Posts

ನೂತನ ಶ್ರೀ ಮೈಲಾರೇಶ್ವರ ಸಮುದಾಯ ಭವನ ಲೋಕಾರ್ಪಣೆ

Image
ಭದ್ರಾವತಿ ಹಳೇನಗರ ಕಂಚಿಬಾಗಿಲು ವೃತ್ತದ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ದೇವಸ್ಥಾನ ಧಾರ್ಮಿಕ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮೈಲಾರೇಶ್ವರ ಸಮುದಾಯ ಭವನ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಲೋಕಾರ್ಪಣೆಗೊಳಿಸಿದರು.       ಭದ್ರಾವತಿ : ಹಳೇನಗರ ಕಂಚಿಬಾಗಿಲು ವೃತ್ತದ ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ದೇವಸ್ಥಾನ ಧಾರ್ಮಿಕ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮೈಲಾರೇಶ್ವರ ಸಮುದಾಯ ಭವನ ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಲೋಕಾರ್ಪಣೆಗೊಳಿಸಿದರು.       ಭರತ ಹುಣ್ಣಿಮೆ ಜಾತ್ರಾ ಮಹೋತ್ಸವ ಆಚರಣೆಯೊಂದಿಗೆ ಸಮುದಾಯ ಭವನ ಲೋಕಾರ್ಪಣೆಗೊಳಿಸಲಾಗಿದ್ದು, ಶ್ರೀ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಬೆಳಿಗ್ಗೆ ಗಂಗೆ ಪೂಜೆ, ಪೂರ್ಣ ಕುಂಭಗಳ ಅವಾಹನೆಯೊಂದಿಗೆ ಗಣಪತಿ ಹೋಮ, ನವಗ್ರಹ ಹೋಮ, ರುದ್ರಹೋಮ ಹಾಗು ಶ್ರೀ ಮೈಲಾರಲಿಂಗೇಶ್ವರ ಮೂಲ ಮಂತ್ರ ಹೋಮಗಳನ್ನು ಅರ್ಚಕರಾದ ಎಸ್.ಸಿ ನೀಲಕಂಠ ಜೋಯ್ಸ್‌ರವರ ನೇತೃತ್ವದಲ್ಲಿ ನೆರವೇರಿಸಲಾಯಿತು. ರುದ್ರಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.      ಮಜ್ಜಿಗೆ, ಪಾನಕ ಹಾಗು ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಹಳೇನಗರ, ಸಿದ್ದಾರೂಢನಗರ, ಭೂತನಗುಡಿ, ಹೊಸಮನೆ ಸೇರಿದಂತೆ ವಿವಿಧೆಡೆಗಳಿ...

ಕೆಆರ್‌ಐಡಿಎಲ್ ಅಧ್ಯಕ್ಷರಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಮುಂದುವರಿಕೆ

Image
ಶಾಸಕ ಬಿ.ಕೆ ಸಂಗಮೇಶ್ವರ್       ಭದ್ರಾವತಿ: ಸರ್ಕಾರ ಈ ಹಿಂದೆ ಎರಡು ವರ್ಷಗಳ ಅವಧಿಗೆ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದ ಆದೇಶವನ್ನು ಜ.೨೮ರಂದು ಮರು ಜಾರಿಗೊಳಿಸಿದ್ದು, ಈ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.       ಸುಮಾರು ೩೪ ವಿಧಾನಸಭಾ ಸದಸ್ಯರಿಗೆ ಸಚಿವ ಸಂಪುಟ ಸ್ಥಾನಮಾನಗಳೊಂದಿಗೆ ವಿವಿಧ ನಿಗಮ ಮಂಡಳಿ ಅಧ್ಯಕ್ಷರಾಗಿ ೨ ವರ್ಷಗಳ ಅವಧಿಗೆ ನೇಮಕಗೊಳಿಸಿ ಸರ್ಕಾರ ಆದೇಶಿಸಿತ್ತು. ಈ ನಡುವೆ ಮುಖ್ಯಮಂತ್ರಿ ಬದಲಾವಣೆ ಕುರಿತ ವದಂತಿಗಳು ಹರಿದಾಡುತ್ತಿದ್ದವು. ಮುಖ್ಯಮಂತ್ರಿ ಬದಲಾದಲ್ಲಿ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಸಹ ಬದಲಾಗುವ ನಿರೀಕ್ಷೆ ಹೊಂದಲಾಗಿತ್ತು. ಆದರೆ ಇದೀಗ ಸರ್ಕಾರ ಹಿಂದಿನ ಆದೇಶವನ್ನು ಮರು ಜಾರಿಗೊಳಿಸಿದೆ.       ಬಹಳಷ್ಟು ನಿಗಮ ಮಂಡಳಿ ಅಧ್ಯಕ್ಷರು ಮುಂದಿನ ಸಚಿವ ಸಂಪುಟ ಬದಲಾವಣೆ ಸಂದರ್ಭದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸಹೊಂದಿದ್ದರು. ಕ್ಷೇತ್ರದ ನಿವಾಸಿಗಳು, ಶಾಸಕ ಬಿ.ಕೆ ಸಂಗಮೇಶ್ವರ್ ಅಭಿಮಾನಿಗಳು ಸಂಗಮೇಶ್ವರ್‌ಗೆ ಸಚಿವ ಸ್ಥಾನ ಲಭಿಸುವ ನಿರೀಕ್ಷೆ ಹೊಂದಿದ್ದರು.   

ಸಾಮಾಜಿಕ ಮಾಧ್ಯಮಗಳಿಗೆ ಸರ್ಕಾರ ಕಡಿವಾಣ ಹಾಕಬೇಕು : ತರಳಬಾಳು ಶ್ರೀಗಳು

Image
ಭದ್ರಾವತಿ ವಿಐಎಸ್‌ಎಸ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ೮ನೇ ದಿನದ ನ್ಯಾಯಾಂಗ ಮತ್ತು ಸಮಾಜ ವಿಷಯ ಕುರಿತ ಕಾರ್ಯಕ್ರಮದಲ್ಲಿ ಶನಿವಾರ ದಿವ್ಯಸಾನಿಧ್ಯವಹಿಸಿ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳವರು ಆಶೀರ್ವಚನ ನೀಡಿದರು.      ಭದ್ರಾವತಿ : ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅವ್ಯವಸ್ಥೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿ ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಕಂಡುಬರುತ್ತಿದ್ದು, ಸರ್ಕಾರ ವಾಟ್ಸಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಿಗೆ ಕಡಿವಾಣ ಹಾಕುವ ನಿರ್ಧಾರ ಕೈಗೊಳ್ಳಬೇಕೆಂದು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳವರು ಆಗ್ರಹಿಸಿದರು.       ನಗರದ ವಿಐಎಸ್‌ಎಸ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ೮ನೇ ದಿನದ ನ್ಯಾಯಾಂಗ ಮತ್ತು ಸಮಾಜ ವಿಷಯ ಕುರಿತ ಕಾರ್ಯಕ್ರಮದಲ್ಲಿ ಶನಿವಾರ ದಿವ್ಯಸಾನಿಧ್ಯವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.      ಮಠಪೀಠಗಳು ಹಿಂದಿನ ಕಾಲದಿಂದಲೂ ನ್ಯಾಯದಾನ ಮಾಡುವ ಪರಂಪರೆ ಹೊಂದಿವೆ. ರಾಜಶಾಸನದ ಕಾಲದಲ್ಲಿ ರಾಜನಿಗೂ ಧರ್ಮವಿವೇಚನೆ ಇದ್ದು, ಧರ್ಮಾಧಾರಿತ ಆಡಳಿತ ನಡೆದುಕೊಂಡು ಬಂದಿತ್ತು ಎಂದು ಹೇಳಿದರು.       ಧರ್ಮಕ್ಕೆ ಯಾವುದೇ ಸೀಮಾರೇಖೆಗಳಿಲ್ಲ. ಆದರೆ ಕಾನೂನು ಆಯಾಯ ದೇ...

