸಿಂಹಮೂರ್ತಿ ಮತ್ತು ಮಂಜಳ ನೂತನವಾಗಿ ನಾಮನಿರ್ದೇಶನಗೊಂಡಿರುವ ಸದಸ್ಯರಾಗಿದ್ದಾರೆ. ಬಿ.ಎಸ್ ಗೋಪಾಲ್ ಸಮಿತಿ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ನೂತನ ಸದಸ್ಯರನ್ನು ಶಾಸಕ ಬಿ.ಕೆ ಸಂಗಮೇಶ್ವರ್, ಸರ್ಕರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಯುವ ಮುಖಂಡ ಬಿ.ಎಸ್ ಬಸವೇಶ್, ನಗರಸಭೆ ಅಧ್ಯಕ್ಷೆ ಜೆ.ಎಸ್ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸದಸ್ಯರಾದ ಬಿ.ಕೆ ಮೋಹನ್, ಚನ್ನಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ. ಗಂಗಾಧರ್, ಮಹಮದ್ ರಫಿ, ರೂಪ ನಾರಾಯಣ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.