ಧರ್ಮದ ತಳಹದಿಯ ಮೇಲೆ ಕಾನೂನು ರೂಪುಗೊಂಡಿದೆ - ಜಸ್ಟೀಸ್ ವೇದವ್ಯಾಸ ಶ್ರೀಶಾನಂದ

Image
ಭದ್ರಾವತಿ ನಗರದ ವಿಐಎಸ್‌ಎಸ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಶನಿವಾರ ೮ನೇ ದಿನದ ನ್ಯಾಯಾಂಗ ಮತ್ತು ಸಮಾಜ ವಿಷಯ ಕುರಿತ ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ  ವೇದವ್ಯಾಸಾಚಾರ್ ಶ್ರೀಶಾನಂದ ಪಾಲ್ಗೊಂಡು ಮಾತನಾಡಿದರು.       ಭದ್ರಾವತಿ :  ಧರ್ಮಕ್ಕೆ ಯಾವುದೇ ಭಾಷೆಯಲ್ಲಿಯೂ ಸಮನಾರ್ಥಕ ಪದವಿಲ್ಲ. ಧರ್ಮದಲ್ಲಿ ದೈವ ಋಣ, ಪಿತೃ ಋಣ, ಋಷಿ ಋಣ ಮತ್ತು ರಾಷ್ಟ್ರ ಋಣ ಎಂಬ ನಾಲ್ಕು ಋಣಗಳಿದ್ದು, ಇವುಗಳನ್ನು ಪರಿಪೂರ್ಣವಾಗಿ ತೀರಿಸಿದಾಗ ಧರ್ಮ ಮತ್ತು ನ್ಯಾಯ ಸ್ವಯಂವಾಗಿ ಸ್ಥಾಪಿತವಾಗುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ  ವೇದವ್ಯಾಸಾಚಾರ್ ಶ್ರೀಶಾನಂದ ಹೇಳಿದರು.       ಅವರು ಶನಿವಾರ ನಗರದ ವಿಐಎಸ್‌ಎಸ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ೮ನೇ ದಿನದ ನ್ಯಾಯಾಂಗ ಮತ್ತು ಸಮಾಜ ವಿಷಯ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.       ವಿಶ್ವಕ್ಕೆ ಮೊದಲು ಧರ್ಮವನ್ನು ಕೊಟ್ಟಿದ್ದು ಭಾರತ ದೇಶ. ಅನ್ಯಾಯ ಮಾರ್ಗದಿಂದ ಸಂಪಾದಿಸಿದ ಹಣವನ್ನು ಮಠಗಳಿಗೆ ಅಥವಾ ಧಾರ್ಮಿಕ ಸಂಸ್ಥೆಗಳಿಗೆ ನೀಡಿದರೂ ಪುಣ್ಯ ದೊರೆಯುವುದಿಲ್ಲ. ಅನ್ಯಾಯ ಮಾರ್ಗದಿಂದ ಬಂದ ಹಣ ಜೀವನಕ್ಕೆ ಮಾರಕವಾಗುತ್ತದೆ. ಸತ್ಯವನ್ನು ಹೇಳಲು ಧೈರ್ಯ ಬೇಕಾಗುತ್ತದೆ. ಆದರ...

ನೋಡುಗರ ಮನಸೂರೆಗೊಳಿಸಿದ ತರಳಬಾಳು ಕುಸ್ತಿ ಅಖಾಡ

Image
ತರಳಬಾಳು ಹುಣ್ಣಿಮೆಯಲ್ಲಿ ಕುಸ್ತಿ ಪೈಲ್ವಾನರ ಅಬ್ಬರ ಭದ್ರಾವತಿಯ ತರಳಬಾಳು ಹುಣ್ಣಿಮೆಯಲ್ಲಿ ಶನಿವಾಸ ಜರುಗಿದ ಕುಸ್ತಿ ಸ್ಪರ್ಧೆಗಳಿಗೆ ರಾಷ್ಟ್ರೀಯ ಕುಸ್ತಿ ಪಟು ಮಹೇಶ್ವರಪ್ಪ ಚಾಲನೆ ನೀಡಿದರು.      ಭದ್ರಾವತಿ : ತರಳಬಾಳು ಹುಣ್ಣಿಮೆಯ ಮಹಾಮಂಟಪ ಮುಂಭಾಗದಲ್ಲಿ ಸಿದ್ಧಗೊಳಿಸಿದ ಪಾರಂಪರಿಕ ಮಾದರಿಯ ಕುಸ್ತಿ ಅಖಾಡದಲ್ಲಿ ಶನಿವಾರ ಜರುಗಿದ ರಾಜ್ಯ ಮಟ್ಟದ ಮುಕ್ತ ಹಾಗೂ ಆಹ್ವಾನಿತ ಕುಸ್ತಿ ಸ್ಪರ್ಧೆಗಳಿಗೆ ಭದ್ರಾವತಿಯ ರಾಷ್ಟ್ರೀಯ ಕುಸ್ತಿ ಪಟು ಮಹೇಶ್ವರಪ್ಪ ಚಾಲನೆ ನೀಡಿದರು.      ಕಣದಲ್ಲಿ ಜಗಜಟ್ಟಿಗಳು ತಮ್ಮದೇ ಆದ ಪಟ್ಟು ಹಾಕಿ ಕುಸ್ತಿ ಹಿಡಿದರೆ, ಇತ್ತ ಮೈದಾನದ ಸುತ್ತ ಕಿಕ್ಕಿರಿದು ನಿಂತಿದ್ದ ಪ್ರೇಕ್ಷಕರು ಶಿಳ್ಳೆ, ಚೆಪ್ಪಾಳೆ ತಟ್ಟಿ ಹುರಿದುಂಬಿಸುತ್ತಿದ್ದರು. ಪೈಲ್ವಾನ್‌ಗಳ ಕುಸ್ತಿ ಹೋರಾಟ ರೋಚಕ ತಿರುವುಗಳಿಗೆ ಸಾಕ್ಷಿ ಆಯಿತು.  ಪೈಲ್ವಾನರು ತೊಡೆ ತಟ್ಟುತ್ತಾ ಮೈಯೆಲ್ಲಾ ಮಣ್ಣಾಗಿಸಿಕೊಂಡು ಅಂಗಳದ ತುಂಬೆಲ್ಲಾ ಪಟ್ಟುಗಳನ್ನು ಪ್ರದರ್ಶಿಸಿ ಗೆಲ್ಲಲು ಶಕ್ತಿ ಪ್ರದರ್ಶಿಸಿದರು.  ಭದ್ರಾವತಿಯ  ತರಳಬಾಳು ಹುಣ್ಣಿಮೆಯಲ್ಲಿ ನೋಡುಗರ ಮನಸೂರೆಗೊಳಿಸಿದ ಕುಸ್ತಿ ಅಖಾಡಗಳು.      ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಹರಿಹರ, ಮೈಸೂರು, ಕನಕಪುರ, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ೧೫೦ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿದ್ದರು. ಇಬ್ಬರೂ ಪೈಲ...

ಫೆ.೧ರಂದು ತರಳಬಾಳು ಹುಣ್ಣಿಮೆ ಮಹೋತ್ಸವದ ಕಡೆಯ ದಿನ : ತರಳಬಾಳು ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ

Image
ಭದ್ರಾವತಿಯಲ್ಲಿ ಭಾನುವಾರ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಉತ್ಸವ ಸಮಿತಿ ಸಂಚಾಲಕ ಜಗದೀಶ್ ಗೌಡ್ರು ಮನವಿ ಮಾಡಿದರು.       ಭದ್ರಾವತಿ: ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ಕಡೆಯ ದಿನವಾದ ಫೆ.೧ರ ಭಾನುವಾರ ವಿಜೃಂಭಣೆಯಿಂದ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಉತ್ಸವ ಸಮಿತಿ ಸಂಚಾಲಕ ಜಗದೀಶ್ ಗೌಡ್ರು ಮನವಿ ಮಾಡಿದರು.       ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಮಧ್ಯಾಹ್ನ ೧.೩೦ಕ್ಕೆ ನಗರದ ಚನ್ನಗಿರಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಮುಂಭಾಗದಿಂದ ಆರಂಭಗೊಳ್ಳಲಿದ್ದು, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಡಾ. ರಾಜಕುಮಾರ್ ರಸ್ತೆ ಮೂಲಕ ಹಾಲಪ್ಪ ವೃತ್ತ, ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ರಿಲಯನ್ಸ್ ...

ಫೆ.೧ರಂದು ಮಡಿವಾಳ ಮಾಚಿದೇವ ಜಯಂತಿ

Image
     ಭದ್ರಾವತಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಫೆ.೧ರ ಭಾನುವಾರ ಹಳೇನಗರದ ಬಸವೇಶ್ವರ ವೃತ್ತದ ಮಾಚಿದೇವ ಸಭಾಭವನದಲ್ಲಿ ಮಡಿವಾಳ ಮಾಚಿದೇವ ಜಯಂತಿ ಹಮ್ಮಿಕೊಳ್ಳಲಾಗಿದೆ.       ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ ಉದ್ಘಾಟಿಸಲಿದ್ದಾರೆ.       ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಪೌರಾಯುಕ್ತ ಕೆ.ಎನ್ ಹೇಮಂತ್, ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ತಾಲೂಕು ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಗರಸಭೆ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

ಮಾಜಿ ಸೈನಿಕ ರವಿ ಅಪಘಾತದಲ್ಲಿ ನಿಧನ

Image
ರವಿ       ಭದ್ರಾವತಿ : ಕೇರಳ ಪ್ರವಾಸಕ್ಕೆ ತೆರಳಿದ್ದ ನಗರದ ಜನ್ನಾಪುರ ನಿವಾಸಿ, ಮಾಜಿ ಸೈನಿಕ ರವಿ(೬೫) ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.       ಪತ್ನಿ, ಇಬ್ಬರು ಗಂಡು ಮಕ್ಕಳಿದ್ದಾರೆ. ರವಿಯವರು ಕಳೆದ ವಾರ ಹೊಸ ಕಾರು ಖರೀದಿಸಿದ್ದು, ಈ ಹಿನ್ನಲೆಯಲ್ಲಿ ಕುಟುಂಬಸ್ಥರೊಂದಿಗೆ ಕಳೆದ ೫ ದಿನಗಳ ಹಿಂದೆ ಕೇರಳ ಪ್ರವಾಸಕ್ಕೆ ತೆರಳಿದ್ದರು. ಅಪಘಾತದಲ್ಲಿ ರವಿ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದು, ಇವರ ಮೃತದೇಹ ಶುಕ್ರವಾರ ರಾತ್ರಿ ನಗರಕ್ಕೆ ಬರಲಿದೆ. ರವಿ ಅವರ ಪತ್ನಿ ಲಕ್ಷ್ಮೀಯವರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆಗೆ ದಾಖಲಿಸಲಾಗಿದೆ.       ರವಿಯವರು ನಂದಿನಿ ಹಾಲು ಮಾರಾಟಗಾರರಾಗಿ ಚಿರಪರಿಚಿತರಾಗಿದ್ದು, ಜನ್ನಾಪುರ ವ್ಯಾಪ್ತಿಯ ಅವರ ಗೆಳೆಯ ಬಳಗದಲ್ಲಿ ದುಃಖ ಮನೆ ಮಾಡಿದೆ. 

ಟಿ.ಆರ್.ಪಿ ಹೆಚ್ಚಿಸಲು ಟಿ.ವಿ ಚಾನೆಲ್‌ಗಳ ಪೈಪೋಟಿ : ಸಮಾಜದ ಮೂಲ ಮೌಲ್ಯಗಳು ಮೂಲೆಗುಂಪು

Image
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಆತಂಕ  ಭದ್ರಾವತಿ ನಗರದ ಹುಡ್ಕೋ ಕಾಲೋನಿ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ೭ನೇ ದಿನದ ಶುಕ್ರವಾರದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಪಾಲ್ಗೊಂಡು ಮಾತನಾಡಿದರು.       ಭದ್ರಾವತಿ : ಸಮೂಹ ಮಾಧ್ಯಮಗಳು ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಜವಾಬ್ದಾರಿ ಹೊಂದಿವೆ. ಆದರೆ ಟಿ.ಆರ್.ಪಿ ಕೇಂದ್ರಿತ ವರದಿಗಳಿಂದ ಸಮಾಜದಲ್ಲಿ ತಪ್ಪು ಸಂದೇಶಗಳು ಹರಡುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಮಾಧ್ಯಮಗಳು ಸತ್ಯ, ಸಂಯಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಮೊದಲಾಗಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ಷಡಕ್ಷರಿ ಆತಂಕ ವ್ಯಕ್ತಪಡಿಸಿದರು.      ಅವರು ನಗರದ ಹುಡ್ಕೋ ಕಾಲೋನಿ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ೭ನೇ ದಿನದ ಶುಕ್ರವಾರದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.       ಸಮೂಹ ಮಾಧ್ಯಮಗಳು ಸಮಾಜದ ಕನ್ನಡಿ ಇದ್ದಂತೆ ಕಾರ್ಯನಿರ್ವಹಿಸಬೇಕಿದ್ದು, ಆದರೆ ಟಿ.ಆರ್.ಪಿ ಹೆಚ್ಚಿಸಿಕೊಳ್ಳುವ ಸ್ಪರ್ಧೆಯಲ್ಲಿ ಇಂದು ಅನೇಕ ಟಿವಿ ಚಾನೆಲ್‌ಗಳು ಸಮಾಜದ ಮೂಲ ಮೌಲ್ಯಗಳನ್ನು ಮರೆತು ಸಂವೇದನಾಶೀಲ ವಿಷಯಗಳ ಬೆನ್ನಟ್ಟುತ್ತಿವೆ ಎಂದು...

ವಿಐಎಸ್‌ಎಲ್ ಕಾರ್ಖಾನೆಯಿಂದ ದೊಡ್ಡೇರಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ, ಸಮಾಲೋಚನಾ ಶಿಬಿರ

Image
ಕೇಂದ್ರ ಉಕ್ಕು ಪ್ರಾಧಿಕಾರ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್) ಯೋಜನೆಯಡಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಮಗ್ರ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಹಾಗು ಸಮಾಲೋಚನಾ ಶಿಬಿರ ಯಶಸ್ವಿಯಾಗಿ ಜರುಗಿತು.       ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್) ಯೋಜನೆಯಡಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಮಗ್ರ ಉಚಿತ ವೈದ್ಯಕೀಯ ಆರೋಗ್ಯ ತಪಾಸಣೆ ಹಾಗು ಸಮಾಲೋಚನಾ ಶಿಬಿರ ಯಶಸ್ವಿಯಾಗಿ ಜರುಗಿತು.       ಸಾಮಾನ್ಯ ತಪಾಸಣೆ, ನೇತ್ರ ವಿಜ್ಞಾನ, ದಂತ ವೈದ್ಯ ಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಅನುಭವಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು. ಅಲ್ಲದೆ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆಗಳನ್ನು ನಡೆಯಿತು.      ಕಾರ್ಖಾನೆಯ ಮು...

ತರಳಬಾಳು ಹುಣ್ಣಿಮೆ ಮಹೋತ್ಸವ : ವಿಜ್ಞಾನ ವಸ್ತು ಪ್ರದರ್ಶನಕ್ಕೆ ತರಳಬಾಳು ಶ್ರೀಗಳಿಂದ ಚಾಲನೆ

Image
ಹೆಚ್ಚಿನ ಪಾಂಡಿತ್ಯದೊಂದಿಗೆ ಶ್ರೇಷ್ಠ ವಿಜ್ಞಾನಿಗಳಾಗಿ ಹೊರಹೊಮ್ಮಿ  ಭದ್ರಾವತಿಯಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವ-೨೦೨೬ರ ಏಳನೇ ದಿನದ ಶುಕ್ರವಾರ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು ಆಶೀರ್ವಚನ ನೀಡಿದರು.      ಭದ್ರಾವತಿ: ವಿಜ್ಞಾನ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಬೇಕು. ಎಲ್ಲಾ ವಿದ್ಯಾರ್ಥಿಗಳು ಹೆಚ್ಚಿನ ಪಾಂಡಿತ್ಯ ಹೊಂದುವ ಮೂಲಕ ಶ್ರೇಷ್ಠ ವಿಜ್ಞಾನಿಗಳಾಗಿ ರೂಪುಗೊಳ್ಳಬೇಕೆಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳವರು ಆಶಿಸಿದರು.      ಶ್ರೀಗಳು ತರಳಬಾಳು ಹುಣ್ಣಿಮೆ ಮಹೋತ್ಸವ-೨೦೨೬ರ ಏಳನೇ ದಿನದ ಕಾರ್ಯಕ್ರಮದಲ್ಲಿ ಶುಕ್ರವಾರ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.      ವಿಜ್ಞಾನ ವಸ್ತು ಪ್ರದರ್ಶನದಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಜೊತೆಗೂಡಿ ಹೊಸ ಅವಿಷ್ಕಾರ ಅನುಷ್ಠಾನಗೊಳಿಸುವ ಮನೋಭಾವ ಮತ್ತು ಪ್ರಾಯೋಗಿಕ ಜ್ಞಾನ ಹೆಚ್ಚಾಗುತ್ತದೆ ಎಂದರು.       ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಇದು ಭವಿಷ್ಯದ ವಿಜ್ಞಾನಿಗಳು, ಸಂಶೋಧಕರು ಮತ್ತು ನವೋದ್ಯಮಿಗಳ ಬೆಳವಣಿಗೆಗೆ ಬಲವಾದ ನೆಲೆಯನ್ನು ಒದಗಿಸುತ್ತದ...

ತರಳಬಾಳು ಹುಣ್ಣಿಮೆ : ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ

Image
ದೈಹಿಕ, ಮಾನಸಿಕ ಬೆಳವಣಿಗೆಗೆ ಯೋಗಾಸನ ಸಹಕಾರಿ ಭದ್ರಾವತಿಯಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ-೨೦೨೬ರ ಏಳನೇ ದಿನದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.      ಭದ್ರಾವತಿ: ಯೋಗ ಕೇವಲ ಸ್ಪರ್ಧೆಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಭಾಗವಾಗಬೇಕು ಎಂದು ಅಂತರಾಷ್ಟ್ರೀಯ ಯೋಗಪಟು ಬಿ.ಓ. ಸುದರ್ಶನ್ ಹೇಳಿದರು.      ಅವರು ಶುಕ್ರವಾರ ನಗರದ ಹುಡ್ಕೋ ಕಾಲೋನಿ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವ-೨೦೨೬ರ ಏಳನೇ ದಿನದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.      ಯೋಗಾಸನದಿಂದ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಯೋಗದಿಂದ ರೋಗ ಮುಕ್ತ ಜೀವನ ನಡೆಸಬಹುದು. ಯೋಗ ಒಲಂಪಿಕ್ಸ್‌ಕ್ರೀಡೆಗಳಲ್ಲಿ ಒಂದಾಗಿ ಸೇರ್ಪಡೆಗೊಳಿಸುವುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದರು.       ಯೋಗ ಸರ್ಕಸ್ ಅಲ್ಲ, ಸರ್ಕಸ್ ದೇಹಕ್ಕೆ ಮಾತ್ರ ಸೀಮಿತವಾಗಿದೆ. ಯೋಗ ದೇಹ ಮತ್ತು ಮನಸ್ಸಿಗೆ ಉಲ್ಲಾಸ ನೀಡುವ ಸಾಧನವಾಗಿದೆ. ಇಡೀ ಜಗತ್ತಿನ ೧೯೬ ದೇಶಗಳಲ್ಲಿ ಜೂನ್ ೨೧ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ಈ ಮೂಲಕ ನಮ್ಮ ದೇಶಕ್ಕೆ ದೊಡ್ಡ ಗೌರವ ಲಭಿಸುತ್ತಿದೆ ಎಂದರು.       ಶ್ರೀ ...

ಎಸ್. ಯೋಗೇಂದ್ರನಾಯ್ಕ ನಿಧನ

Image
ಎಸ್. ಯೋಗೇಂದ್ರನಾಯ್ಕ              ಭದ್ರವತಿ: ತಾಲೂಕಿನ ತಳ್ಳಿಕಟ್ಟೆ ವ್ಯವಸಾಯೋತ್ಪನ್ನ ಸಹಕಾರ ಸಂಘದ ಮಾಜಿ ನಿರ್ದೇಶಕ, ನಾಗತಿಬೆಳಗಲು ತಾಂಡ ನಿವಾಸಿ ಎಸ್. ಯೋಗೇಂದ್ರನಾಯ್ಕ(೬೨) ಗುರುವಾರ ನಿಧನ ಹೊಂದಿದರು.       ಪತ್ನಿ, ಕರುನಾಡು ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ವೈ. ಶಶಿಕುಮಾರ್ ಸೇರಿದಂತೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಬಂಜಾರ ಸಮುದಾಯದ ಮುಖಂಡರಾದ ಯೋಗೇಂದ್ರನಾಯ್ಕರವರು ಶ್ರೀ ನಂಜುಂಡೇಶ್ವರ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ವಿಧಾನಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ಅವರ ಜಮೀನಿನ ತೋಟದಲ್ಲಿ ನೆರವೇರಿತು. ಯೋಗೇಂದ್ರನಾಯ್ಕ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗ್ರಾಮದ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಹುಣ್ಣಿಮೆ ಮಹೋತ್ಸವದ ಮೂಲಕ ತರಳಬಾಳು ಶ್ರೀಗಳು ನಾಡಿನ ಜನರಿಗೆ ಬೆಳಕು ಚೆಲ್ಲುತ್ತಿದ್ದಾರೆ : ಡಿ.ಕೆ ಶಿವಕುಮಾರ್

Image
ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ಸರ್ವ ಧರ್ಮ ಸಮನ್ವಯ ವಿಷಯ ಕುರಿತ ೬ನೇ ದಿನದ ಗುರುವಾರ ಸಂಜೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪಾಲ್ಗೊಂಡು ಮಾತನಾಡಿದರು.       ಭದ್ರಾವತಿ: ತರಳಬಾಳು ಹುಣ್ಣಿಮೆ ಮಹೋತ್ಸವ ಒಂದು ಇತಿಹಾಸವಾಗಿದೆ. ಶ್ರೀಗಳು ಸರ್ವ ಧರ್ಮ ಸಮನ್ವಯ ಕುರಿತ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ದೇವ ಒಂದೇ ನಾಮ ಹಲವು ಎಂಬ ಸಂದೇಶ ಸಾರಲಾಗುತ್ತಿದೆ. ಹುಣ್ಣಿಮೆ ಮಹೋತ್ಸವದ ಮೂಲಕ ನಾಡಿನ ಜನರಿಗೆ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದ್ದಾರೆಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.       ಅವರು ಗುರುವಾರ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ಸರ್ವ ಧರ್ಮ ಸಮನ್ವಯ ವಿಷಯ ಕುರಿತ ೬ನೇ ದಿನದ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.       ಮನಷ್ಯನಿಗೆ ನಂಬಿಕೆ ಬಹಳ ಮುಖ್ಯವಾಗಿದ್ದು, ನಂಬಿಕೆ ಎಂಬುದು ಒಂದು ಮರದ ಬೇರು ಇದ್ದದಂತೆ. ನಾವೆಲ್ಲರೂ ಇಂತಹ ಶ್ರೀಗಳ ವಿಚ...

ಭಾರತ ವಿಶ್ವಕ್ಕೆ ಮಾದರಿಯಾಗಿದ್ದು, ಇಲ್ಲಿ ಎಂದಿಗೂ ಅರಾಜಕತೆ ರೂಪುಗೊಳ್ಳಲು ಸಾಧ್ಯವಿಲ್ಲ : ಬಿ.ಎಲ್ ಸಂತೋಷ್

Image
ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ  ಸರ್ವ ಧರ್ಮ ಸಮನ್ವಯ ವಿಷಯ ಕುರಿತ ೬ನೇ ದಿನದ ಸಂಜೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮಾತನಾಡಿದರು.       ಭದ್ರಾವತಿ : ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ  ಸರ್ವ ಧರ್ಮ ಸಮನ್ವಯ ವಿಷಯ ಕುರಿತ ೬ನೇ ದಿನದ ಸಂಜೆ ಕಾರ್ಯಕ್ರಮದಲ್ಲಿ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯವಹಿಸಿದ್ದರು.      ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮಾತನಾಡಿ, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಗಲಭೆ, ಯುದ್ಧಗಳನ್ನು ಗಮನಿಸಿದಾಗ ನಮ್ಮ ದೇಶ ಅತ್ಯಂತ ಬಲಿಷ್ಠವಾಗಿದ್ದು, ಈ ದೇಶದಲ್ಲಿ ಎಂದಿಗೂ ಅರಾಜಕತೆ ನಡೆಯುವುದಿಲ್ಲ. ಇದಕ್ಕೆ ಕಾರಣ ಸರ್ವಧರ್ಮಗಳ ಅನೇಕ ಮಹಾನ್ ಸಾಧು-ಸಂತರು ರೂಪಿಸಿಕೊಟ್ಟಿರುವ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯುತ್ತಿದ್ದೇವೆ. ಜಗತ್ತಿನ ಇತರೆ ರಾಷ್ಟ್ರಗಳಲ್ಲ...

ಕೂಡ್ಲಿಗೆರೆ ಗ್ರಾಮದಲ್ಲಿ `ಹಿಂದೂ ಸಂಗಮ'

Image
ಹಿಂದೂ ಸಂಗಮ ಆಯೋಜನ ಸಮಿತಿ, ಹೊಳೆಹೊನ್ನೂರು ವತಿಯಿಂದ ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಹಿಂದೂ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.       ಭದ್ರಾವತಿ : ಹಿಂದೂ ಸಂಗಮ ಆಯೋಜನ ಸಮಿತಿ, ಹೊಳೆಹೊನ್ನೂರು ವತಿಯಿಂದ ತಾಲೂಕಿನ ಕೂಡ್ಲಿಗೆರೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಪ್ರಾಂತ ಗೋ ರಕ್ಷ ಪ್ರಮುಖ್ ಸುನೀಲ್ ಕೆ.ಆರ್ ಕಾರ್ಕಳರವರು ಪಾಲ್ಗೊಂಡು ಮಾತನಾಡಿದರು.       ಕಾರ್ಯಕ್ರಮ ಆರಂಭಕ್ಕೂ ಮುನ್ನ ಶೋಭಾ ಯಾತ್ರೆ ನಡೆಯಿತು. ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. ವೇದಿಕೆ ಕಾರ್ಯಕ್ರಮದಲ್ಲಿ ಅಯೋಜನಾ ಸಮಿತಿ ಅಧ್ಯಕ್ಷ ಎಡೆಹಳ್ಳಿ ಮಹೇಶ್ವರಪ್ಪ, ಪ್ರಮುಖರಾದ ನರೇಂದ್ರ ಪ್ರಸಾದ್, ಜಮೀನ್ದಾರ್ ಕೂಡ್ಲಿಗೆರೆ ಹಾಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ತರಳಬಾಳು ಹುಣ್ಣಿಮೆ ಮಹೋತ್ಸವ : ಜನಪದ ನೃತ್ಯ ಅನನ್ಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ

Image
ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವದ ೬ನೇ ದಿನದ ಸಾಂಸ್ಕೃತಿಕ ಸ್ಪರ್ಧೆಗಳು ಕಾರ್ಯಕ್ರಮದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಚನ ನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಯಲ್ಲಿ ಅಪ್ಪರ್ ಹುತ್ತಾ ಅನನ್ಯ ವಿದ್ಯಾಸಂಸ್ಥೆಯ ಪ್ರೌಢಶಾಲೆ ವಿದ್ಯಾರ್ಥಿಗಳು ಭಾವಹಿಸಿ ಉತ್ತಮ ಪ್ರದರ್ಶನದೊಂದಿಗೆ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.       ಭದ್ರಾವತಿ : ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ  ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೬ನೇ ದಿನದ ಸಾಂಸ್ಕೃತಿಕ ಸ್ಪರ್ಧೆಗಳು ಕಾರ್ಯಕ್ರಮದ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ವಚನ ನೃತ್ಯ ಮತ್ತು ಜನಪದ ನೃತ್ಯ ಸ್ಪರ್ಧೆಯಲ್ಲಿ ಅಪ್ಪರ್ ಹುತ್ತಾ ಅನನ್ಯ ವಿದ್ಯಾಸಂಸ್ಥೆಯ ಪ್ರೌಢಶಾಲೆ ವಿದ್ಯಾರ್ಥಿಗಳು ಭಾವಹಿಸಿ ಉತ್ತಮ ಪ್ರದರ್ಶನದೊಂದಿಗೆ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.       ೮ನೇ ತರಗತಿ ವಿದ್ಯಾರ್ಥಿಗಳು ವಚನ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮವಾಗಿ ಪ್ರದರ್ಶನ ನೀಡಿದ್ದು, ೯ನೇ ತರಗತಿ ವಿದ್ಯಾರ್ಥಿಗಳ ಜನಪದ ನೃತ್ಯ ಪ್ರದರ್ಶಿಸಿ ಪ್ರಥಮ ಬಹುಮಾನ ಪಡೆದುಕೊಂಡು ಕೀರ್ತಿ ತಂದಿದ್ದಾರೆ. ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹ...

ಪತ್ರಕರ್ತರೊಂದಿಗೆ ಚರ್ಚೆ ನಡೆಸಿದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ

Image
ಭದ್ರಾವತಿಯಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ೬ನೇ ದಿನದ ಕಾರ್ಯಕ್ರಮದ ನಡುವೆ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಪತ್ರಕರ್ತರನ್ನು ಆಶೀರ್ವದಿಸಿ ಸುಮಾರು ಅರ್ಧ ತಾಸು ಚರ್ಚೆ ನಡೆಸಿದರು.       ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ  ಆಯೋಜಿಸಲಾಗಿರುವ ಶ್ರೀಮದುಜ್ಜಯಿನಿಸದ್ದರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ. ತರಳಬಾಳು ಹುಣ್ಣಿಮೆ ಮಹೋತ್ಸವದ ೬ನೇ ದಿನದ ಕಾರ್ಯಕ್ರಮದ ನಡುವೆ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಪತ್ರಕರ್ತರನ್ನು ಆಶೀರ್ವದಿಸಿ ಸುಮಾರು ಅರ್ಧ ತಾಸು ಚರ್ಚೆ ನಡೆಸಿದರು.       ಹಳೇನಗರ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಶಾಖೆ ಅಧ್ಯಕ್ಷ ಗಂಗಾನಾಯ್ಕ ಗೊಂದಿ, ಉಪಾಧ್ಯಕ್ಷ ಜಿ. ಸುಭಾಷ್‌ರಾವ್ ಸಿಂಧ್ಯಾ, ಪ್ರಧಾನ ಕಾರ್ಯದರ್ಶಿ ಬಸವರಾಜ, ಕಾರ್ಯದರ್ಶಿ ಅನಂತಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಎಚ್. ಶೈಲೇಶ್ ಕೋಠಿ, ಕೆ.ಆರ್ ಶಂಕರ್, ಕಿರಣ್ ಕುಮಾರ್ ಹಾಗು ಸಾಧು ಸದ್ಧರ್ಮ ತಾಲೂಕು ಅಧ್ಯಕ್ಷ ಕೆ.ಜಿ ರವಿಕುಮಾರ್, ಕೆ.ಜಿ ರಾಜಕುಮಾರ್, ಸಂಜೀವ್ ಕುಮಾರ್ ಸೇರಿದಂತೆ ಇನ್ನ...

ಫೆ.೧ರಂದು ಕಾಮ್ರೇಡ್ ಡಿ.ಸಿ ಮಾಯಣ್ಣ, ಕಾಳೇಗೌಡರಿಗೆ ನುಡಿನಮನ

Image
ಡಿ.ಸಿ ಮಾಯಣ್ಣ-ಕಾಳೇಗೌಡ      ಭದ್ರಾವತಿ : ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ವಿಐಎಸ್‌ಎಲ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಟಿಯುಸಿ ಸಂಯೋಜಿತ) ವತಿಯಿಂದ ಫೆ.೧ರ ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ವಿಐಎಸ್‌ಎಲ್/ಎಂಪಿಎಂ ಮತ್ತು  ಇತರೆ ಕಾರ್ಮಿಕ ಸಂಘಗಳ ಅಸಂಘಟಿತ/ಬಡ ಕಾರ್ಮಿಕರ, ದೀನದಲಿತರ, ರೈತ ಹೋರಾಟಗಳ ಹಾಗು ಪ್ರಗತಿಪರ ಹೋರಾಟಗಳ ನಾಯಕರಾದ ದಿವಂಗತ ಕಾಮ್ರೇಡ್ ಡಿ.ಸಿ ಮಾಯಣ್ಣ ಮತ್ತು ಕಾಮ್ರೇಡ್ ಕಾಳೇಗೌಡ ಅವರಿಗೆ ನುಡಿ-ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.       ನ್ಯೂಟೌನ್‌ನಲ್ಲಿರುವ ಅಸೋಸಿಯೇಷನ್ ಕಛೇರಿಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಸಾತಿ ಸುಂದರೇಶ್ ಉದ್ಘಾಟಿಸುವರು. ರಾಷ್ಟ್ರೀಯ ಮಂಡಳಿ ಸದಸ್ಯ ಕಾಮ್ರೇಡ್ ಪಿ.ವಿ ಲೋಕೇಶ್, ಕಾಮ್ರೇಡ್ ರಾಧಾ ಸುಂದರೇಶ್, ರಾಜ್ಯ ಸಹ ಕಾರ್ಯದರ್ಶಿ ಕಾಮ್ರೇಡ್ ಎಚ್.ಎಂ  ಸಂತೋಷ್ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 

ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಹಿಂದೂ ಸಂಗಮದ ಉದ್ದೇಶ : ಹಾರಿಕ ಮಂಜುನಾಥ್

Image
     ಭದ್ರಾವತಿ : ಹಿಂದೂ ಧರ್ಮದ ಮೌಲ್ಯಗಳನ್ನು ಪ್ರತಿಯೊಬ್ಬರೂ ಅರಿತುಕೊಂಡು ಪ್ರತಿಪಾದಿಸುವ ಮೂಲಕ ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಳ್ಳುವುದು ಹಿಂದೂ ಸಂಗಮದ ಉದ್ದೇಶವಾಗಿದೆ ಎಂದು ವಾಗ್ಮಿ ಹಾರಿಕ ಮಂಜುನಾಥ್ ಹೇಳಿದರು.    ಅವರು ಹುತ್ತಾ ಕಾಲೋನಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.     ಹಿಂದೂತ್ವದ ಭಾವನೆ ಮೂಡಬೇಕು‌. ಹಿಂದೂತ್ವದ ನೆಲೆಗಟ್ಟಿನಲ್ಲಿ ರೂಪುಗೊಂಡ ಸಂಸ್ಕೃತಿ, ಆಚಾರ, ವಿಚಾರಗಳು ಮುಂದಿನ ಪೀಳಿಗೆಗೂ ಮುಂದುವರೆಯಬೇಕೆಂದರು.     ಪ್ರಮುಖರಾದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ನಗರಸಭೆ ಸದಸ್ಯರಾದ ಆರ್. ಮೋಹನ್ ಕುಮಾರ್, ಸವಿತಾ ಉಮೇಶ್, ಮಾಜಿ ಸದಸ್ಯ ಎಚ್.ಬಿ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತರಳಬಾಳು ಜಗದ್ಗುರು ರೈತರ ನೆರವಿಗೆ ಮುಂದಾಗಿ ನಾಡಿಗೆ ಬೆಳಕಾಗಿದ್ದಾರೆ : ಈಶ್ವರ ಖಂಡ್ರೆ

Image
ಭದ್ರಾವತಿ ನಗರದ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಅಂಗವಾಗಿ ೫ನೇ ದಿನ ತರಳಬಾಳು ಮಹಾಮಂಟಪದ ರಾಷ್ಟ್ರಕವಿ ಕುವೆಂಪು ಮಹಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮತ್ತು ಸಮಾಜ ವಿಷಯ ಕುರಿತ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಪಾಲ್ಗೊಂಡು ಮಾತನಾಡಿದರು.       ಭದ್ರಾವತಿ: ತರಳಬಾಳು ಜಗದ್ಗುರು ರೈತರ ನೆರವಿಗೆ ಮುಂದಾಗಿ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಭಗಿರಥರಾಗಿದ್ದು, ಹಲವಾರು ಸಮಾಜಮುಖಿ ಕಾರ್ಯಗಳ ಮೂಲಕ ನಾಡಿಗೆ ಬೆಳಕಾಗಿದ್ದಾರೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಅರಣ್ಯ ಖಾತೆ ಸಚಿವರಾದ ಈಶ್ವರ್ ಖಂಡ್ರೆ ಬಣ್ಣಿಸಿದರು.       ಅವರು ಬುಧವಾರ ನಗರದ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಅಂಗವಾಗಿ ೫ನೇ ದಿನ ತರಳಬಾಳು ಮಹಾಮಂಟಪದ ರಾಷ್ಟ್ರಕವಿ ಕುವೆಂಪು ಮಹಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷಿ ಮತ್ತು ಸಮಾಜ ವಿಷಯ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.       ವಿದ್ಯೆ, ದಾಸೋಹ, ಧರ್ಮಪಾಲನೆಯ ನ್ಯಾಯದಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಶ್ರೀಗಳ ಕೊಡುಗೆ ಅನನ್ಯವಾಗಿದೆ. ತರಳಬಾಳು ಹುಣ್ಣಿಮೆ ಮಹೋತ್ಸವ ಈ ನಿಟ್ಟಿನಲ್ಲಿ ಇಂದಿನ ಯುವ ಪೀಳಿ...

ವೀರಗಾಸೆ ಮೂಲಕ ಹೆಣ್ಣು ಮಕ್ಕಳು ಸಹ ವೀರ ಹೆಜ್ಜೆ : ಡಾ. ಬಸವರಾಜ ನೆಲ್ಲಿಸರ

Image
ಭದ್ರಾವತಿ ನಗರದ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಅಂಗವಾಗಿ ೫ನೇ ದಿನ ತರಳಬಾಳು ಮಹಾಮಂಟಪದ ರಾಷ್ಟ್ರಕವಿ ಕುವೆಂಪು ಮಹಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಗಾಸೆ ಸ್ಪರ್ಧೆಗೆ ಜಾನಪದ ವಿದ್ವಾಂಸ ಡಾ. ಬಸವರಾಜ ನೆಲ್ಲಿಸರ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.       ಭದ್ರಾವತಿ :  ಪ್ರಸ್ತುತ ವೀರಗಾಸೆ ಕೇವಲ ಗಂಡು ಕಲೆಯಾಗಿ ಮಾತ್ರ ಉಳಿಯದೆ ಹೆಣ್ಣು ಮಕ್ಕಳು ಸಹ ವೀರ ಹೆಜ್ಜೆ ಹಾಕಿ ವೀರಾವೇಷದಿಂದ ನೃತ್ಯ ಮಾಡುತ್ತಾ ಬಂದಿರುವುದು ಹರ್ಷದ ಸಂಗತಿಯಾಗಿದೆ ಎಂದು ಜಾನಪದ ವಿದ್ವಾಂಸ ಡಾ. ಬಸವರಾಜ ನೆಲ್ಲಿಸರ ಹೇಳಿದರು.       ಅವರು ಬುಧವಾರ ನಗರದ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ಅಂಗವಾಗಿ ೫ನೇ ದಿನ ತರಳಬಾಳು ಮಹಾಮಂಟಪದ ರಾಷ್ಟ್ರಕವಿ ಕುವೆಂಪು ಮಹಾ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಗಾಸೆ ಸ್ಪರ್ಧೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.       ಜನಪದ ಕಲೆಗಳು ಸಮೂಹದಲ್ಲಿ ಬೆಳೆದಂತಹವು. ವೀರಭದ್ರನ ಅವತಾರವನ್ನು ಬಿಂಬಿಸುವಂತಹವು. ಇಂತಹ ಕಲೆಗಳನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕೆಂದರು.       ತರಳಬಾಳು ಹುಣ್ಣಿಮೆ ಮಹೋತ್ಸವದ ಮಹಾಪೋಷಕರೂ, ಸಾದು ಸದ್ಧರ್ಮ ಸಮಾಜದ ರಾಜ್ಯಾಧ್ಯಕ್ಷರು ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷರಾದ ಎಚ್.ಆರ್...

ಸಿಡಿಮದ್ದು ಪ್ರದರ್ಶನದ ವೇಳೆ ಅವಘಡದಿಂದ ವ್ಯಕ್ತಿಯೋರ್ವ ಮೃತಪಟ್ಟಿದ್ದ ಪ್ರಕರಣ

Image
೧೨ ಆರೋಪಿಗಳಿಗೆ ದಂಡ, ಮೃತರ ಕುಟುಂಬಕ್ಕೆ ೧ ಲಕ್ಷ, ಗಾಯಗೊಂಡಿದ್ದವರಿಗೆ ೫೦ ಸಾವಿರ ರು. ಪರಿಹಾರ  ಸಾಂದಾರ್ಭಿಕ ಚಿತ್ರ      ಭದ್ರಾವತಿ : ಕಳೆದ ೧೫ ವರ್ಷಗಳ ಹಿಂದೆ ಪಟಾಕಿ ಸಿಡಿಮದ್ದು ಪ್ರದರ್ಶನದ ವೇಳೆ ಅವಘಡ ಸಂಭವಿಸಿ ವೀಕ್ಷಿಸಲು ಬಂದಿದ್ದ ಓರ್ವ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ೪ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ೧೨ ಆರೋಪಿಗಳಿಗೆ  ದಂಡದ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.       ಹುಡ್ಕೋ ಕಾಲೋನಿ ನಿವಾಸಿ ಅನಿಲ್ ಕುಮಾರ್ (೩೯), ಜನ್ನಾಪುರ ನಿವಾಸಿ ಹರೀಶ್(೩೬), ಕೇರಳ ಕ್ಯಾಲಿಕಟ್, ವಾದಗರ್ ನಿವಾಸಿ ರಾಜೀವ್(೪೧), ನಗರದ ತರೀಕೆರೆ ರಸ್ತೆ, ಎಂ.ಎಂ ಕಾಂಪೌಂಡ್ ನಿವಾಸಿ ಬಾಬು(೪೫), ನ್ಯೂಟೌನ್ ನಿವಾಸಿ ಬಾಲನ್ ಪಿಲೈ(೭೧) ಮೃತಪಟ್ಟಿದ್ದಾರೆ, ನ್ಯೂ ಕಾಲೋನಿ ನಿವಾಸಿ ಶಾಮಕುಮಾರ್(೩೩), ಹೊಸಮನೆ ಹನುಮಂತನಗರ ನಿವಾಸಿ ಪ್ರಭಾಕರ್(೫೦), ಮೂಲೆಕಟ್ಟೆ ನಿವಾಸಿ ರಾಧಾಕೃಷ್ಣ(೩೭), ಕಾಗದನಗರ ನಿವಾಸಿ ವಿಜಯನ್(೪೨), ಭದ್ರಾ ಕಾಲೋನಿ ನಿವಾಸಿ ರಾಜಶೇಖರ್(೪೨), ಜನ್ನಾಪುರ ರಾಜಪ್ಪ ಬಡಾವಣೆ ನಿವಾಸಿ ಪ್ರಶಾಂv(೩೮) ಮತ್ತು ಹೊಸಮನೆ ವಿಜಯನಗರ ನಿವಾಸಿ ಕುಮಾರ್(೪೦) ಅವರಿಗೆ ತಲಾ ೧೬೨೫೦ ರು. ದಂಡ ವಿಧಿಸಲಾಗಿದ್ದು, ಘಟನೆಯಲ್ಲಿ ಮೃತಪಟ್ಟಿರುವ ದಿಲೀಪ್ ಕುಟುಂಬಕ್ಕೆ ೧ ಲಕ್ಷ ರು. ಹಾಗು ಗಾಯಗೊಂಡಿದ್ದ ಆರ್. ಕಿರಣ್‌ಗೆ ೫೦ ಸಾವಿರ ರು. ಪರಿಹಾರ ನೀಡಲು ಆದೇಶಿಸಲಾಗಿದೆ.  ...

ಸರ್ಕಾರಿ ಶಾಲೆಗಳಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ಲಭಿಸಿದಾಗ ದಾಖಲಾತಿ ಸಂಖ್ಯೆ ಹೆಚ್ಚಳ : ಬಿ.ಎಸ್ ಗಣೇಶ್

Image
ಭದ್ರಾವತಿ ನಗರಸಭೆ ೨೯ನೇ ವಾರ್ಡಿನ ಹೊಸ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ `ಚಿಣ್ಣರ ಸಂಭ್ರಮೋತ್ಸವ' ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.        ಭದ್ರಾವತಿ : ಸರ್ಕಾರಿ ಶಾಲೆಗಳಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ಲಭಿಸುವಂತಾಗಬೇಕು. ಆಗ ಮಾತ್ರ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಸಹ ಹೆಚ್ಚಳವಾಗಲಿದೆ. ಈ ನಿಟ್ಟಿನಲ್ಲಿ ಶಾಲೆಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಜವಾಬ್ದಾರಿ ಹೆಚ್ಚಿನದ್ದಾಗಿದೆ ಎಂದು ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್ ಹೇಳಿದರು.       ಅವರು ನಗರಸಭೆ ೨೯ನೇ ವಾರ್ಡಿನ ಹೊಸ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ `ಚಿಣ್ಣರ ಸಂಭ್ರಮೋತ್ಸವ' ಉದ್ಘಾಟಿಸಿ ಮಾತನಾಡಿದರು. ತಾಲೂಕಿನಲ್ಲಿ ಅತಿಹೆಚ್ಚು ೨೪೮ ಮಕ್ಕಳು ದಾಖಲಾತಿ ಹೊಂದಿರುವ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಗೆ ಈ ಶಾಲೆ ಪಾತ್ರವಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರದ ಹೆಚ್ಚಿನ ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಇವುಗಳನ್ನು ಸದ್ಬಳಕೆ...

ಸಾಮಾಜಿಕ, ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯವೇ ದಾರಿ ದೀಪ : ಡಾ. ಜ್ಯೋತಿ ಶಂಕರ್

Image
ನಾಲ್ಕನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವ : ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಉಪಸ್ಥಿತಿ ಶಿವಮೊಗ್ಗ ಶ್ರೀ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ, ಆನಂದಪುರಂ, ಶ್ರೀ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಸಿರಿಗೆರೆ ತರಳಬಾಳು ಜಗದ್ಗುರುಗಳು ದಿವ್ಯಸಾನಿಧ್ಯವಹಿಸಿದ್ದರು.       ಭದ್ರಾವತಿ:  ನಾವು ಎಷ್ಟೇ ಎತ್ತರಕ್ಕೆ ಏರಿದರೂ ನೀತಿ ಶಿಕ್ಷಣ ಅತ್ಯಂತ ಮುಖ್ಯ. ಮನುಷ್ಯನ ಮನಸ್ಸಿನ ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯ ದಾರಿ ತೋರಿಸುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಜ್ಯೋತಿ ಶಂಕರ್ ಹೇಳಿದರು.       ಅವರು ಮಂಗಳವಾರ ಸಂಜೆ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ನಾಲ್ಕನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಸಾಹಿತ್ಯ ಮತ್ತು ಶಿಕ್ಷಣ ವಿಷಯ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.       ಬದುಕಿಗೂ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ. ನಾವು ನಮ್ಮ ನಮ್ಮ ಕಾಯಕಕ್ಕೆ ಗೌರವ ನೀಡಿಕೊಳ್ಳಬೇಕು. ಮನಸ್ಸಿನಲ್ಲಿ ಕ್ಲೇಶವನ್ನು ಇಟ್ಟುಕೊಳ್ಳಬಾರದು. ಬದುಕು ಸುಂದರವಾಗಿರಬೇಕೆಂದರೆ ನಮ್ಮ ಸುತ್ತಮುತ್ತಲಿನವರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು. ಕಲಿ...

ವಿಟಮಿನ್, ಕಬ್ಬಿಣಾಂಶ ಮಾತ್ರೆ ನುಂಗಿದ ಮಕ್ಕಳಲ್ಲಿ ಹೊಟ್ಟೆನೋವು-ವಾಂತಿ

Image
ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ   ಭದ್ರಾವತಿ ಅರಳಿಹಳ್ಳಿ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು-ವಾಂತಿ ಕಾಣಿಸಿಕೊಂಡ ಪರಿಣಾಮ ಸುಮಾರು ೬೦ ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ  ಮಂಗಳವಾರ ನಡೆದಿದೆ.      ಭದ್ರಾವತಿ: ಸರ್ಕಾರಿ ಶಾಲೆ ಮಕ್ಕಳಲ್ಲಿ ಏಕಾಏಕಿ ಹೊಟ್ಟೆನೋವು-ವಾಂತಿ ಕಾಣಿಸಿಕೊಂಡ ಪರಿಣಾಮ ಸುಮಾರು ೬೦ ಮಕ್ಕಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಘಟನೆ  ಮಂಗಳವಾರ ನಡೆದಿದೆ.      ಅರಳಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಮಧ್ಯಾಹ್ನ ಊಟದ ಬಳಿಕ ಮಕ್ಕಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಊಟದ ಬಳಿಕ ಮಕ್ಕಳಿಗೆ ಶಿಕ್ಷಕರು ವಿಟಮಿನ್ ಮತ್ತು ಕಬ್ಬಿಣಾಂಶ(ಐರನ್) ಹೊಂದಿರುವ ಮಾತ್ರೆ  ವಿತರಿಸಿದ್ದರು. ಇದನ್ನು ನುಂಗಿದ ಬಳಿಕ ಮಕ್ಕಳು ಹೊಟ್ಟೆ ನೋವು ಎಂದು ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣ ಮಕ್ಕಳನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿದೆ.       ಸರ್ಕಾರದ ಆದೇಶದಂತೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಆರೋಗ್ಯ ಸುಧಾರಣೆಗಾಗಿ ಕಬ್ಬಿಣಾಂಶ(ಐರನ್), ಫೋಲಿಕ್ ಆಸಿಡ್ ಮತ್ತು ಅಲ್ಬೆಂಡಜೋಲ್(ಜಂತುಹುಳು ನಿವಾರಕ) ಮಾತ್ರೆಗಳನ್ನು ಮಧ್ಯಾಹ್ನದ ಊಟದ ನಂತರ ವಿತರಿಸಲಾಗುತ್ತದೆ. ರಕ್ತಹ...

ಎಂ.ಬಿ ಧರಣಿದರ ಗೌಡ

Image
ಎಂ.ಬಿ ಧರಣಿದರ ಗೌಡ       ಭದ್ರಾವತಿ : ನಗರದ ಮೈಸೂರು ಕಾಗದ ಕಾರ್ಖಾನೆಯ ನಿವೃತ್ತ ಪೋರ್ಮನ್, ಸಿದ್ದಾಪುರ ನಿವಾಸಿ ಎಂ.ಬಿ ಧರಣಿದರ ಗೌಡ(೬೭) ಮಂಗಳವಾರ ನಿಧನ ಹೊಂದಿದರು.    ಪತ್ನಿ, ಪುತ್ರಿ ಹಾಗು ಪುತ್ರ ಇದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಇವರ ಅಂತ್ಯಕ್ರಿಯೆ ಬುಧವಾರ ಸಿದ್ದಾಪುರ ರುದ್ರಭೂಮಿಯಲ್ಲಿ ನೆರವೇರಲಿದೆ. ಇವರ ನಿಧನಕ್ಕೆ ಎಂಪಿಎಂ ನಿವೃತ್ತ ನೌಕರರು, ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.   

೪ನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವ

Image
ಗಮನ ಸೆಳೆದ `ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರ' ಕುರಿತ ಭಾಷಣ ಸ್ಪರ್ಧೆ  ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ನಾಲ್ಕನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದ ಬೆಳಗಿನ ಸಾಂಸ್ಕೃತಿಕ ಸ್ಪರ್ಧೆಗಳು ಕಾರ್ಯಕ್ರಮದ ಭಾಷಣ ಸ್ಪರ್ಧೆಯನ್ನು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉದ್ಘಾಟಿಸಿದರು.        ಭದ್ರಾವತಿ:  ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ನಾಲ್ಕನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದ ಬೆಳಗಿನ ಸಾಂಸ್ಕೃತಿಕ ಸ್ಪರ್ಧೆಗಳು ಕಾರ್ಯಕ್ರಮದ ಭಾಷಣ ಸ್ಪರ್ಧೆಯನ್ನು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉದ್ಘಾಟಿಸಿದರು.       ರೋಟರಿ ಕ್ಲಬ್ ಸದಸ್ಯೆ ಕುಸುಮ ತೀರ್ಥಯ್ಯ, ಕಿರುತೆರೆ ನಟ, ರಂಗಕರ್ಮಿ ಅಪರಂಜಿ ಶಿವರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. `      ದೇಶದ ಅಭಿವೃದ್ಧಿಯಲ್ಲಿ ಕೈಗಾರಿಕೆಗಳ ಪಾತ್ರ' ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಪ್ರೌಢಶಾಲೆಗಳ ಸುಮಾರು ೫೦ ವಿದ್ಯಾರ್ಥಿಗಳು ಭಾಗವಹಿಸಿದ್ದ...

ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ವರ್ತನೆಗೆ ಬಿಜೆಪಿ ಯುವ ಮೋರ್ಚಾ ಖಂಡನೆ

Image
ಪ್ರತಿಭಟನೆ, ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ  ವಿಧಾನಮಂಡಲದ ವಿಶೇಷ ಅಧಿವೇಶನ ಸಂದರ್ಭದಲ್ಲಿ ರಾಜ್ಯಪಾಲರ ಕಡೆಗೆ ಕೈ ತೋರಿಸಿ ಅವಮಾನಕಾರಿ ವರ್ತನೆ ತೋರಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಭದ್ರಾವತಿಯಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಪರುಸಪ್ಪ ಕುರುಬರರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.       ಭದ್ರಾವತಿ: ವಿಧಾನಮಂಡಲದ ವಿಶೇಷ ಅಧಿವೇಶನ ಸಂದರ್ಭದಲ್ಲಿ ರಾಜ್ಯಪಾಲರ ಕಡೆಗೆ ಕೈ ತೋರಿಸಿ ಅವಮಾನಕಾರಿ ವರ್ತನೆ ತೋರಿರುವ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಪರುಸಪ್ಪ ಕುರುಬರರವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.       ಭದ್ರಾವತಿ ಮತ್ತು ಹೊಳೆಹೊನ್ನೂರು ಯುವ ಮೋರ್ಚಾ ಮಂಡಲ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಬಿ.ಕೆ ಹರಿಪ್ರಸಾದ್ ವರ್ತನೆಯಿಂದ ರಾಜ್ಯದ ಜನರು ತಲೆತಗ್ಗಿಸುವಂತಾಗಿದೆ. ಹಿರಿಯ ಮುಖಂಡರಾದ ಹರಿಪ್ರಸಾದ್‌ರವರು ಇತರರಿಗೆ ಮಾದರಿಯಾಗಬೇಕು. ಪರಿಷತ್ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು. ಇವರ ವರ್ತನೆಯನ್ನು ಯುವ ಮೋರ್ಚಾ ಖಂಡಿಸುವ ಜೊತೆಗೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ...

ತರಳಬಾಳು ಶ್ರೀಗಳಿಂದ ವೈರಾಗ್ಯ ಪ್ರಜ್ಞೆಯೊಂದಿಗೆ ಸಮಾಜ ತಿದ್ದುವ ಕಾರ್ಯ : ಸುತ್ತೂರು ಶ್ರೀ

Image
ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಮೂರನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ಸಿರಿಗೆರೆ ತರಳಬಾಳು ಜಗದ್ಗುರುಗಳು ಗೌರವ ಸಮರ್ಪಣೆ ಸಲ್ಲಿಸಿದರು.       ಭದ್ರಾವತಿ :  ಜನಸಾಮಾನ್ಯರಿಗೆ ಉತ್ತಮ ಆಶಯಗಳನ್ನು ನೀಡುವುದೇ ತರಳಬಾಳು ಹುಣ್ಣಿಮೆ ಮಹೋತ್ಸವದ ಉದ್ದೇಶವಾಗಿದ್ದು, ವೈರಾಗ್ಯ ಪ್ರಜ್ಞೆಯೊಂದಿಗೆ ಸಮಾಜವನ್ನು ತಿದ್ದುವ ಕಾರ್ಯ ಶ್ರೀ ಮಠದ ಜಗದ್ಗುರುಗಳಿಂದ ನಡೆಯುತ್ತಿದೆ ಎಂದು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು  ಹೇಳಿದರು.       ಶ್ರೀಗಳು ಸೋಮವಾರ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ಮೂರನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.       ತರಳಬಾಳು ಮಠ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ತನ್ನ ಧ್ಯೇಯೋದ್ದೇಶಗಳ ಮೂಲಕ ಜನಕಲ್ಯಾಣದ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಹಿರಿಯ ಗುರುಗಳು ಸಮಾಜದಲ್ಲಿ ಆತ್ಮವಿಶ್ವಾಸ ಮೂಡಿಸುವ ಬಲಿಷ್ಠ ಬುನಾದಿ ಹಾಕಿದ್ದರಿಂದಲೇ ಇಂದಿನ ಜಗದ್ಗುರುಗಳು ನಿರಂತರವಾಗಿ ಸಮ...

ತರಳಬಾಳು ಹುಣ್ಣಿಮೆ ಮಹೋತ್ಸವ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ

Image
ಭದ್ರಾವತಿಯಲ್ಲಿ ಆಯೋಜಿಸಲಾಗಿರುವ ಮೂರನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಗಿನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.       ಭದ್ರಾವತಿ: ಮೂರನೇ ದಿನದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಗಿನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.       ಸ್ಥಳೀಯ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಒಟ್ಟು ಆರು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ವಿಶೇಷವಾಗಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಸಂಕೋಚವಿಲ್ಲದೆ ಸಮರ್ಪಕ ಉತ್ತರಗಳನ್ನು ನೀಡಿದ್ದು ಗಮನ ಸೆಳೆಯಿತು.      ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ನಾಗೇಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ತಾಲೂಕು ಅಧ್ಯಕ್ಷ ಟಿ. ತಿಮ್ಮಪ್ಪ ಸೇರಿದಂತೆ ಪರಿಷತ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ರಸಪ್ರಶ್ನೆ ಕಾರ್ಯಕ್ರಮವನ್ನು ಬಿ.ಎಲ್. ಮೋಹನ್ ಯಶಸ್ವಿಯಾಗಿ ನಡೆಸಿಕೊಟ್ಟರು.      ರಸಪ್ರಶ್ನೆ ಸ್ಪರ್ಧೆಯ ವಿಜೇತರು:     ...

ರಾಷ್ಟ್ರೀಯ ಹಬ್ಬಗಳನ್ನು ಮನೆಯ ಹಬ್ಬದಂತೆ ಆಚರಿಸಿ : ಸಿರಿಗೆರೆ ಶ್ರೀ

Image
ಭದ್ರಾವತಿ ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ೩ನೇ ದಿನ ಸೋಮವಾರ ಮಹಾಮಂಟಪದ ಮುಂಭಾಗದಲ್ಲಿ ೭೭ನೇ ಗಣರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.      ಭದ್ರಾವತಿ: ನಗರದ ಹುಡ್ಕೋ ಕಾಲೋನಿ ವಿಐಎಸ್‌ಎಲ್ ಹೆಲಿಪ್ಯಾಡ್‌ನಲ್ಲಿ ಆಯೋಜಿಸಲಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ೩ನೇ ದಿನ ಸೋಮವಾರ ಮಹಾಮಂಟಪದ ಮುಂಭಾಗದಲ್ಲಿ ೭೭ನೇ ಗಣರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.      ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಂದೇಶ ನೀಡಿದರು.       ರಾಷ್ಟ್ರಿಯ ಹಬ್ಬಗಳನ್ನು ಕೇವಲ ಸರ್ಕಾರಿ ಕಾರ್ಯಕ್ರಮಗಳು ಎಂದು ಭಾವಿಸದೆ ಪ್ರತಿಯೊಂದು ಕುಟುಂಬವೂ ಅವುಗಳನ್ನು ಮನೆಯ ಹಬ್ಬದಂತೆ ಭಾವಿಸಿ ಆಚರಿಸಬೇಕೆಂದು ಕರೆ ನೀಡಿದರು.      ದೇಶಭಕ್ತಿ ಕೇವಲ ಭಾಷಣಕ್ಕೆ ಸೀಮಿತವಾಗಬಾರದು. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು, ಸಂವಿಧಾನದ ಮೌಲ್ಯಗಳನ್ನು ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೆಂದು ತಿಳಿಸಿ ಈ ನಿಟ್ಟಿನಲ್ಲಿ ಮಕ್ಕಳು, ಯುವಕರು ಹಾಗೂ ಹಿರಿಯರು ಸೇರಿ ಎಲ್ಲರೂ ಸ್ವಯಂಪ್ರೇರಿತವಾಗಿ ರಾಷ್ಟ್ರೀಯ ಹಬ್ಬಗಳಲ್ಲಿ ಭಾಗವಹಿಸಿ, ದೇಶದ ಏಕತೆ, ಸಮಾನತೆ ಮತ್ತು ಶ...

ಗೃಹರಕ್ಷಕದಳದವರು ತಮಗೆ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ವಿಶ್ವಾಸ ಉಳಿಸಿಕೊಳ್ಳಿ : ಪ್ರಕಾಶ್ ರಾಥೋಡ್

Image
ಘಟಕಾಧಿಕಾರಿ ಜಗದೀಶ್ ನೇತೃತ್ವದಲ್ಲಿ ಗೃಹರಕ್ಷಕದಳ ಕಛೇರಿಯಲ್ಲಿ ಗಣರಾಜ್ಯೋತ್ಸವ ಆಚರಣೆ  ಭದ್ರಾವತಿ ನ್ಯೂಟೌನ್ ಗೃಹರಕ್ಷಕ ದಳ ಕಛೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.        ಭದ್ರಾವತಿ : ಗೃಹರಕ್ಷಕ ದಳದವರು ತಮಗೆ ವಹಿಸುವ ಜವಾಬ್ದಾರಿಯನ್ನು ಇನ್ನೂ ಹೆಚ್ಚಿನ ಶಿಸ್ತು, ಬದ್ಧತೆಯಿಂದ ನಿರ್ವಹಿಸುವ ಮೂಲಕ ತಮ್ಮ ಮೇಲೆ ಹೊಂದಿರುವ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಕರೆ ನೀಡಿದರು.       ಅವರು ನ್ಯೂಟೌನ್ ಗೃಹರಕ್ಷಕ ದಳ ಕಛೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.       ಪೊಲೀಸರು ಮತ್ತು ಗೃಹರಕ್ಷಕ ದಳ ಇಬ್ಬರ ನಡುವೆ ಸ್ವಲ್ಪ ವ್ಯತ್ಯಾಸವಿರಬಹುದು. ಪೊಲೀಸರಿಗೆ ಸದಾ ಗೃಹರಕ್ಷಕ ದಳದ ನೆರವಿನ ಅಗತ್ಯವಿದೆ ಎಂಬುದನ್ನು ನನ್ನ ವೃತ್ತಿ ಬದುಕಿನಲ್ಲಿ ಕಂಡು ಕೊಂಡಿದ್ದೇನೆ. ಈ ಹಿನ್ನಲೆಯಲ್ಲಿ ಉಪಾಧೀಕ್ಷಕನಾಗಿ ಕರ್ತವ್ಯ ವಹಿಸಿಕೊಂಡ ನಂತರ ಪೊಲೀಸರ ಕರ್ತವ್ಯದಲ್ಲಿ ಹೆಚ್ಚಿನ ಪಾಲು ಗೃಹರಕ್ಷಕ ದಳದವರಿಗೆ ನೀಡುತ್ತಿದ್ದೇನೆ. ಕೆಲವು ಸಂದರ್ಭದಲ್ಲಿ ಗೃಹರಕ್ಷಕ ದಳದವರ...

ಗಣರಾಜ್ಯೋತ್ಸವ ನಮ್ಮ ಕರ್ತವ್ಯಗಳನ್ನು ನೆನಪಿಸುವ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ದಿನ : ಬಿ.ಕೆ ಸಂಗಮೇಶ್ವರ

Image
ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ೭೭ನೇ ಗಣ ರಾಜ್ಯೋತ್ಸವದಲ್ಲಿ ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಪರುಸಪ್ಪ ಕುರುಬರ ಧ್ವಜಾರೋಹಣ ನೆರವೇರಿಸಿದರು.       ಭದ್ರಾವತಿ: ಗಣರಾಜ್ಯೋತ್ಸವ ಎಂಬುದು ಕೇವಲ ಹಬ್ಬವಲ್ಲ. ನಮ್ಮ ಕರ್ತವ್ಯಗಳನ್ನು ನೆನಪಿಸುವ ದಿನ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ದಿನ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ ಹೇಳಿದರು.       ಅವರು ಸೋಮವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ೭೭ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.  ೧೯೫೦ ಜನವರಿ ೨೬ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರು ರಚಿಸಿದ ದೇಶದ ಸಂವಿಧಾನ ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮತ್ತು ನ್ಯಾಯ ಎಂಬ ಮಹಾನ್ ಮೌಲ್ಯಗಳನ್ನು ನೀಡಿದೆ. ಈ ಮೂಲಕ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು, ವಿಚಾರವನ್ನು ಸಾರ್ವಜನಿಕರಲ್ಲಿ ಅಭಿವ್ಯಕ್ತಿಗೊಳಿಸಿದ್ದೇವೆ ಎಂದರು.       ನಮ್ಮ ದೇಶದ ಸಂವಿಧಾನ ವಿಶ್ವದ ಬೃಹತ್ ಗ್ರಂಥಗಳಲ್ಲಿ ಮೊಟ್ಟ ಮೊದಲನೆಯದ್ದಾಗಿದೆ. ದೇಶದ ಪ್ರಜೆಗಳಾದ ನಾವುಗಳು ಒಬ್ಬರಿಗೊಬ್ಬ...